ಅಂಗನವಾಡಿ ಕೇಂದ್ರಗಳಿಗೆ ನಾಲ್ಕು ವರ್ಷದ ಹಿಂದೆ ನೀಡಿದ್ದ ಸ್ಮಾರ್ಚ್ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸಲು ಆಗದಿರುವುದರಿಂದ ಅವನ್ನು ಹಿಂದಿರುಗಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ ಪತ್ರ ಬರೆದಿದೆ.
ಬೆಂಗಳೂರು (ಏ.4) : ಅಂಗನವಾಡಿ ಕೇಂದ್ರಗಳಿಗೆ ನಾಲ್ಕು ವರ್ಷದ ಹಿಂದೆ ನೀಡಿದ್ದ ಸ್ಮಾರ್ಚ್ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸಲು ಆಗದಿರುವುದರಿಂದ ಅವನ್ನು ಹಿಂದಿರುಗಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ ಪತ್ರ ಬರೆದಿದೆ.
ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು 4 ವರ್ಷದ ಹಿಂದೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಮೊಬೈಲ್ ವಿತರಣೆ ಮಾಡಲಾಗಿತ್ತು. ಫಲಾನುಭವಿಗಳ ನೋಂದಣಿ, ಕುಟುಂಬ ಸರ್ವೇ, ಆಹಾರ ಹಂಚಿಕೆ ಮತ್ತಿತರ ಚಟುವಟಿಕೆಗಳನ್ನು ಆ್ಯಪ್‌ನಲ್ಲಿ ನೋಂದಣಿ ಮಾಡಬೇಕಿತ್ತು. ಇಲ್ಲಿಯವರೆಗೂ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಈ ಮೊಬೈಲ್‌ಗಳಲ್ಲಿ ನೋಂದಣಿ ಮಾಡುವುದು ಕಷ್ಟಕರವಾಗಿದೆ. ಕಳಪೆ ಬ್ಯಾಟರಿ, ನೆಟ್‌ವರ್ಕ್ ಸಮಸ್ಯೆ ಮತ್ತಿತರ ಕಾರಣಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೇ ಮೊಬೈಲ್ ಹಿಂದಿರುಗಿಸಲಿದ್ದೇವೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಇದೀಗ ಚುನಾವಣೆಗೆ ಸಂಬಂಧಿಸಿದ ಗರುಡ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೆಲಸ ಮಾಡಲು ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಇ-ಸಮೀಕ್ಷೆ ಆ್ಯಪ್ ಅನ್ನೂ ಡೌನ್‌ಲೋಡ್ ಮಾಡಿಕೊಂಡು ವಿಷಯ ನಮೂದಿಸಬೇಕೆಂದು ತಿಳಿಸಲಾಗಿದೆ. ಆದರೆ ಕಳಪೆ ಗುಣಮಟ್ಟದ ಮೊಬೈಲ್‌ನಲ್ಲಿ ಇಷ್ಟೆಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಂಗನವಾಡಿ ನೌಕರರಿಗೆ ಗುಡ್ ನ್ಯೂಸ್: ಗ್ರ್ಯಾಚ್ಯುಟಿ ಕೊಡಲು ಆರ್ಥಿಕ ಇಲಾಖೆ ಲಿಖಿತ ಆದೇಶ
