Asianet Suvarna News Asianet Suvarna News

ದಸರಾ, ದೀಪಾವಳಿ ಹಬ್ಬ ಬಂದ್ರೂ ಬಾರದ ಸಂಬಳ‌: ಸಿದ್ದು ಸರ್ಕಾರದ ವಿರುದ್ಧ ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು

ಬಡ ಅಂಗನವಾಡಿ ಕಾರ್ಯಕರ್ತೆಯರು ಗೌರವಧನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಹಬ್ಬ ಆಚರಣೆ ಮಾಡಲು ಹಣ ಇಲ್ಲ ಎಂದು ತಮ್ಮ ಅಸಮಾಧಾನವನ್ನ ಹೊರಹಾಕಿದ ಅಂಗನವಾಡಿ ಕಾರ್ಯಕರ್ತೆಯರು 
 

Anganwadi Workers Slams Siddaramaiah's Government For Not Get Salary grg
Author
First Published Oct 5, 2024, 11:27 PM IST | Last Updated Oct 5, 2024, 11:27 PM IST

ಬೆಂಗಳೂರು(ಅ.05): ಅಂಗನವಾಡಿ ಕಾರ್ಯಕರ್ತೆಯರು ಮತ್ತೊಮ್ಮೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೌದು,  ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಲು ಕಾರ್ಯಕರ್ತೆಯರು ಮುಂದಾಗಿದ್ದಾರೆ. ದಸರಾ, ದೀಪಾವಳಿ ಹಬ್ಬ ಬಂದ್ರೂ ಸಂಬಳ‌ ನೀಡದ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. 

ಹಲವು ಜಿಲ್ಲೆಯ ನೌಕರರಿಗೆ 6 ತಿಂಗಳಿಂದ ಸಂಬಳ ಜೊತೆಗೆ ಮೊಟ್ಟೆ ದುಡ್ಡು ಸಿಗದ ಹಿನ್ನಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಕಿಡಿ ಕಾರಿದ್ದಾರೆ.  ಬಡ ಅಂಗನವಾಡಿ ಕಾರ್ಯಕರ್ತೆಯರು ಗೌರವಧನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಹಬ್ಬ ಆಚರಣೆ ಮಾಡಲು ಹಣ ಇಲ್ಲ ಎಂದು ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. 

13,500 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕ; ಸಿಎಂ ಸಿದ್ದರಾಮಯ್ಯ

ಫಲಾನುಭಿಗಳಿಗೆ ಮೊಟ್ಟೆ ಕೂಡ ನೌಕರರ ಹಣದಲ್ಲೇ ಖರೀದಿ ಮಾಡಿ ಕೊಡ್ತಿದ್ದಾರೆ. ಇನ್ಮುಂದೆ ನಾವು ಮೊಟ್ಟೆ ಕೊಡಲು ಸಾಧ್ಯ ಇಲ್ಲ. ಹೀಗಾಗಿ ಸಂಬಳ, ಮೊಟ್ಟೆ ಹಣ ಹಾಕಿ ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios