Asianet Suvarna News Asianet Suvarna News

ಬರ ಪರಿಸ್ಥಿತಿ ನಡುವೆ ರೈತರಿಂದ ಖರೀದಿಸುವ ಹಾಲಿಗೆ ಬಮೂಲ್ ₹2 ಕಡಿತ!

ಬರ ಪರಿಸ್ಥಿತಿಯ ನಡುವೆಯೇ ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಕಡಿತಗೊಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ನ.1ರಿಂದಲೇ ಜಾರಿಯಾಗುವಂತೆ ಆದೇಶಿಸಿದೆ.

Amid the drought conditions the milk bought from the farmers will be reduced by 2 rupis rav
Author
First Published Nov 7, 2023, 5:04 AM IST

ಬೆಂಗಳೂರು (ನ.7): ಬರ ಪರಿಸ್ಥಿತಿಯ ನಡುವೆಯೇ ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಕಡಿತಗೊಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ನ.1ರಿಂದಲೇ ಜಾರಿಯಾಗುವಂತೆ ಆದೇಶಿಸಿದೆ.

ಬಮೂಲ್‌ ಅಕ್ಟೋಬರ್‌ 31ರವರೆಗೆ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್‌ ಹಾಲಿಗೆ ₹34.15 ನೀಡುತ್ತಿತ್ತು. ಆದರೆ, ನ.1ರಿಂದ ಒಕ್ಕೂಟವು ₹32.15 ಬೆಲೆ ನಿಗದಿ ಮಾಡಿದ್ದು, ₹2 ಕಡಿತಗೊಳಿಸಿದೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 1.10 ಲಕ್ಷ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ರಾಜ್ಯದ ಜನತೆಗೆ ಹಾಲಿನ ದರ ಏರಿಕೆ ಶಾಕ್? ಪ್ರತಿ ಲೀ.ಗೆ 5 ರೂ. ಹೆಚ್ಚಳ?

 

ಬಮೂಲ್‌ ಪ್ರತಿದಿನ ಅಂದಾಜು 15 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಈ ಪೈಕಿ 10 ಲಕ್ಷ ಲೀಟರ್‌ ಹಾಲು ಮಾತ್ರ ನೇರವಾಗಿ ಮಾರಾಟವಾಗುತ್ತಿದ್ದು, ಉಳಿದ ಹಾಲನ್ನು ಹಾಲಿನ ಪುಡಿ ಮತ್ತು ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ಆದರೆ, ಗ್ರಾಹಕರಿಂದ ಹೆಚ್ಚುವರಿಯಾಗಿ ಸಂಗ್ರಹಿಸುತ್ತಿರುವ ₹3 ಮಾರಾಟವಾದ 10 ಲಕ್ಷ ಲೀಟರ್‌ ಜೊತೆಗೆ ಹಾಲಿನ ಉತ್ಪನ್ನವಾಗುತ್ತಿರುವ ಉಳಿದ 5 ಲಕ್ಷ ಲೀಟರ್‌ಗೂ ಕೊಡಬೇಕಿದೆ. ಇದರಿಂದಾಗಿ ಬಮೂಲ್‌ ಪ್ರತಿ ಲೀಟರ್‌ಗೆ ₹1.85 ಸರಾಸರಿ ನಷ್ಟ ಅನುಭವಿಸುತ್ತಿದೆ.

ಹೀಗಾಗಿ ಒಕ್ಕೂಟಕ್ಕೆ ತೀವ್ರ ನಷ್ಟವಾಗಿದ್ದು, ಏಪ್ರಿಲ್‌ 1ರಿಂದ ಈವರೆಗೆ ಇದುವರೆಗೆ ₹60 ಕೋಟಿ ನಷ್ಟ ಅನುಭವಿಸಿದೆ. ಹಾಲು ಖರೀದಿ, ಮಾರಾಟ ಪ್ರಕ್ರಿಯೆಯಲ್ಲಿ ಬಮೂಲ್‌ ಅನುಭವಿಸುತ್ತಿರುವ ನಷ್ಟ ಸರಿದೂಗಿಸುವ ಉದ್ದೇಶದಿಂದ ರೈತರಿಂದ ಖರೀದಿಸುತ್ತಿದ್ದ ಪ್ರತಿ ಲೀಟರ್‌ ಹಾಲಿನಲ್ಲಿ ತಲಾ ₹2 ಕಡಿತಗೊಳಿಸಲಾಗಿದೆ ಎಂದು ಬಮೂಲ್‌ ಮೂಲಗಳು ತಿಳಿಸಿವೆ.

ಕ್ಷೇತ್ರ ಬದಲಾಯಿಸೋಕೆ ಇದು ಟೂರಿಂಗ್‌ ಟಾಕೀಸ್‌ ಅಲ್ಲ: ಚನ್ನಪಟ್ಟಣ ಬಿಟ್ಟು ಹೋಗೊಲ್ಲ: ಕುಮಾರಸ್ವಾಮಿ

Follow Us:
Download App:
  • android
  • ios