‘ಒಮ್ಮೆ ನನ್ನ ತಂದೆ ನಾರಾಯಣ ಶಾಸ್ತ್ರಿಗಳು ಮಗನೇ ನಿನಗೆ ರಾಜಯೋಗವಿದೆ ಎಂದು ಹೇಳಿದ್ದರು. ಆದರೆ, 59ನೇ ವರ್ಷಕ್ಕೆ ಒಂದು ಕಂಟಕವಿದೆ. ಅದರಿಂದ ಪಾರಾದರೆ ಮಾತ್ರ ಬಹುಕಾಲ ಬದುಕುತ್ತೀಯಾ ಎಂದು ಹೇಳಿದ್ದರು’ ಎಂದು ಸ್ವತಃ ಅನಂತಕುಮಾರ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

ಅನಂತ್ ಕುಮಾರ್‌ ಅವರ ತಂದೆ ರೈಲ್ವೆ ಉದ್ಯೋಗಿಯಾಗಿದ್ದರೂ, ಮನೆತನದ ಪರಂಪರೆಯಂತೆ ಜ್ಯೋತಿಷ್ಯ ಕೂಡ ಹೇಳುತ್ತಿದ್ದರು. ಅವರೇ ಒಮ್ಮೆ ಮಗನ ಜಾತಕ ನೋಡಿ ‘ನಿನಗೆ 59ನೇ ವರ್ಷಕ್ಕೆ ಕಂಟಕವಿದೆ’ ಎಂದು ಹೇಳಿದ್ದರು. ಅದರಂತೆ 59ನೇ ವರ್ಷಕ್ಕೆ ಅನಂತಕುಮಾರ್‌ ವಿಧಿವಶರಾಗಿದ್ದಾರೆ.

‘ಒಮ್ಮೆ ನನ್ನ ತಂದೆ ನಾರಾಯಣ ಶಾಸ್ತ್ರಿಗಳು ಮಗನೇ ನಿನಗೆ ರಾಜಯೋಗವಿದೆ ಎಂದು ಹೇಳಿದ್ದರು. ಆದರೆ, 59ನೇ ವರ್ಷಕ್ಕೆ ಒಂದು ಕಂಟಕವಿದೆ. ಅದರಿಂದ ಪಾರಾದರೆ ಮಾತ್ರ ಬಹುಕಾಲ ಬದುಕುತ್ತೀಯಾ ಎಂದು ಹೇಳಿದ್ದರು’ ಎಂದು ಸ್ವತಃ ಅನಂತ್ ಕುಮಾರ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

"

ಇನ್ನು, ಅನಂತ್ ಕುಮಾರ್‌ ಅವರ ತಾಯಿ ಗಿರಿಜಾ ಶಾಸ್ತ್ರಿ ಕೂಡ ಮಗ ಕೇಂದ್ರ ಸಚಿವನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು! ಅನಂತಕುಮಾರ್‌ 1989ರಲ್ಲಿ ತೇಜಸ್ವಿನಿ ಅವರನ್ನು ಪ್ರೀತಿಸಿ ವಿವಾಹ ಆಗಲು ನಿಶ್ಚಯಿಸಿದಾಗ, ತಾಯಿ ಗಿರಿಜಾ ಶಾಸ್ತ್ರಿ ಬೀಗರ ಎದುರು ಹೋಗಿ ‘ಚಿಂತೆ ಮಾಡಬೇಡಿ, ನನ್ನ ಮಗ ಕೇಂದ್ರದಲ್ಲಿ ಮಂತ್ರಿ ಆಗುತ್ತಾನೆ’ ಎಂದು ಹೇಳಿದ್ದರು ಎಂದು ಆಪ್ತರು ನೆನಪಿಸಿಕೊಳ್ಳುತ್ತಾರೆ.

ಮದುವೆ ಆದ ನಂತರ ಅನಂತ್‌ ಬಿಜೆಪಿ ಕಟ್ಟಲು ಊರೂರು ಅಲೆಯುತ್ತಿದ್ದರೆ, ತೇಜಸ್ವಿನಿ ಕುಟುಂಬ ನಡೆಸಲು ನೌಕರಿ ಮಾಡುತ್ತಿದ್ದರು. 1996ರಲ್ಲಿ ಸಂಸದರಾದ ಅನಂತ್‌ ಮಂತ್ರಿ ಆಗಿದ್ದು 39ನೇ ವರ್ಷಕ್ಕೆ. ತಾಯಿ ಗಿರಿಜಾ ಶಾಸ್ತ್ರಿ ಕೊಟ್ಟಭಗವದ್ಗೀತೆ ಪುಸ್ತಕವನ್ನು ಜತನದಿಂದ ಇಟ್ಟುಕೊಂಡಿದ್ದ ಅನಂತ್‌, ಆಸ್ಪತ್ರೆಯ ಕೊನೆಯ ದಿನಗಳವರೆಗೂ ಅದನ್ನು ತಪ್ಪದೆ ಓದುತ್ತಿದ್ದರು.

-ಪ್ರಶಾಂತ್‌ ನಾತು, ನವದೆಹಲಿ