Asianet Suvarna News Asianet Suvarna News

ಮದ್ಯದ ದರ ಹೆಚ್ಚಳ: ಕುಡುಕರು ತಿರುಗಿಬಿದ್ರೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ: ಕಾರಜೋಳ ವಾಗ್ದಾಳಿ

ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಿಂದ ಕುಡುಕರಿಗೆ ದೊಡ್ಡ ಆಘಾತವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮದ್ಯದ ಬೆಲೆ ಶೇಕಡಾ 40 ಪರ್ಸೆಂಟ್‌ ಹೆಚ್ಚು ದುಬಾರಿಯಾಗಿದೆ. ಮದ್ಯದ ಬೆಲೆ ಏರಿಕೆಯಿಂದ ಕುಡುಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

Alcohol price increase issue former minister govind karjol outraged agains cngress govt at bagalkote rav
Author
First Published Aug 4, 2023, 2:08 PM IST

ಬಾಗಲಕೋಟೆ (ಆ.4) : ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಿಂದ ಕುಡುಕರಿಗೆ ದೊಡ್ಡ ಆಘಾತವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮದ್ಯದ ಬೆಲೆ ಶೇಕಡಾ 40 ಪರ್ಸೆಂಟ್‌ ಹೆಚ್ಚು ದುಬಾರಿಯಾಗಿದೆ. ಮದ್ಯದ ಬೆಲೆ ಏರಿಕೆಯಿಂದ ಕುಡುಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ಅಬಕಾರಿ ಸುಂಕ ಹೆಚ್ಚಳ; ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟುಏರಿಕೆ

ಕುಡುಕರು ಬೀದಿಗಿಳಿದ್ರೆ ಉರುಳುತ್ತೆ ಸರ್ಕಾರ:

ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ ಇದೀಗ ಸರ್ಕಾರ ಬಂದು ಮೂರು ತಿಂಗಳು ಕಳೆದರೂ ಬೆಲೆ ಇಳಿಕೆಯಾಗಿದ್ದಕ್ಕಿಂತ ಇನ್ನಷ್ಟು ಹೆಚ್ಚಳವಾಗ್ತಿದೆ. ಅದರಲ್ಲೂ ಮದ್ಯದ ಬೆಲೆ ಹೆಚ್ಚಿಸಿರುವುದು ಸರ್ಕಾರ ರಾಜ್ಯದ ಕುಡುಕರ ಕೆಂಗಣ್ಣಿಗೆ ಗುರಿಯಾಗಿದೆ. ಮದ್ಯದ ದರವನ್ನು ಹಿಂದಿನ 20% ಮತ್ತು ಈಗಿನ  20%  ಒಟ್ಟು 40% ಏರಿಸಿದ್ದಾರೆ. ಮದ್ಯದ ದರ ಬೇಕಾಬಿಟ್ಟಿ ಹೆಚ್ಚಿಸಿದ್ದಾರೆ. ಕುಡುಕರು ಬೀದಿಗಿಳಿದರೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಕೂರಲು ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮದ್ಯ ಶೇ.20 ದುಬಾರಿ; ಕರ್ನಾಟಕ ಕುಡುಕರ ಸಂಘ ತೀವ್ರ ವಿರೋಧ

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿ ಯೋಜನೆಗೆ ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಮಾತನಾಡಿದ ಅವರು,  ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನುಅವರ ಅಭಿವೃದ್ಧಿಗೆ ಬಳಸಬೇಕು. ಸಮುದಾಯಗಳ ಅಭಿವೃದ್ಧಿ ಯೋಜನೆ ನಿಲ್ಲಿಸಿ ಮೀಸಲಿಟ್ಟ ದುರ್ಬಳಕೆಯಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios