Asianet Suvarna News Asianet Suvarna News

ಹೊಲಕ್ಕೆ ಹೋಗುವ ರೈತರನ್ನು ಸಾಯಿಸುವ ಕಣಜ ಹುಳು

ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ ಯಲೋದಹಳ್ಳಿ, ಕಂಸಾಗರ ಭಾಗದಲ್ಲಿ ಹೊಲಗಳಿಗೆ ಹೋಗುವ ರೈತರನ್ನು ಕಚ್ಚಿ ಸಾಯಿಸುತ್ತಿದ್ದು, ಈಗ ರೈತರು ಗುಡ್ಡ ಹಾಗು  ಹೊಲಗಳಿಗೆ ಹೋಗುತ್ತಿಲ್ಲ. ಅಪಾಯಕಾರಿ ಕಣಜಗಳ ದಾಳಿಯಿಂದ ಕಳೆದೊಂದು ತಿಂಗಳಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.

A wasp that kills farmers who go to the fields sat
Author
First Published Nov 13, 2022, 5:47 PM IST

ವರದರಾಜ್ ಏಷ್ಯಾನೆಟ್  ಸುವರ್ಣನ್ಯೂಸ್
ದಾವಣಗೆರೆ (ನ.13) : ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ ಯಲೋದಹಳ್ಳಿಯಲ್ಲಿ ಹೊಸದೊಂದು ಸಮಸ್ಯೆ ಉದ್ಭವಿಸಿದೆ. ಯಲೋದಹಳ್ಳಿ ಗುಡ್ಡದಲ್ಲಿ ಕಣಜ (ಗ್ರಾಮೀಣ ಭಾಷೆಯಲ್ಲಿ ಕಾಡು ಜೀರಿಗೆ) ಎಂದು ಕರೆಯಲ್ಪಡುವ ಕೀಟದಿಂದ ಗ್ರಾಮಸ್ಥರು ರೈತರು ಭಯಭೀತರಾಗಿದ್ದಾರೆ. ಇದರಿಂದಾಗಿ ಯಲೋದಹಳ್ಳಿ, ಕಂಸಾಗರ ಭಾಗದಲ್ಲಿ ಹೊಲಗಳಿಗೆ ಹೋಗುವ ರೈತರನ್ನು ಕಚ್ಚಿ ಸಾಯಿಸುತ್ತಿದ್ದು, ಈಗ ರೈತರು ಗುಡ್ಡ ಹಾಗು  ಹೊಲಗಳಿಗೆ ಹೋಗುತ್ತಿಲ್ಲ. ಅಪಾಯಕಾರಿ ಕಣಜಗಳ ದಾಳಿಯಿಂದ ಕಳೆದೊಂದು ತಿಂಗಳಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ರೈತರಿಗೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ. ಇತ್ತೀಚೆಗೆ ಭತ್ತ (Paddy)ಮತ್ತು ಅಡಕೆಗೆ ರೋಗಗಳು ಕಾಣಿಸಿಕೊಂಡು ರೈತರು (Farmers) ಪರದಾಡಿದ್ದರು.  ಈಗ ದಾವಣಗೆರೆ  (Davanagere)ಜಿಲ್ಲೆಯ ಬಸವಾಪಟ್ಟಣದಲ್ಲಿ ಕಣಜಗಳ ಕಾಟದಿಂದ ಸುತ್ತಲಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಅ.5ರಂದು ಸಮೀಪದ ಕಂಸಾಗರದ (Kamsagara) ನಿವಾಸಿ ಮಲ್ಲೇಶ್ (24) ತೋಟಕ್ಕೆ ಹೋಗುತ್ತಿರುವಾಗ, ಸಮೀಪದಲ್ಲಿದ್ದ ಗೂಡಿನಿಂದ ಏಕಾಏಕಿ ದಾಳಿ ಮಾಡಿದ ಕಣಜಗಳು ಕಚ್ಚಿದ್ದರಿಂದ ಸಾವನ್ನಪ್ಪಿದ್ದರು. ನ.10ರಂದು ಯಲೋದಹಳ್ಳಿಯ (Yalodahalli) ರೈತ ಶಿವಕುಮಾರ್ ಕೂಡ ಕಣಜ ಹುಳಗಳು ದಾಳಿಯಿಂದ (Attack) ಮೃತಪಟ್ಟಿದ್ದಾರೆ.

