- ರೈತರ ಜಮೀನಲ್ಲೇ ಮಣ್ಣು ಪರೀಕ್ಷೆ ಮಾಡುವ ಸಂಚಾರಿ ವಾಹನ- ಬೆಳೆ, ಕೀಟ ನಿಯಂತ್ರಣ ಕುರಿತೂ ರೈತರಿಗೆ ಮಾಹಿತಿ: ಬಿ.ಸಿ.ಪಾ.-164 ವಾಹನಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ

ಬೆಂಗಳೂರು (ಮಾ.9): ಕೃಷಿ (Agriculture) ಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಮಾಡುವ 100 ‘ಕೃಷಿ ಸಂಜೀವಿನಿ’ ಸಂಚಾರಿ ವಾಹನಗಳ (Krushi Sanjeevini Vehicles) ಸೇವೆಯನ್ನು ಈ ತಿಂಗಳೊಳಗೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ (Agriculture Minister BC Patil ) ತಿಳಿಸಿದರು.

ಕೊಪ್ಪಳ (Koppal) ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಿದ್ದು, ಒಟ್ಟು 164 ‘ಕೃಷಿ ಸಂಜೀವಿನಿ’ ವಾಹನಗಳ ಖರೀದಿಗೆ ಆರ್ಥಿಕ ಇಲಾಖೆ (finance department) ಒಪ್ಪಿಗೆ ನೀಡಿದೆ. 100 ವಾಹನಗಳನ್ನು ಮಾರ್ಚ್ ಅಂತ್ಯದೊಳಗೆ ತಾಲ್ಲೂಕುಗಳಿಗೆ ನೀಡಲಾಗುವುದು, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ಅವರು ಹೇಳಿದರು.

ಜೆಡಿಎಸ್‌ ಸದಸ್ಯ ಗೋವಿಂದರಾಜು ಅವರ ಗಮನ ಸೆಳೆಯುವ ಸೂಚನೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ‘ಪ್ರಯೋಗಾಲಯದಿಂದ ಭೂಮಿಗೆ’ ಎಂಬ ಕಲ್ಪನೆ ಆಧಾರದ ಮೇಲೆ ‘ಕೃಷಿ ಸಂಜೀವಿನಿ’ ಸೇವೆ ಆರಂಭಿಸಲಾಗಿದೆ. ರೈತರು ಕೃಷಿ ಸಂಜೀವಿನಿಗೆ ನಿಗದಿಪಡಿಸಿದ ದೂರವಾಣಿಗೆ ಕರೆ ಮಾಡಿದರೆ ಕೃಷಿಗೆ ಸಂಬಂಧಿಸಿದ ಮಣ್ಣು ಪರೀಕ್ಷೆ, ಕೀಟ ಬಾಧೆ, ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡುವ ಜೊತೆಗೆ ಅವರ ಜಮೀನಿಗೆ ಹೋಗಿ ಪರಿಹಾರ ಒದಗಿಸಲಾಗುವುದು ಎಂದರು.

ಕೇಂದ್ರಕ್ಕೆ ಪತ್ರ: ಕೀಟ ನಾಶಕಗಳ ಗುಣಮಟ್ಟಪರೀಕ್ಷಿಸಲು ಪ್ರಯೋಗಾಲಯ ಮತ್ತು ಔಷಧ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಸ್ಥಾಪಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಸದ್ಯ ರಾಜ್ಯದಲ್ಲಿ ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕೀಟನಾಶಕ ಗುಣಮಟ್ಟಪರೀಕ್ಷಿಸುವ ಪ್ರಯೋಗಾಲಯವಿದ್ದು, ಶಿವಮೊಗ್ಗ ಮತ್ತು ಧಾರವಾಡ ಪ್ರಯೋಗಾಲಯಗಳಿಗೆ ಎನ್‌ಎಬಿಎಲ್‌ ಮಾನ್ಯತೆ ದೊರೆತಿದೆ. ಉಳಿದ ನಾಲ್ಕು ಪ್ರಯೋಗಾಲಯಕ್ಕೆ ಮಾನ್ಯತೆ ಪಡೆಯಲು ಪ್ರಯತ್ನಿಸಲಾಗುತ್ತದೆ ಎಂದರು.

