ಚೀನಾದಲ್ಲಿ ಸಿಲುಕಿಕೊಂಡ ಶಿರಾ ವಿದ್ಯಾರ್ಥಿ!
ವಿಶ್ವದಾದ್ಯಂತ ಕೊರೋನಾ ವೈರಸ್ ಭೀತಿ| 20 ದೇಶಗಳಿಗೆ ಹಬ್ಬಿದ ಮಾರಕ ವೈರಸ್| ಚೀನಾದಲ್ಲಿ ಸಿಲುಕಿಕೊಂಡ ಶಿರಾ ವಿದ್ಯಾರ್ಥಿ|
ಶಿರಾ[ಫೆ.01]: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್‌ನಿಂದಾಗಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಶಿರಾದ ವಿದ್ಯಾರ್ಥಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾನೆ.
ನಗರದ ಹನುಮಾನ್ ಮೆಡಿಕಲ್ಸ್‌ನ ಸನತ್ ಬಾಬು ಎಂಬುವರ ಪುತ್ರ ಬಿ.ಎಸ್.ಶಾಂತನ್ ವುಹಾನ್‌ನ ವæೖದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ವæೖದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಸದ್ಯ ವುಹಾನ್‌ಲ್ಲಿ ಕೊರೋನಾ ವೈರಾಣು ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಆಡಳಿತ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹೋಗಲು ಬಿಡುತ್ತಿಲ್ಲ. ವಿಮಾನ ಪ್ರಯಾಣಕ್ಕಾಗಿ ವುಹಾನ್ ನಗರದಿಂದ ಸುಮಾರು 50 ಕಿ.ಮೀ. ದೂರ ಪ್ರಯಾಣಿಸಬೇಕಿದ್ದು, ಸದ್ಯ ಅಲ್ಲಿ ಯಾವುದೇ ವಾಹನಗಳು ಓಡಾಡುತ್ತಿಲ್ಲ. ಇದರಿಂದ ಶಾಂತನ್ ಕೂಡ ಆತಂಕದಲ್ಲಿದ್ದಾರೆ.
ತಮ್ಮ ಪುತ್ರನನ್ನು ಆದಷ್ಟುಬೇಗ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಕೊರೋನಾ ವೈರಾಣು ಸೋಂಕು ಹಬ್ಬುತ್ತಿರುವ ಸುದ್ದಿ ಹೊರಬಿದ್ದಾಗಿನಿಂದ ವುಹಾನ್‌ನಲ್ಲಿ ಮೆಡಿಕಲ್ ಓದುತ್ತಿರುವ ನನ್ನ ಪುತ್ರ ಹಾಸ್ಟೆಲ್‌ನಿಂದ ಹೊರಬಾರದಂತಾಗಿದೆ. ದಿನನಿತ್ಯ ನಮಗೆ ಕರೆ ಮಾಡಿ ಅಲ್ಲಿಂದ ಕರೆಸಿಕೊಳ್ಳಿ ಎಂದು ಹೇಳುತ್ತಿದ್ದಾನೆ. ಆದಷ್ಟುಬೇಗ ಕೇಂದ್ರ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಆತನನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು.
- ಸನತ್ ಬಾಬು, ಶಾಂತನ್ ತಂದೆ