ಮೇಕೆದಾಟು ಯೋಜನೆಯಿಂದ 5,000 ಹೆಕ್ಟೇರ್ ಮುಳುಗಡೆ: ಪರ್ಯಾಯ ಭೂಮಿ ಗುರುತು

ಪರ್ಯಾಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೆ ಸಂಬಂಧಿಸಿ ಭೂಮಿ ಬೆಲೆ ನಿಗದಿ ಸೇರಿ ಮತ್ತಿತರ ಕಾರ್ಯಗಳನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು 

Alternate land mark of Mekedatu Project in Karnataka grg

ಬೆಂಗಳೂರು(ಡಿ.08):  ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ ಬದಲಿಗೆ ನೀಡಬೇಕಾದ ಪರ್ಯಾಯ ಭೂಮಿಯನ್ನು ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ಕೆಲ ದಿನಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ. 

ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಮೇಕೆದಾಟುವಿನಲ್ಲಿ ಸಮತೋಲನ ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಈಗಾಗಲೇ ಸಲ್ಲಿಸಲಾಗಿದೆ. ಅದರ ಜತೆಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿಗಾಗಿ ಸಂಬಂಧಪಟ್ಟ ದಾಖಲೆಗಳನ್ನೂ ಸಲ್ಲಿಸಲಾಗಿದೆ. 

ಸಾಯುವ ಮುನ್ನ ಮೇಕೆದಾಟಿಗೆ ಒಪ್ಪಿಸ್ತೀನಿ, ಮೋದಿಯಿಂದ ಮಾತ್ರ ಈ ಯೋಜನೆ ಅನುಷ್ಠಾನ ಸಾಧ್ಯ: ದೇವೇಗೌಡ

ಇದೀಗ ಮೇಕೆದಾಟು ಯೋಜನೆಗೆ ಅಗತ್ಯವಿರುವ ಮತ್ತು ಯೋಜನೆಯಿಂದ ಮುಳುಗಡೆಯಾಗಲಿರುವ 5 ಸಾವಿರ ಎಕರೆ ಅರಣ್ಯ ಭೂಮಿ ಬದಲಿಗೆ ನೀಡಬೇಕಾದ ಪರ್ಯಾಯ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಭೂಮಿ ಗುರುತಿಸಲಾಗಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವುದು ಹಾಗೂ ಭೂಮಿಗೆ ಬದಲಾಗಿ ಪರಿಹಾರ ನೀಡುವ ಸಂಬಂಧ ಆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. 

7 ಸಾವಿರ ಹೆಕ್ಟೇರ್ ಪರ್ಯಾಯ ಭೂಮಿ: 

ಮೇಕೆದಾಟು ಯೋಜನೆಗಾಗಿ ಕಾವೇರಿ ಅಭಯಾರಣ್ಯದ 4,776.67 ಹೆಕ್ಟೇರ್ ಭೂಮಿ ಹಾಗೂ ಸಂರಕ್ಷಿತಾರಣ್ಯದ 229.6 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದೆ. ಅದರ ಜತೆಗೆ ಜಲಾಶಯ ನಿರ್ಮಾಣ ಸೇರಿ ಮತ್ತಿತರ ಕಾರ್ಯಕ್ಕಾಗಿ ಒಟ್ಟಾರೆ 5,096.22 ಹೆಕ್ಟೇರ್ ಅರಣ್ಯ ಭೂಮಿ ಅವಶ್ಯಕತೆಯಿದೆ. ಈ ಅರಣ್ಯ ಭೂಮಿಗೆ ಬದಲಾಗಿ ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ 7,404.62 ಹೆಕ್ಟೇರ್ ಸಿ ಆ್ಯಂಡ್ ಡಿ ಭೂಮಿ ಹಾಗೂ ಡೀಮ್ಸ್ ಅರಣ್ಯ ಭೂಮಿ ಗುರುತಿಸಲಾಗಿದೆ. ಅದರಲ್ಲಿ ಶೇ.53ರಷ್ಟು ಭೂಮಿ ರಾಮನಗರ ಜಿಲ್ಲೆ ವ್ಯಾಪ್ತಿಯದ್ದಾಗಿದೆ.

ಒಟ್ಟಾರೆ ಪರ್ಯಾಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೆ ಸಂಬಂಧಿಸಿ ಭೂಮಿ ಬೆಲೆ ನಿಗದಿ ಸೇರಿ ಮತ್ತಿತರ ಕಾರ್ಯಗಳನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತದೆ' ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳರ ಅಡ್ಡಿ ಬೇಡ: ಮೋದಿಗೆ ದೇವೇಗೌಡ ಮನವಿ

ಅನುಮತಿ ಸಿಕ್ಕಿಲ್ಲ: 

ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ ಸ್ವಾಧೀನಕ್ಕೆ ಅನುಮತಿ ಕೋರಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಆದರೆ ಅದಕ್ಕೆ ಈವರೆಗೆ ಸಚಿವಾಲಯದಿಂದ ಅನುಮತಿ ದೊರೆತಿಲ್ಲ ಹಾಗೂ ಪ್ರಸ್ತಾವನೆ ಪರಿಶೀಲಿಸಿಲ್ಲ. ಅರಣ್ಯ ಸಚಿವಾಲಯ ಪರಿಶೀಲಿಸಿ, ಅದನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅವಗಾಹನೆಗೆ ನೀಡ ಬೇಕಿದೆ. ಆದರೆ ಈ ಪ್ರಕ್ರಿಯೆ ವಿಳಂಬವಾ ಗುತ್ತಿರುವುದರಿಂದ ಯೋಜನೆ ಮೇಲೆ ಪರಿ ಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಜನೆಯಿಂದಾಗಿ 5 ಗ್ರಾಮ ಶಿಫ್ಟ್ 

ಯೋಜನೆಯಿಂದಾಗಿ 5 ಗ್ರಾಮಗಳ 160.81 ಹೆಕ್ಟೇರ್ ಖಾಸಗಿ ಭೂಮಿ ಮುಳುಗಡೆ. ಯಾಗಲಿದೆ. ಅದರಂತೆ ಗ್ರಾಮಗಳಾದಸಂಗಮ, ಮುತ್ತತ್ತಿ, ಮಡಿವಾಳ, ಕೊಗ್ಗೆದೊಡ್ಡಿ ಮತ್ತು ಬೊಮ್ಮಸಂದ್ರದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಅಲ್ಲದೆ, ಯೋಜನೆಯಿಂದಾಗಿ 233 ಕುಟುಂಬಗಳ ಮೇಲೆ ಪರಿಣಾಮ ಉಂಟಾಗಲಿದೆ. ಆ ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸುವುದು ಹಾಗೂ ಪರಿಹಾರ ನೀಡುವುದಕ್ಕೂ ಶೀಘ್ರ ನಿರ್ಧರಿಸಲಾಗುತ್ತದೆ.

Latest Videos
Follow Us:
Download App:
  • android
  • ios