ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಆರೋಪಿ ಆತ್ಮಹತ್ಯೆ: ಪಿಐ, ಪಿಎಸ್‌ಐ ಸೇರಿ ಐವರು ಅಮಾನತು!
ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಉತ್ತರ ಕನ್ನಡದ ಹೊನ್ನಾವರ ಠಾಣಾ ಪಿಐ, ಪಿಎಸ್‌ಐ ಸೇರಿ ಐವರು ಅಮಾನತ್ತುಗೊಂಡಿದ್ದಾರೆ.
ಕಾರವಾರ, ಉತ್ತರಕನ್ನಡ (ಜೂ.25) ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಉತ್ತರ ಕನ್ನಡದ ಹೊನ್ನಾವರ ಠಾಣಾ ಪಿಐ, ಪಿಎಸ್‌ಐ ಸೇರಿ ಐವರು ಅಮಾನತ್ತುಗೊಂಡಿದ್ದಾರೆ.
ಆರೋಪಿ ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಪಾಲೀಷ್ ಮಾಡುವ ನೆಪದಲ್ಲಿ ಬಂಗಾರ ಕದಿಯುತ್ತಿದ್ದ. ಈ ಪ್ರಕರಣದಲ್ಲಿ ಬಿಹಾರ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು. ನಿನ್ನೆ ವಿಚಾರಣೆಗೆ ಕರೆತಂದಿದ್ದರು. ಆರೋಪಿ ಬಾಯಾರಿಕೆಯೆಂದು ನೀರು ಕುಡಿಯಲು ಹೋಗಿದ್ದ ವೇಳೆ ನೀರಿನೊಂದಿಗೆ ಬೆರೆಸಿ ವಿಷ ಸೇವನೆ. ವಿಷದ ವಾಸನೆಯಿಂದ ಕೃತ್ಯ ಗಮನಕ್ಕೆ ಬರುತ್ತಿದ್ದಂತೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಆರೋಪಿ.
ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಮೃತಪಟ್ಟ ಹಿನ್ನೆಲೆ ಈ ಪ್ರಕರಣದಲ್ಲಿ ಹೊನ್ನಾವರ ಠಾಣೆಯ ಪಿ.ಐ ಮಂಜುನಾಥ್, ಠಾಣೆಯ ಕ್ರೈ ಪಿ.ಎಸ್.ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಳಿಸಲಾಗಿದೆ.
ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕು ತುಂಬಿದ ಲಾರಿ