ಮನೆ ಮಂಜೂರು ಮಾಡದ್ದಕ್ಕೆ ಬೇಸತ್ತು ಸಿಎಂ ಕಾರ್ಯಕ್ರಮಕ್ಕೆ ನುಗ್ಗಿ ಮಹಿಳೆ ರಂಪಾಟ!
ವಸತಿ ಯೋಜನೆಯಡಿ ಮನೆ ಸಿಗದ್ದಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ನುಗ್ಗಿ ಮಹಿಳೆಯೋರ್ವಳು ರಂಪಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು (ಡಿ.2): ವಸತಿ ಯೋಜನೆಯಡಿ ಮನೆ ಸಿಗದ್ದಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ನುಗ್ಗಿ ಮಹಿಳೆಯೋರ್ವಳು ರಂಪಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಶಿರಾ ಮೂಲದ ರಾಬಿಯಾ ಅಸ್ಲಂ ಪಾಷಾ, ರಂಪಾಟ ಮಾಡಿದ ಮಹಿಳೆ.'ಪ್ರತಿವರ್ಷವೂ ಅರ್ಜಿ ಹಾಕ್ತಾ ಬಂದಿದ್ದೇನೆ, ಇವತ್ತಿನವರೆಗೂ ಮನೆ ಮಂಜೂರು ಮಾಡ್ತಿಲ್ಲ. ಸಿಎಂ ಮುಂದೆ ಸಮಸ್ಯೆ ಹೇಳಿಕೊಳ್ಳಲು ವೇದಿಕೆಯತ್ತ ಓಡಿ ಬಂದ ಮಹಿಳೆ. ಈ ವೇಳೆ ಮಹಿಳೆಯನ್ನು ತಡೆದ ಪೊಲೀಸರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮಹಿಳೆ, ನಮ್ಮ ಸರ್ಕಾರ ಮಹಿಳೆಯರ ಪರ ಅಂತೀರಾ, ಬಡವರ ಪರ ಅಂತೀರಾ ಆದರೆ ಸಮಸ್ಯೆ ಹೇಳಿಕೊಳ್ಳಲು ಬಂದ್ರೆ ನಮ್ಮನ್ನ ನಿಮ್ಮ ಬಳಿ ಬಿಡಲ್ಲ ಎಂದು ಪೊಲೀಸರ ವಿರುದ್ಧ ಕೂಗಾಡಿದ ಮಹಿಳೆ. ಮಹಿಳೆಯ ಕೂಗಾಟ ಕಂಡು ಓಡೋಡಿ ಬಂದ ಪರಮೇಶ್ವರ್, ಬಳಿಕ ಮಹಿಳೆಯ ಸಮಸ್ಯೆ ಆಲಿಸಿ, ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಕೈಯಲ್ಲಿ ಬ್ಯಾಟು, ತಲೆಮೇಲೆ ಹ್ಯಾಟು; ಲುಂಗಿ ಮೇಲೆಯೇ ಕ್ರಿಕೆಟ್ ಆಡಿದ ಸಿಎಂ ಸಿದ್ದರಾಮಯ್ಯ!
ಸ್ಲಂ ಬೋರ್ಡ್ ನಿಂದ ಮನೆಗಾಗಿ ಅರ್ಜಿ ಹಾಕಿದ್ದರು. ಸಾಕಷ್ಟು ಬಾರಿ ಸಂಬಂಧ ಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಿದ್ದರೂ ಮನೆ ಇನ್ನೂ ಮಂಜೂರು ಆಗಿರಲಿಲ್ಲ. ಸಾಲದ್ದಕ್ಕೆ ಶಿರಾ ಶಾಸಕ ಟಿಬಿ ಜಯಚಂದ್ರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಶಾಸಕ ಟಿಬಿ ಜಯಚಂದ್ರರ ಉಡಾಫೆ ಉತ್ತರಕ್ಕೆ ಆಕ್ರೋಶ ಹೊರಹಾಕಿದ್ದ ಮಹಿಳೆ. ಇದೆಲ್ಲದರಿಂದ ಬೇಸತ್ತು ಕೊನೆಗೆ ಇಂದು ತುಮಕೂರಿಗೆ ಸಿಎಂ ಬರುವ ಸುದ್ದಿ ತಿಳಿದಿರುವ ಮಹಿಳೆ ಕೈ ಯಲ್ಲಿ ಮೂರು ವರ್ಷದ ಮಗು ಎತ್ತಿಕೊಂಡು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದಾಳೆ.