ಅನ್ನಭಾಗ್ಯಕ್ಕೆ ಇಂದಿಗೆ 14ದಿನ; 78 ಲಕ್ಷ ಬಿಪಿಎಲ್ ಫಲಾನುಭವಿಗಳಿಗೆ 456 ಕೋಟಿ ರೂ. ಜಮಾ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಇಂದಿಗೆ 14 ದಿನ ಕಳೆದಿದೆ. ಜುಲೈ 10ರಂದು ಸಿಎಂ ಸಿದ್ದರಾಮಯ್ಯನವರು ಅನ್ನಭಾಗ್ಯ ಹಣ ವರ್ಗಾವಣೆಗೆ ಚಾಲನೆ ನೀಡಿದ್ದರು.
ಬೆಂಗಳೂರು (ಜು.24) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಇಂದಿಗೆ 14 ದಿನ ಕಳೆದಿದೆ. ಜುಲೈ 10ರಂದು ಸಿಎಂ ಸಿದ್ದರಾಮಯ್ಯನವರು ಅನ್ನಭಾಗ್ಯ ಹಣ ವರ್ಗಾವಣೆಗೆ ಚಾಲನೆ ನೀಡಿದ್ದರು.
ಅನ್ನಭಾಗ್ಯಕ್ಕೆ ಚಾಲನೆ ದೊರೆತಾಗಿನಿಂದ ಇಲ್ಲಿಯವರೆಗೂ ರಾಜ್ಯ ಸರ್ಕಾರ 24 ಜಿಲ್ಲೆಗಳ ಒಟ್ಟು 78 ಲಕ್ಷ ಬಿಪಿಎಲ್ ಫಲಾನುಭವಿಗಳಿಗೆ 456 ಕೋಟಿ ರೂ. ಜಮಾ ಮಾಡಲಾಗಿದೆ. 24 ಜಿಲ್ಲೆಗಳ 78 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ 456.73 ಕೋಟಿರೂ. ಜಮಾ ಮಾಡಲಾಗಿದೆ. ಇನ್ನುಳಿದ 7 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹುಬ್ಬಳ್ಳಿ: ಅನ್ನಭಾಗ್ಯದ ಹಣಕ್ಕಾಗಿ ಬ್ಯಾಂಕ್ ಎದುರು ಸಾಲುಗಟ್ಟಿದ ಮಹಿಳೆಯರು!
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ ಮಾಹಿತಿಯಂತೆ ಒಂದು ಕಡತವು ಕೇವಲ 20,000 ನೇರ ಲಾಭ ವರ್ಗಾವಣೆಯನ್ನು ಪ್ರಕ್ರಿಯೆಗೊಳಿಸಬಹುದು. ಪ್ರತಿ ಜಿಲ್ಲೆಗೆ ಬಹು ಕಡತ ರಚಿಸಬೇಕಾಗಿದೆ. ಹೀಗಾಗಿ ಇದು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ, ಪಾವತಿಗಳು ವಿಳಂಬವಾಗಬಹುದು. ಉಳಿದ ಜಿಲ್ಲೆಗಳಿಗೆ ಎಂಟು ದಿನಗಳಲ್ಲಿ ಹಣ ವರ್ಗಾವಣೆ ಪೂರ್ಣಗೊಳ್ಳಲಿವೆ ಎಂದು ತಿಳಿಸಿದೆ.
ಚಾಮರಾಜನಗರ, ವಿಜಯಪುರ, ಹಾಸನ, ಚಿಕ್ಕಬಳ್ಳಾಪುರ, ಉಡುಪಿ, ವಿಜಯನಗರ, ಮತ್ತು ಶಿವಮೊಗ್ಗ ಜಿಲ್ಲೆಗಳು ಇನ್ನೂ ಬಾಕಿಯಿವೆ. ಈ ಜಿಲ್ಲೆಗಳಲ್ಲಿ ಒಟ್ಟು 18.86 ಲಕ್ಷ ಫಲಾನುಭವಿಗಳಿದ್ದಾರೆ. 1.28 ಕೋಟಿ ಬಿಪಿಎಲ್ ಕಾರ್ಡ್ ದಾರರಿಂದ ಸದ್ಯ 97,27,160 ಮಂದಿ ಯೋಜನೆಗೆ ಅರ್ಹರಾಗಿದ್ದಾರೆ
ಹಸಿವು ಮುಕ್ತ, ಸ್ವಾಭಿಮಾನದ ಬದುಕಿಗೆ ಅನ್ನಭಾಗ್ಯ ಆಸರೆ-ಸಚಿವ ಎಚ್ಕೆ ಪಾಟೀಲ್
ಕಳೆದ ಮೂರು ತಿಂಗಳಿನಿಂದ ಯೋಜನೆಯ ಪ್ರಯೋಜನ ಪಡೆಯದ ಸುಮಾರು 8.7 ಲಕ್ಷ ಪಡಿತರ ಚೀಟಿದಾರರನ್ನು ಇದೀಗ ಯೋಜನೆಯಿಂದ ಹೊರಗಿಡಲಾಗಿದೆ. ರಾಜ್ಯದಲ್ಲಿ. ಸುಮಾರು 21 ಲಕ್ಷ ಕಾರ್ಡ್ ಹೊಂದಿರುವವರು ಇನ್ನೂ ಅರ್ಹತೆ ಪಡೆದಿಲ್ಲ ಹೆಚ್ಚಿನವರು ತಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಲ್ಲ. ಕೆಲವರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಇಂಥವರು ಆರ್ಹರಾಗಿದ್ದೂ ಅನ್ನಭಾಗ್ಯದ ಹಣ ಜಮೆ ಮಾಡಲು ಸಾಧ್ಯವಾಗಿರುವುದಿಲ್ಲ. ಅನ್ನಭಾಗ್ಯದ ಹಣ ಪಡೆಯಲು ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದುವಂತೆ ಸರ್ಕಾರ ತಿಳಿಸಿದೆ.