ಬಿತ್ತನೆ ಬೀಜಗಳ ಬೆಲೆ ಏರಿಕೆ ಸಮರ್ಥಿಸಿಕೊಂಡ ಕೃಷಿ ಸಚಿವ ಚಲುವರಾಯಸ್ವಾಮಿ!

ರಾಜ್ಯದಲ್ಲಿ ತೀವ್ರ ಬರಗಾಲದಿಂದ ತತ್ತರಿಸಿ ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ನೀಡುವ ಬಿತ್ತನೆ ಬೀಜಗಳ ದರ ಏರಿಕೆ ಸಮರ್ಥಿಸಿಕೊಂಡಿದ್ದೂ ಅಲ್ಲದೇ, ಬೆಲೆ ತಗ್ಗಿಸುವುದಿಲ್ಲ ಎಂಬ ಸಮಜಾಯಿಷಿಯನ್ನೂ ಕೃಷಿ ಸಚಿವ ಚಲುವರಾಯಸ್ವಾಮಿ ನೀಡಿದ್ದಾರೆ.

Agriculture minister Chaluvarayaswamy defend to sowing seeds rate hike in Karnataka sat

ಬೆಂಗಳೂರು (ಮೇ 28): ರಾಜ್ಯದಲ್ಲಿ ತೀವ್ರ ಬರಗಾಲದಿಂದ ತತ್ತರಿಸಿ ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ನೀಡುವ ಬಿತ್ತನೆ ಬೀಜಗಳ ದರ ಏರಿಕೆ ಸಮರ್ಥಿಸಿಕೊಂಡಿದ್ದೂ ಅಲ್ಲದೇ, ಬೆಲೆ ತಗ್ಗಿಸುವುದಿಲ್ಲ ಎಂಬ ಸಮಜಾಯಿಷಿಯನ್ನೂ ಕೃಷಿ ಸಚಿವ ಚಲುವರಾಯಸ್ವಾಮಿ ನೀಡಿದ್ದಾರೆ.

ರಾಜ್ಯದಲ್ಲಿ ಬಿತ್ತನೆ ಬೀಜಗಳ ದರ ಹೆಚ್ಚಳದ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲೇ ದರ ಹೆಚ್ಚಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜಗಳ ದರ ಹೆಚ್ಚಳಕ್ಕೆ ಒಂದು ಕಾರಣವೂ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಬಿತ್ತನೆ ಬೀಜಗಳ ಬೆಲೆಯನ್ನು ತಗ್ಗಿಸುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ನೀಡಲಿಲ್ಲ. ಮುಂದುವರೆದು 2023-24 ನೇ ಸಾಲಿನಲ್ಲಿ ರಾಜ್ಯದಲ್ಲಿ ಆವರಿಸಿದ ತೀವ್ರ ಬರಗಾಲದಿಂದಾಗಿ ಬೀಜ್ಪೋತ್ಪಾದನೆ ಕುಂಠಿತವಾಗಿದೆ. ಬೀಜ ಉತ್ಪಾದಕರಿಂದ ಬಿತ್ತನೆ ಬೀಜಗಳನ್ನು ಪಡೆಯುವ ಖರೀದಿ ದರ ಹೆಚ್ಚಾಗಿದೆ. ಇದರಿಂದ ಬಿತ್ತನೆ ಬೀಜಗಳ ದರದಲ್ಲಿ ಗಣನೀಯವಾದ ಹೆಚ್ಚಳವಾಗಿದೆ ಎಂದು ಹೇಳಿದರು.

ಬೀಜಗಳ ಬೆಲೆ ಏರಿಕೆ! ತತ್ತರಿಸಿ ಹೋಗುತ್ತಿದ್ದಾನೆ ಅನ್ನದಾತ ..ರೈತರಿಗೆ ಗಾಯದ ಮೇಲೆ ಬರೆ ಎಳಿತಾ ಸರ್ಕಾರ?

ರಾಜ್ಯದಲ್ಲಿ ಬಿತ್ತನೆ ಹೆಸರು ಕಾಳು ಎಲ್-1 ದರ ಶೇ.48.5 ಹೆಚ್ಚಳವಾಗಿದೆ. ಇನ್ನು ಬಿತ್ತನೆ ಮಾಡಲು ಸಿದ್ದವಿರುವ ಉದ್ದು ಎಲ್-1 ದರ  ಶೇ.37.72ರಷ್ಟು ಹೆಚ್ಚಳವಾಗಿದೆ. ಇನ್ನು ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ತೊಗರಿಯ ವಿವಿಧ ತಳಿಗಳ ಎಲ್-1 ದರ ಶೇ.28.29 ರಿಂದ 37.69 ರಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ ಜೋಳದ ಎಲ್-1 ದರವು ಶೇ.7.66 ರಿಂದ 33.33 ರಷ್ಟು ಹೆಚ್ಚಳವಾಗಿದೆ ಎಂದು ಸ್ವತಃ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರೇ ಬೆಲೆ ಏರಿಕೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಬಿ.ಟಿ.ಹತ್ತಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ವಿತರಣೆ ಮಾಡುತ್ತಿಲ್ಲ. ಬಿ.ಟಿ.ಹತ್ತಿ ಬಿತ್ತನೆ ಬೀಜದ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರದಿಂದಲೇ ನಿಗದಿ ಮಾಡಲಾಗುತ್ತದೆ. ಹತ್ತಿ ಬೀಜದ ದರ ಏರಿಕೆಯ ಕುರಿತು ಕೇಂದ್ರ ಸರ್ಕಾರವೇ ಮಾಹಿತಿ ನೀಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಈ ಮೂಲಕ ಬಿತ್ತನೆ ಬೀಜಗಳ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದೂ ಅಲ್ಲದೇ, ದರಗಳನ್ನು ತಗ್ಗಿಸುವುದಿಲ್ಲ ಎಂಬ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.