Davanagere: 43 ವರ್ಷಗಳ ನಂತರ ಅಣಜಿ ಕರೆ ಭರ್ತಿ, 13 ಹಳ್ಳಿ ಜನರಿಂದ ಕೆರೆ ಹೊನ್ನಮ್ಮ ಜಾತ್ರೆ

ಹುಳ ಕಚ್ಚಿದರೆ ತಪ್ಪಿಸಿಕೊಳ್ಳಲು ದಾರಿಯಿಲ್ಲ:
ಯಲೋದಹಳ್ಳಿ ಚುಕ್ಕಡದಮ್ಮಗುಡ್ಡ (Chukkadadamma) ಸುತ್ತಮುತ್ತ ಈಗ ಹುಳಗಳದ್ದೇ ಮಾತು. ಆ ಹುಳದ ಗೂಡು (Insect nest) ಇರುವ ಕಡೆ ರೈತರು ಜಮೀನಿಗೆ (Land) ಹೋಗುತ್ತಿಲ್ಲ. ಜಮೀನಿಗೆ ಹೋದಾಗ ಹುಳಗಳು ಬೆನ್ನಟ್ಟಿದರೆ ಏನು ಮಾಡಬೇಕೆಂದು ಭಯಭೀತರಾಗಿದ್ದಾರೆ. ಬೇಕಾದ್ರೆ ಕರಡಿ (Bear), ಚಿರತೆ (Leopard), ಹುಲಿ (Tiger) ಎದುರಿಸಬಹುದು ಆದ್ರೆ ಕಣಜ ಜಾತಿಯ ಹುಳಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಹೆಜ್ಜೇನು ಮಾದರಿ ಹುಳ ಇದಾಗಿದ್ದು ದಾಳಿ ಮಾಡಲು ಮುಂದಾದರೆ, ತಪ್ಪಿಸಿಕೊಳ್ಳಲು ದಾರಿ ಕಾಣದೆ ರೈತರು ಭಯದಿಂದ ಜೀವನ ಮಾಡುತ್ತಿದ್ದಾರೆ.

ಜೂನ್‌ನಲ್ಲಿ ಕಣಜ ಸಂತತಿ ಆರಂಭ:
ಸಾಮಾನ್ಯವಾಗಿ ಉಷ್ಣವಲಯದ ತೋಟಗಳ (Tropical Lands) ಸಮೀಪದಲ್ಲಿ ಗೂಡು ಕಟ್ಟಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಜೀವನ ನಡೆಸುವ ಈ ಅಪಾಯಕಾರಿ (Dangerous) ಕೀಟ ಮನುಷ್ಯನ ಮೇಲೆ ಗುಂಪಾಗಿ ದಾಳಿ ಮಾಡುವುದರಿಂದ ತಪ್ಪಿಸಿಕೊಳ್ಳಲಾಗದೇ ಜೀವ ಕಳೆದು ಕೊಳ್ಳಬೇಕಾದ ಪ್ರಸಂಗಗಳೇ ಹೆಚ್ಚಾಗಿವೆ. 5.5 ಸೆ.ಮೀ ಉದ್ದದ ಈ ಕೀಟ ಬೇರೆ ಕೀಟಗಳಿಗಿಂತ ದೊಡ್ಡದಾಗಿದ್ದು, ನೋಡಲು ಸುಂದರವಾದರೂ ಕಚ್ಚುವುದನ್ನು ನೋಡಿದರೆ ಎದೆ ನಡುಗಿಸುತ್ತದೆ. 'ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ (June Month) ಈ  ಕೀಟಗಳು ಮರಗಳು (Tree) ಅಥವಾ ಪೊದೆಗಳಲ್ಲಿ ತಮ್ಮ ಜೊಲ್ಲು (Drool)ರಸ, ಮಣ್ಣು ಮತ್ತು ನುಣುಪಾದ ಸಸ್ಯಗಳನ್ನು ಬಳಸಿ ಮಡಕೆ ಆಕಾರದ (Pot Shape) ಗೂಡು ಕಟ್ಟುತ್ತವೆ. ಗೀಜಗನ‌ ಗೂಡಂತೆ ಮರಕ್ಕೆ ನೇತುಬೀಳುವ ಗೂಡಿನಲ್ಲಿ ಜೇನಿನಂತೆ ರಾಣಿ ಹುಳು ