ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಪಕ್ಷಗಳು ಸಕಲ ಸಿದ್ಧತೆ ನಡೆಸುತ್ತಿವೆ. ಅಭ್ಯರ್ಥಿಗಳ ಆಯ್ಕೆಗೂ ಕಸರತ್ತು ನಡೆಯುತ್ತಿದ್ದು, ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿಯೂ ಪೈಪೋಟಿ ನಡೆಯುತ್ತಿದೆ.

"

 ಇತ್ತ ಮಂಡ್ಯದಿಂದ ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು,  ಸಂಸದ ಶಿವರಾಮೇಗೌಡ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ನಾನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇದೀಗ ಅಂಬರೀಶ್ ಅಭಿಮಾನಿಗಳು ಗರಂ ಆಗಿದ್ದಾರೆ. ಸಾಮಾಜಿಕ  ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. 

ಚುನಾವಣೆಯಲ್ಲಿ ಗೆಲ್ಲಲು ಅಂಬಿ ಅಣ್ಣನ ಆಶೀರ್ವಾದ ಬೇಕಿತ್ತು. ಗೆಲ್ಲುವವರೆಗೆ ಅಣ್ಣನ ಕಾಲಿಗೆ ಬಿದ್ದಿದ್ದು, ಈಗ ಅಂಬಿ ಅಣ್ಣನ ಕುಟುಂಬದ ಬಗ್ಗೆ ಮಾತನಾಡುತ್ತೀಯಾ ವಾಗ್ದಾಳಿ ನಡೆಸಿದ್ದಾರೆ. 

ಶಿವರಾಮೇಗೌಡ ಅಂಬರೀಶ್ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಭಾವಚಿತ್ರ ಹಾಕಿ ಅಂಬರೀಶ್ ಅಭಿಮಾನಿಗಳು ವಾಗ್ದಾಳಿ ನಡೆಸಿದ್ದಾರೆ.  

ಅಂಬರಿಶ್ ಗೆ ಕೊಡಬೇಕಾದ ಸ್ಥಾನಮಾನವನ್ನು ನೀಡಿದ್ದೆವು. ಸಿಗಬೇಕಾದ ಗೌರವವನ್ನೂ ಕೊಟ್ಟಿದ್ದೆವು. ಈಗ ಮಂಡ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿ ನಾನೆ ಎಂದು ಹೇಳಿರುವ ಜೆಡಿಎಸ್ ಮುಖಂಡ ಶಿವರಾಮೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಅಂಬರೀಶ್ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿದ್ದಾರೆ.  ಬಾ ಮುಂದೆ ನಿನಗೆ ಮಾರಿ ಹಬ್ಬ  ಇದೆ ಎಂದು ಶಿವರಾಮೇಗೌಡರಿಗೆ ಅಭಿಮಾನಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.