Asianet Suvarna News Asianet Suvarna News

ಮಾನ್ವಿ: ಕೌಟುಂಬಿಕ ಕಲಹಕ್ಕೆ ಮನನೊಂದು ಮೊಬೈಲ್ ಟವರ್ ಏರಿ ಕುಳಿತ ಯುವಕ!

ಕೌಟುಂಬಿಕ ಜಗಳ ಹಿನ್ನೆಲೆ ಯುವಕನೋರ್ವ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಅಮ್ಜದ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ

A young man tried to commit suicide by climbing a mobile tower in manvi town rav
Author
First Published Oct 19, 2023, 5:41 PM IST

ರಾಯಚೂರು (ಅ.19) : ಕೌಟುಂಬಿಕ ಜಗಳ ಹಿನ್ನೆಲೆ ಯುವಕನೋರ್ವ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ಅಮ್ಜದ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ದಿನನಿತ್ಯ ಮನೆಯಲ್ಲಿ ಕೌಟುಂಬಿಕ ಕಲಹದಿಂದ ಮನನೊಂದಿದ್ದ ಯುವಕ ಇಂದು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ. ಸುಮಾರು 1 ಗಂಟೆ ಕಾಲ ಟವರ್ ಮೇಲೆ ಕುಳಿತು ಹೈಡ್ರಾಮಾ. ಯುವಕನನ್ನು ಕೆಳಗಿಳಿಸಲು ಮಾನ್ವಿ ಪೊಲೀಸರು ಹರಸಾಹಸ. ಕೊನೆಗೂ ಯುವಕನ ಮನವೊಲಿಸಿ ಕೆಳಗಿಸಿದ ಪೊಲೀಸರು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಎರಡು ತಿಂಗಳಿಂದ ವೇತನ ನೀಡದೆ ಕಿರುಕುಳ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ರಾಣೆಬೆನ್ನೂರು: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಇಲ್ಲಿಯ ಚೌಡೇಶ್ವರಿ ನಗರದಲ್ಲಿ ನಡೆದಿದೆ.

ತಿಪ್ಪಣ್ಣ ಈರಪ್ಪ ಕೋಲಕಾರ(55)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನ ಕೊಳಗಾನೂರ ಗ್ರಾಮದ ತಿಪ್ಪಣ್ಣ ಇಲ್ಲಿಯ ಚೌಡೇಶ್ವರಿ ನಗರದ 1ನೇ ಕ್ರಾಸ್‌ನಲ್ಲಿ ವಾಸವಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios