ರಾಜ್ಯದ ಮಾವಿನ ಹಣ್ಣಿಗೆ ದೇಶದಾದ್ಯಂತ ಬೇಡಿಕೆ ಸೃಷ್ಟಿಸುವ ಸಲುವಾಗಿ ದೇಶದ ಎಲ್ಲ ರಾಜ್ಯಗಳ ಮಾವು ವ್ಯಾಪಾರಸ್ಥರ ಸಭೆ ನಡೆಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿರ್ಧರಿಸಿದೆ.
ಬೆಂಗಳೂರು (ಮಾ.7): ರಾಜ್ಯದ ಮಾವಿನ ಹಣ್ಣಿಗೆ (Mango Fruit) ದೇಶದಾದ್ಯಂತ ಬೇಡಿಕೆ ಸೃಷ್ಟಿಸುವ ಸಲುವಾಗಿ ದೇಶದ ಎಲ್ಲ ರಾಜ್ಯಗಳ ಮಾವು ವ್ಯಾಪಾರಸ್ಥರ ಸಭೆ (Mango Dealers Meeting) ನಡೆಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿರ್ಧರಿಸಿದೆ. ರಾಜ್ಯದಲ್ಲಿ ಪ್ರತಿ ವರ್ಷ 14 ಲಕ್ಷ ಟನ್ ಮಾವು ಬೆಳೆಯಲಾಗುತ್ತಿದೆ. ಆದರೆ, ಈ ಮಾವಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗದ ಪರಿಣಾಮ ಕೆಲ ಸಂದರ್ಭಗಳಲ್ಲಿ ರೈತರಿಗೆ (Farmers) ನಷ್ಟ ಉಂಟಾಗುತ್ತದೆ. ಆದ್ದರಿಂದ ಸೂಕ್ತ ಮಾರುಕಟ್ಟೆಸೌಲಭ್ಯ ಕಲ್ಪಿಸುವುದು ಅನಿವಾರ್ಯವಿದೆ.
ಈ ನಿಟ್ಟಿನಲ್ಲಿ ದೇಶದ ಎಲ್ಲ ರಾಜ್ಯಗಳ ಮಾವು ವ್ಯಾಪಾರಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾವು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯದ ಮಾವಿಗೆ ಉತ್ತರ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಕೆಲವೇ ವ್ಯಾಪಾರಿಗಳು ಖರೀದಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ವ್ಯಾಪಾರಿಗಳ ಸಂಖ್ಯೆ ವೃದ್ಧಿಯಾಗುತ್ತಿಲ್ಲ. ಹೀಗಾಗಿ ಮಾರ್ಚ್ ನಾಲ್ಕನೇ ವಾರದಲ್ಲಿ ಬೆಂಗಳೂರು ನಗರದಲ್ಲಿ ರಾಷ್ಟ್ರ ಮಟ್ಟದ ಮಾವು ವ್ಯಾಪಾರಿಗಳ ಸಭೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ರಾಜ್ಯದ ಮಾವು ಬೆಳೆಯುವ ರೈತ ಮುಖಂಡರು, ರೈತ ಉತ್ಪಾದಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೈತರು ಮತ್ತು ವ್ಯಾಪಾರಿಗಳ ನಡುವೆ ಇದೇ ವೇಳೆ ಒಡಂಬಡಿಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಮಂಡಳಿಯ ಅಧ್ಯಕ್ಷ ಕೆ.ವಿ.ನಾಗರಾಜ್ (KV Nagaraj) ‘ಕನ್ನಡಪ್ರಭ’ಕ್ಕೆ (Kannada Prabha) ಮಾಹಿತಿ ನೀಡಿದರು.
Untimely Rain Effect: ಮಾವು ಈ ಸಲ 2 ತಿಂಗಳು ವಿಳಂಬ: ಕಂಗಾಲದ ಬೆಳೆಗಾರ..!
