ಮಂಡ್ಯ(ಮೇ.03): ಮುಂಬೈನಿಂದ ಆ್ಯಂಬುಲೆನ್ಸ್‌ನಲ್ಲಿ ಮೃತದೇಹ ತಂದು ಮಂಡ್ಯದಲ್ಲಿ ಅಂತ್ಯಕ್ರಿಯೆ ನಡೆಸಿದ ಪ್ರಕರಣ ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ನಾಲ್ವರಿಗೆ ಕೊರೋನಾ ದೃಢಪಡುತ್ತಿದ್ದಂತೆ ಮೇಲುಕೋಟೆಯ ಬಿ.ಕೊಡಗಹಳ್ಳಿಯನ್ನು ನಿರ್ಬಂಧಿತ ವಲಯವನ್ನಾಗಿ ಘೋಷಿಸಲಾಗಿದೆ.

ಏತನ್ಮಧ್ಯೆ, ಆ್ಯಂಬುಲೆನ್ಸ್‌ ಅನ್ನು ಮಾರ್ಗ ಮಧ್ಯೆ ಕೆಲವೆಡೆ ನಿಲ್ಲಿಸಿ ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು, ವ್ಯಕ್ತಿಯೊಬ್ಬ ಮಾರ್ಗ ಮಧ್ಯೆ ಕೆ.ಆರ್‌.ಪೇಟೆಯಲ್ಲಿ ಆ್ಯಂಬುಲೆನ್ಸ್‌ನಿಂದ ಇಳಿದು ಹೋಗಿರುವುದು ಹಾಗೂ ಅಂತ್ಯಕ್ರಿಯೆ ವೇಳೆ ಕನಿಷ್ಠ ಸುರಕ್ಷತಾ ಕಿಟ್‌ ನೀಡದೆ ಪೌರ ಕಾರ್ಮಿಕನನ್ನು ಅಂತ್ಯಕ್ರಿಯೆ ವೇಳೆ ಮುಂದೆಬಿಟ್ಟಅಧಿಕಾರಿಗಳ ಕ್ರಮ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸೋಂಕು ಗುಣ: ಕರ್ನಾಟಕ ದೇಶದಲ್ಲೇ ನಂ. 2ನೇ ಸ್ಥಾನ!

ಆಕ್ರೋಶ: ಮೃತದೇಹವನ್ನು ತರಲು ಅವಕಾಶ ಮಾಡಿಕೊಟ್ಟಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಜತೆಗೆ, ಈ ಅಂತ್ಯಸಂಸ್ಕಾರ ರಾಜಕೀಯ ತಿಕ್ಕಾಟಕ್ಕೂ ದಾರಿ ಮಾಡಿಕೊಟ್ಟಿದೆ. ನಕಲಿ ದಾಖಲೆ ಸೃಷ್ಟಿಸಿ ಮೃತದೇಹವನ್ನು ತರಲಾಗಿದೆ. ಇದರ ಹಿಂದೆ ಕಾಣದ ಕೈಗಳಿವೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಆಕೋಪಿಸಿದ್ದಾರೆ.

ಲಾಕ್‌ಡೌನ್‌ 3.0 ದೊಡ್ಡ ಸವಾಲು: ಆದರೆ, ಸವಾಲು ಎದುರಿಸಲು ರಾಜ್ಯ ಸರ್ಕಾರ ಸಿದ್ಧ!

ಶವಸಂಸ್ಕಾರದ ವೇಳೆ 200ಕ್ಕೂ ಹೆಚ್ಚು ಮಂದಿ ಭಾಗಿ

ತಾಲೂಕಿನ ಕೊಣನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅಂತ್ಯಕ್ರಿಯೆಯಲ್ಲಿ 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡ ಘಟನೆ ಬೆಳಕಿಗೆ ಬಂದಿದೆ. ಅಂತ್ಯಕ್ರಿಯೆಯಲ್ಲಿ 20 ಜನರಷ್ಟೇ ಭಾಗವಹಿಸಬೇಕು ಎಂಬ ನಿಯಮವಿದೆ. ಆದರೆ ಆ ನಿಯಮ ಪಾಲಿಸದಿರುವುದು, ಅಂತ್ಯಕ್ರಿಯೆ ವೇಳೆ ಮಾಸ್ಕ್‌ಧರಿಸದಿರುವುದು, ಸಾಮಾಜಿಕ ಅಂತರ ಗಾಳಿಗೆ ತೂರಿರುವುದು ಆಕ್ರೋಶಕ್ಕೆ ಕಾರಣವಾಗಿದೆ.