55 ಪ್ರಕರಣ ದಾಖಲು: ರಾಜ್ಯದಲ್ಲಿ ಕೀಟನಾಶಕಗಳ ಗುಣಮಟ್ಟಪರೀಕ್ಷೆಯನ್ನು ಮಾಡಲಾಗುತ್ತಿದ್ದು, 2021-21ನೇ ಸಾಲಿನ ಜನವರಿ ಅಂತ್ಯಕ್ಕೆ 4401 ಕೀಟನಾಶಕಗಳ ಮಾದರಿಗಳನ್ನು ಗುಣಮಟ್ಟವಿಶ್ಲೇಷಣೆ ಮಾಡಲಾಗಿದ್ದು, ಈ ಪೈಕಿ 169 ಪ್ರಕರಣ ಪತ್ತೆಯಾಗಿತ್ತು. ಮರು ಪರೀಕ್ಷೆಗೆ ಒಳಪಟ್ಟ91ರ ಪೈಕಿ 66 ಕಳಪೆ ಎಂದು ವರದಿಯಾಗಿದೆ. ಇದರಲ್ಲಿ 55 ತಯಾರಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಗೋವಿಂದರಾಜು, ಕೃಷಿ, ತೋಟಗಾರಿಕೆ ಅಧಿಕಾರಿಗಳು ಕೇವಲ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ರೈತರಿಗೆ ಕಾಡುವ ಕೀಟನಾಶಕಗಳ ನಿಯಂತ್ರಣ, ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆ ಕೀಟದಿಂದ ಹಾನಿಯಾಗಿ ನಷ್ಟಅನುಭವಿಸುತ್ತಿದ್ದಾನೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Russia Ukraine War : ಉಕ್ರೇನ್ ನಿಂದ ತಿರುಗಿ ಬಂದ ವಿದ್ಯಾರ್ಥಿನಿ ಹೇಳಿದ ಕಟು ವಾಸ್ತವ
ಕೃಷಿಯತ್ತ ಮಹಿಳೆಯರು ಹೆಚ್ಚು ಆಸಕ್ತಿ ಬೆಳಸಿಕೊಳ್ಳಿ: ಸಚಿವೆ ಶೋಭಾ
ಬೆಂಗಳೂರು:
ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚು ಆಸಕ್ತಿ ಬೆಳೆಸಿಕೊಂಡು ಕೃಷಿ ಉದ್ಯಮಿಗಳಾಗಬೇಕು ಎಂದು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ (FKCCI)) ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಉದ್ಯಮಿಗಳಾಗುವುದು ಸುಲಭವಲ್ಲ. ಹೀಗಿದ್ದರೂ ಪುರುಷ ಪ್ರಧಾನ ಉದ್ಯಮ ಕೇತ್ರದಲ್ಲಿ ಮಹಿಳೆಯರು ಯಶಸ್ವಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಮರಳುತ್ತಾರಾ? ಅವರೇ ಕೊಟ್ರು ಸ್ಪಷ್ಟನೆ
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಎಫ್‌ಕೆಸಿಸಿಐನಿಂದ ‘ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ರಾಜ್ಯ ಕೈಗಾರಿಕೆಗಳ ಅಭಿವೃದ್ಧಿ ಆಯುಕ್ತರಾದ ಗುಂಜನ ಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ, ಹಿರಿಯ ವಕೀಲರಾದ ಎಸ್‌.ಆರ್‌.ಅನುರಾಧ ಪ್ರದೀಪ್‌, ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್‌.ಪ್ರಸಾದ್‌, ಉಪಾಧ್ಯಕ್ಷರಾದ ಬಿ.ವಿ.ಗೋಪಾಲ್‌ ರೆಡ್ಡಿ ಮತ್ತು ರಮೇಶ್‌ ಚಂದ್ರ ಲಹೋತಿ ಮತ್ತಿತರರು ಉಪಸ್ಥಿತರಿದ್ದರು.