ಮತ್ತೆ ಮಾವು ಮೇಳ: ಕೊರೋನಾ (Coronavirus) ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮಾವು ಮೇಳ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಪುನರಾರಂಭಿಸಲು ನಿರ್ಧರಿಸಲಾಗಿದೆ. ಮೇ ತಿಂಗಳಲ್ಲಿ ನಗರದ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಐಟಿ ಕಂಪೆನಿಗಳ ಆವರಣ ಸೇರಿದಂತೆ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮೇಳ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬೆಂಗಳೂರು (Bengaluru) ನಗರದ ಗ್ರಾಹಕರಿಗೆ ರಾಸಾಯನಿಕ ಮುಕ್ತ ಮಾವು ಲಭ್ಯವಾಗುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೋಲಾರಕ್ಕೆ ಸಂಸ್ಕರಣ ಘಟಕ ಸಿಗಲಿಲ್ಲ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದೆ. ಈ ಜಿಲ್ಲೆಗಳು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದು ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಉತ್ತರ ಕರ್ನಾಟದಲ್ಲಿ ಮಾತ್ರ ಮಾವು ಸಂಸ್ಕರಣಾ ಘಟಕ ಪ್ರಾರಂಭಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ಮಾವು ಬೆಳೆಗಾರರಿಗೆ ತೀವ್ರ ನಿರಾಸೆ ಉಂಟುಮಾಡಿದೆ ಎಂದು ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದರು.
ಭಾರತದ ಮಾವು ರಫ್ತಿಗೆ ಅನುಮೋದನೆ ಪಡೆದ ಕೇಂದ್ರ: ಭಾರತದ ಸಣ್ಣ ಹಳ್ಳಿಯಲ್ಲಿ ರೈತ ಬೆಳೆದ ಮಾವಿನ ಹಣ್ಣಿಗೆ ಮಾರುಕಟ್ಟೆ ಇಲ್ಲ, ಬೆಲೆ ಇಲ್ಲ, ಖರೀದಿದಾರರಿಲ್ಲ ಎಂದು ಚಿಂತೆ ಪಡುವ ಅಗತ್ಯವಿಲ್ಲ. ಕಾರಣ ಭಾರತದ ರಸಭರಿತ ಮಾವಿಗೆ ಭಾರಿ ಬೇಡಿಕೆ ಇದೆ. ಈ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಮಾವಿನ ಹಣ್ಣನ್ನು ಅಮೆರಿಕಾಗೆ ರಫ್ತು ಮಾಡಲು USA ಕೃಷಿ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಇಲಾಖೆಯಿಂದ ರಫ್ತು ಅನುಮೋದನೆ ಪಡೆದುಕೊಂಡಿದೆ. ಇದರಿಂದ ಭಾರತದ ಮಾವಿನ ಹಣ್ಣಿನ ಸ್ವಾದ ಇದೀಗ ಅಮೆರಿಕದಲ್ಲಿ ಮನೆಮಾತಾಗಲಿದೆ.
ಉತ್ತರ ಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್: ಯೋಗಿ ಕೊಟ್ಟ ಉತ್ತರ ಇದು
ಅಮೆರಿಕದಲ್ಲಿರುವ ಗ್ರಾಹಕರು ಭಾರತದ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಸವಿಯುವ ಅವಕಾಶ ಪಡೆದಿದ್ದಾರೆ. ಇದರ ಜೊತೆಗೆ ಭಾರತದ ರೈತನ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಿದೆ. 2017ರಿಂದ 2020ರ ವರೆಗೆ ಭಾರತ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಅಮೆರಿಕಾಗೆ ರಫ್ತು ಮಾಡಿದೆ. ಆದರೆ 2020ರ ಬಳಿಕ ಇದು ಸ್ಥಗಿತಗೊಂಡಿತ್ತು. ಕೊರೋನಾ ವೈರಸ್ ಕಾರಣ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಹಲವು ನಿರ್ಬಂಧಗಳು ಜಾರಿಯಾಗಿತ್ತು. ಹೀಗಾಗಿ ಅಮೆರಿಕದ USDA ಅಧಿಕಾರಿಗಳು ಭಾರತಕ್ಕೆ ಆಗಮಿಸಿ ಭಾರತದ ಮಾವಿನ ಹಣ್ಣಿನ ಗುಣಮಟ್ಟ ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ವರ್ಷ ಭಾರತದ ಮಾವಿನ ಹಣ್ಣ ರಫ್ತು ಸ್ಥಗಿತಗೊಂಡಿತ್ತು.
