ಬೆಂಗಳೂರು(ಏ.22): ಲಾಕ್‌ಡೌನ್‌ ತೆರವಾದ ಬಳಿಕ ವಿಮಾನ ಪ್ರಯಾಣ ಮಾಡುವವರು ವಿಮಾನ ಹೊರಡುವ ಸಮಯಕ್ಕಿಂತ ಕನಿಷ್ಠ 3ರಿಂದ 4 ತಾಸು ಬೇಗ ವಿಮಾನ ನಿಲ್ದಾಣ ತಲುಪಬೇಕು!

ನಿಜ, ಕೊರೋನಾ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಇದೀಗ ಲಾಕ್‌ ಡೌನ್‌ ತೆರವಾದ ಬಳಿಕವೂ ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ನಿಲ್ದಾಣದ ಹೊರ ಆವರಣದಿಂದಲೇ ವೃತ್ತಾಕಾರದ ಗುರುತು ಮಾಡಲಾಗುತ್ತಿದೆ. ಪ್ರಯಾಣಿಕರು ಈ ನಿಗದಿತ ಗುರುತುಗಳಲ್ಲಿ ನಿಂತು ನಿಲ್ದಾಣ ಪ್ರವೇಶಿಸಬೇಕು.

ಸದ್ಯ ದೇಸಿ ವಿಮಾನಗಳಲ್ಲಿ ಪ್ರಯಾಣಿಸುವವರು ಕನಿಷ್ಠ 45 ನಿಮಿಷ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಬೇಕು. ಬಳಿಕ ತಪಾಸಣೆ, ಲಗೇಜ್‌ ತಪಾಸಣೆಗೂ ಒಳಗಾಗಬೇಕು. ಪ್ರಯಾಣಿಕರಿಂದ ಪ್ರಯಾಣಿಕರಿಗೆ ನಿರ್ದಿಷ್ಟಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಈ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರು ವಿಮಾನ ಹೊರಡುವ ಸಮಯಕ್ಕಿಂತ ಮೂರ್ನಾಲ್ಕು ತಾಸು ಬೇಗ ನಿಲ್ದಾಣ ತಲುಪಬೇಕಾಗುತ್ತದೆ. ಮೇ 3ರ ವರೆಗೆ ಲಾಕ್‌ಡೌನ್‌ ಇರುವುದರಿಂದ ಈ ಅವಧಿ ಮುಗಿದ ಬಳಿಕ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ವಿಮಾನ ಸೇವೆ ಪುನಾರಂಭವಾಗಲಿದೆ.

"

ಕ್ಯಾನ್ಸರ್‌ ಆಸ್ಪತ್ರೆಗೆ ಕೊರೋನಾ ಭೀತಿ!

ವಿದೇಶಕ್ಕೆ ಪ್ರಯಾಣಿಸುವವರು 5-6 ಗಂಟೆ ಮೊದಲೇ ಹೋಗ್ಬೇಕು?

ಸದ್ಯ ವಿದೇಶಕ್ಕೆ ಪ್ರಯಾಣಿಸುವವರು ಕನಿಷ್ಠ 3 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಹೋಗಬೇಕು. ಬ್ಯಾಗೇಜ್‌ ತಪಾಸಣೆ, ಸೆಕ್ಯುರಿಟಿ ಚೆಕ್‌ ಜತೆಗೆ ಇಮಿಗ್ರೇಷನ್‌ ಹಾಗೂ ಕಸ್ಟಮ್ಸ್‌ ತಪಾಸಣೆಗೆ ಒಳಪಡಬೇಕು. ಲಾಕ್‌ಡೌನ್‌ ಮುಕ್ತಾಯಗೊಂಡ ಬಳಿಕ ಅನ್ವಯವಾಗುವ ಹೊಸ ನಿಯಮಗಳನ್ನು ಪಾಲಿಸಬೇಕಾದರೆ ಕನಿಷ್ಠ 5ರಿಂದ 6 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ತಲುಪಬೇಕು ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲೂ ಶೀಘ್ರ ಪ್ಲಾಸ್ಮಾ ಥೆರಪಿ: ಕೇಂದ್ರ ಸರ್ಕಾರದ ಅನುಮತಿ!

ಪ್ರಯಾಣ ಸಮಯಕ್ಕಿಂತ ಪರೀಕ್ಷಾ ಸಮಯ ಹೆಚ್ಚು!

ಬೆಂಗಳೂರಿಂದ ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಗೆ, ಸಿಂಗಾಪುರ, ಮಲೇಷ್ಯಾ ಹೀಗೆ ಇನ್ನೂ ಅನೇಕ ದೇಶಗಳಿಗೆ 4ರಿಂದ 5 ಗಂಟೆ ಪ್ರಯಾಣವಷ್ಟೇ. ಲಾಕ್‌ಡೌನ್‌ ಮುಕ್ತಾಯವಾದ ಬಳಿಕ ಈ ದೇಶಗಳಿಗೆ ಪ್ರಯಾಣ ಮಾಡುವವರು, ವಿಮಾನದಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ವಿಮಾನ ನಿಲ್ದಾಣಗಳಲ್ಲಿ ಸಮಯ ಕಳೆಯಬೇಕಾಗಬಹುದು.