ಕೃಷಿ ಸಚಿವ ಪತ್ರಿಕಾ ಪ್ರಕಟಣೆ ಹೀಗಿದೆ ನೋಡಿ: ಬೆಂಗಳೂರು-ರಾಜ್ಯದಲ್ಲಿ ಬಿತ್ತನೆ ಬೀಜ ದರ  ಹೆಚ್ಚಳದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಬೆಲೆ ಹೆಚ್ಚಳಕ್ಕೆ ಕೆಲವು ಕಾರಣಳಿದ್ದು ಅವುಗಳನ್ಮು ಹೀಗೆ ಗಮನಿಸಬಹುದಾಗಿದೆ.. 2023 -24 ನೇ ಸಾಲಿನಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ  ನಮ್ಮನ್ನು ಕಾಡಿದೆ. ಹೀಗಾಗಿ 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಬೆಳೆ ನಷ್ಟವಾದರೂ ಪ್ರಸ್ತುತ ಸಾಲಿಗೆ ಬಿತ್ತನೆ ಬೀಜಕ್ಕೆ ಕೊರತೆಯಾಗದಂತಮುಂಜಾಗ್ರತೆ ವಹಿಸಿ ಈಗಾಗಲೇ ಪೂರೈಕೆ ಮಾಡಲಾಗಿದೆ.

ಆಹಾರ ಧಾನ್ಯಗಳ‌ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ.ಕಳೆದ ಸಾಲಿನಲ್ಲಿ ಆಹಾರ ಧಾನ್ಯಗಳ  ಮಾರಾಟ ದರ ಶೇ 40% ಏರಿಕೆಯಾಗಿದೆ. ಬಿತ್ತನೆ ಬೀಜ ಖರೀದಿ ಮೇಲೂ ಇದರ ಪರಿಣಾಮ ಬೀರಿದೆ ಹಾಗಿದ್ದೂ ನಾವು ಬಿತ್ತನೆ ಬೀಜಕ್ಕೆ ಶೇ 30% ದರ ಏರಿಸಿದ್ದೇವೆ. ಖರೀದಿ ,ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಪ್ರಯೋಗಾಲಯದಲ್ಲಿ ಪರೀಕ್ಷೆ, ಗ್ರೇಡಿಂಗ್,ದಾಸ್ತಾನು ಮಾಡುವುದು, ಸಾಗಾಟ, ಬೀಜ ಪ್ರಮಾಣೀಕರಣ, ಕಾರ್ಮಿಕರ  ಕೂಲಿ‌ ಹಣ ಎಲ್ಲಾ ಸೇರಿಸಿ ಬಿತ್ತನೆ ಬೀಜದ ಮಾರಾಟ ದರ  ನಿಗದಿ ಯಾಗುತ್ತದೆ. ಬಿತ್ತನೆ ಬೀಜವನ್ನು ಸರ್ಕಾರ ‌ಹಾಗೂ ಖಾಸಗಿ ಸಂಸ್ಥೆಗಳು ನೇರವಾಗಿ ರೈತ  ಬೀಜೋತ್ಪಾದಕರಿಂದ ಖರೀದಿಸುತ್ತಿವೆ. 

ಮಳೆ ಬೆನ್ನಲ್ಲೇ ಬಿತ್ತನೆ ಬೀಜಕ್ಕೆ ಮುಗಿಬಿದ್ದ ಹಾವೇರಿ ರೈತರು

ಬೆಲೆ ಹೆಚ್ಚಳದ ಲಾಭವೂ ರೈತ ಬಿಜ ಉತ್ಪಾದಕರಿಗೇ ವರ್ಗಾವಣೆ ಆಗುತ್ತಿದೆ. ಇದು ನಮ್ಮ ಸರ್ಕಾರ ಬಂದ ನಂತರ ಮಾಡಿರುವ ಖರೀದಿ‌ ಮಾರಾಟ ಪ್ರಕ್ರಿಯೆ ಅಲ್ಲ.ಹಿಂದನ ಸರ್ಕಾರಗಳ ಅವಧಿಯಲ್ಲಿಯೂ ಅನುಸರಿಸಲಾದ ಕ್ರಮ ಮುಂದುವರೆಸಿದ್ದೇವೆ. ನೆರೆಯ ಮಹಾರಾಷ್ಟ್ರದಲ್ಲಿಯೂ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರ ನಿಗಧಿ ಮಾಡಲಾಗಿದೆ ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯುವ ಶೇಂಗಾ ದ ಬಿತ್ತನೆ ಬೀಜದ ಬೆಲೆ ಶೇ 1% ಮಾತ್ರ ಏರಿಕೆಯಾಗಿದೆ.ಹಾಗೇ ಸೊಯಬೀನ್  ಬಿತ್ತನೆ ಬೀಜದ ಮಾರಾಟ ದರ ಶೇ 8% ಇಳಿಕೆಯಾಗಿದೆ.ರೈತರ ಹಿತ ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios