ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್‌ಗೆ ಎಐ ಕಣ್ಗಾವಲು!

ಸುಸಜ್ಜಿತವಾದ 160 ಎಐ ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಣಾವಲು ನಡೆಸಲಿದೆ. ಕ್ಯೂ ಕಾಂಪ್ಲೆಕ್ಸ್ ಮತ್ತು ದೇವಸ್ಥಾನದಲ್ಲಿ ಒಟ್ಟು 263 ಸ್ಪೀಕರ್‌ಗಳು ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಪಬ್ಲಿಕ್ ಅಡ್ರೆಸ್ ಸಿಸ್ಟಂ ಮೂಲಕ ಕಮಾಂಡ್ ಸೆಂಟರ್‌ನಿಂದ ನೇರವಾಗಿ ನಿರ್ಧಿಷ್ಟ, ಸಾಮಾನ್ಯ ಪ್ರಕಟಣೆ ಮಾಡಲಾಗುತ್ತದೆ. 

AI Surveillance for Dharmasthala's Q Complex

ಬೆಳ್ತಂಗಡಿ(ಜ.08):  ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಮಂಗಳವಾರ ಧರ್ಮಸ್ಥಳದಲ್ಲಿ ಉದ್ಘಾಟಿಸಿದ 'ಕ್ಯೂ ಕಾಂಪ್ಲೆಕ್ಸ್‌' ಹಲವು ವಿಶೇಷತೆಗಳನ್ನು ಹೊಂದಿದೆ. 

ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2.75 ಲಕ್ಷ ಚದರ ಅಡಿ ಆಗಿದ್ದು, ಇದು ವೃತ್ತಾಕಾರದಲ್ಲಿದೆ. 16 ಸಭಾಂಗಣಗಳೊಂದಿಗೆ 2 ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕಕಾಲಕ್ಕೆ ಒಟ್ಟು 10,000-12,000 ಜನ ರಿಗೆ ಕುಳಿತುಕೊಳ್ಳಬಹುದು. ಈ ಸಂಕೀರ್ಣವು ವಿಶಾಲವಾದ ಸಭಾಂಗಣಗಳನ್ನು ಹೊಂದಿದ್ದು, ಭಕ್ತಾದಿಗಳು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಬದಲು ಆರಾಮವಾಗಿ ಕಾಯಬಹುದು. 

ಧರ್ಮಸ್ಥಳದಲ್ಲಿ ಸಮಾನತೆ ದರ್ಶನ: ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

ಪ್ರತಿ ಸಭಾಂಗಣವು ಪ್ರವೇಶ, ನಿರ್ಗ ಮನ ಮತ್ತು ತುರ್ತು ನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಹೊಂದಿವೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ. ತಿರುಪತಿಯಲ್ಲಿನ ವ್ಯವಸ್ಥೆ ಅಧ್ಯಯನ ಮಾಡಿ ನಿರ್ಮಿಸಿದ ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದೆ. 
ಸುಸಜ್ಜಿತವಾದ 160 ಎಐ ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಣಾವಲು ನಡೆಸಲಿದೆ. ಕ್ಯೂ ಕಾಂಪ್ಲೆಕ್ಸ್ ಮತ್ತು ದೇವಸ್ಥಾನದಲ್ಲಿ ಒಟ್ಟು 263 ಸ್ಪೀಕರ್‌ಗಳು ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಪಬ್ಲಿಕ್ ಅಡ್ರೆಸ್ ಸಿಸ್ಟಂ ಮೂಲಕ ಕಮಾಂಡ್ ಸೆಂಟರ್‌ನಿಂದ ನೇರವಾಗಿ ನಿರ್ಧಿಷ್ಟ, ಸಾಮಾನ್ಯ ಪ್ರಕಟಣೆ ಮಾಡಲಾಗುತ್ತದೆ. 

ಚಿಕ್ಕಮಗಳೂರು, ಧರ್ಮಸ್ಥಳ, ಕೊಡಗಲ್ಲಿ ಮಿನಿ ಏರ್‌ಪೋರ್ಟ್‌: ರಾಜ್ಯ ಸರ್ಕಾರದಿಂದ ಸಿದ್ಧತೆ

ಪ್ರತಿ ಸಭಾಂಗಣಗಳಲ್ಲಿ ಹೈ- ವಾಲ್ಯೂಮ್. ಕಡಿಮೆ-ವೇಗದ (ಎಚ್‌ವಿಎಲ್‌ಎಸ್) ಫ್ಯಾನ್ ಅಳವಡಿಸಲಾಗಿದ್ದು. ಗಾಳಿಯ ಪ್ರಸರಣ ವ್ಯವಸ್ಥೆ ಯೊಂದಿಗೆ ಆರಾಮದಾಯಕ 650 ಕೆವಿ ಸಾಮರ್ಥದ ಸೌರವಿದ್ಯುತ್‌ ಘಟಕ ಅಳವಡಿಸಲಾಗಿದೆ. ಕ್ಯೂ ಕಾಂಪ್ಲೆಕ್ಸ್ ಅಂತರ್ ಸಂಪರ್ಕಿತ ಇಳಿಜಾರುಗಳು ಮತ್ತು ಏಕಮುಖ ಪಾದಚಾರಿ ಹರಿವನ್ನು ಒಳಗೊಂಡಿದ್ದು, ಬಹಳಜನಸಂದಣಿಯ ಸಮಯದಲ್ಲಿಯೂ ಸುಗಮವಾದ ಮತ್ತು ಸ್ಥಿರವಾದ ಗುಂಪಿನ ಚಲನೆಯನ್ನು ಖಚಿತಪಡಿಸುತ್ತದೆ. ಎಲ್ಲ ಸರತಿ ಸಾಲುಗಳು ತಡೆರಹಿತ ನ್ಯಾವಿಗೇಷನ್‌ನಿಂದ ಸ್ವಯಂ- ಮಾರ್ಗದರ್ಶಕವಾಗಿವೆ. 

ಕ್ಯೂ ಕಾಂಪ್ಲೆಕ್ಸ್‌ನ ಹೃದಯ ಭಾಗದಲ್ಲಿ ಕ್ಯೂ ಮ್ಯಾನೇಜ್ ಮೆಂಟ್ ಸಾಫ್ಟ್‌ವೇರ್, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳು, ಕಣ್ಣಾವಲು, ಪಬ್ಲಿಕ್ ಅಡ್ರೆಸ್ ಸಿಸ್ಟಂಗಳು, ಡಿಜಿಟಲ್ ಸಂಕೇತಗಳು, ಕಟ್ಟಡ ನಿರ್ವಹಣಾ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 10 ಸರ್ವ‌್ರಗಳನ್ನು ಹೊಂ ದಿದೆ. ಕೇಂದ್ರೀಕೃತ ಮೇಲ್ವಿಚಾರಣೆಯಿಂದ ಎಲ್ಲ ಕಾರ್ಯಾ ಚರಣೆಗಳು ಮತ್ತು ನಿರ್ವಹಣೆಯು ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಒದಗಿಸುತ್ತವೆ.

Latest Videos
Follow Us:
Download App:
  • android
  • ios