ಮದುವೆ ಪ್ರಸ್ತಾಪಗಳು ದಪ್ಪದ ಕಾರಣ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ವೆಂಕಟೇಶ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು (ಜ.17): ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದೋ, ಪ್ರೀತಿ ನಿರಾಕರಣೆಯಿಂದಲೋ ದಿನನಿತ್ಯ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವುದು ಸಮೂಹ ಸನ್ನಿಯಂತೆ ನಡೆಯುತ್ತಿರುವುದು ಆತಂಕ ಮೂಡಿಸುವಂತದ್ದು. ಇದೀಗ ಅಂತಹದ್ದೇ ಮತ್ತೊಂದು ದುರ್ಘಟನೆ ನಡೆದು ಹೋಗಿದೆ.
ದಪ್ಪವಾಗಿರೋದಕ್ಕೆ ಮದುವೆಯಾಗಲು ಹುಡುಗಿಯರು ನಿರಾಕರಣೆ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಮತ್ತೊಬ್ಬ ಟೆಕ್ಕಿ ಸಾವು; ಮಾವನ ಕಾಮದಾಟಕ್ಕೆ ಬಲಿಯಾದ ಮದುವೆಯಾಗದ ಸೊಸೆ!
ವೆಂಕಟೇಶ್ (28) ಆತ್ಮಹತ್ಯೆಗೆ ಶರಣಾದ ಯುವಕ. ಮಂಗಳಮ್ಮ ದಂಪತಿಗೆ ವೆಂಕಟೇಶ್ ಸೇರಿ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮದುವೆ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿಲ್ಲ. ಮಕ್ಕಳಿಬ್ಬರಿಗೆ ಮದುವೆ ಮಾಡಲು ಎಲ್ಲ ಕಡೆ ಕನ್ಯೆ ಹುಡುಕಿದ್ದಾರೆ. ಆದರೆ ಮಕ್ಕಳು ದಪ್ಪ ಇರೋ ಕಾರಣಕ್ಕೆ ಹೋದಲ್ಲೆಲ್ಲ ಮದುವೆ ಪ್ರಸ್ತಾಪ ತಿರಸ್ಕಾರ ಮಾಡಲಾಗಿದೆ. ಇದರಿಂದ ಮನನೊಂದ ಯುವಕ ವೆಂಕಟೇಶ ಆತ್ಮಹತ್ಯೆಗೆ ಶರಣಾಗಿದ್ದಾನೆ.
