ಆನ್‌ಲೈನ್‌ನಲ್ಲೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ
ಆ.2 ಹಾಗೂ ಆ.6ರಿಂದ 9ರವರೆಗೆ 9ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಆನ್‌ಲೈನ್‌ನಲ್ಲಿ ನಡೆಯಲಿದೆ| ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆಯಲಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ| ಆಸಕ್ತರು ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು|
ಬೆಂಗಳೂರು(ಆ.02): ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆ.2 ಹಾಗೂ ಆ.6ರಿಂದ 9ರವರೆಗೆ ‘9ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆನ್‌ಲೈನ್‌ನಲ್ಲಿ ನಡೆಯಲಿದೆ.
ಈ ಅಧಿವೇಶನವು ಜು.30ರಿಂದ ಪ್ರಾರಂಭವಾಗಿದ್ದು, ಆ.2 ಮತ್ತು ಆ.6ರಿಂದ 9ರವರೆಗೆ ಸಂಜೆ 6.30ರಿಂದ 8.30ರವರೆಗೆ ಜರುಗಲಿದೆ. ಆಸಕ್ತರು ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.
ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!
ಈ ಅಧಿವೇಶನ ಪ್ರಾರಂಭವಾದ ಎರಡನೇ ದಿನದಂದು ‘ಭಾರತದಲ್ಲಿ ಆರ್ಥಿಕ ಜಿಹಾದ್’ ವಿಷಯವಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ, ತಮಿಳುನಾಡಿನ ಹಿಂದೂ ಮಕ್ಕಳ್ ಕಛ್ಚಿಯ ಸಂಸ್ಥಾಪಕ ಅಧ್ಯಕ್ಷ ಅರ್ಜುನ ಸಂಪಥ, ತಮಿಳುನಾಡಿನ ಶಿವಸೇನೆ ಅಧ್ಯಕ್ಷ ಜಿ.ರಾಧಾಕೃಷ್ಣನ್, ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಭಾರತೀಯ ಪೌರತ್ವ ಕೊಡಿಸುವ ‘ನಿಮಿತ್ತೆಕಮ’ ಸಂಸ್ಥೆ ಅಧ್ಯಕ್ಷ ಜಯ ಅಹುಜಾ, ಪಾಕಿಸ್ತಾನದಲ್ಲಿ ಹಿಂದುಪರ ಹೋರಾಟಗಾರ್ತಿ ಮೀನಾಕ್ಷೀ ಶರಣ, ಪ್ರಜ್ಞತಾ ಸಂಸ್ಥೆ ಸಹಸಂಸ್ಥಾಪಕ ಆಶಿಷ ಧರ ಅವರು ವಿಚಾರಗಳನ್ನು ಹಂಚಿಕೊಂಡರು.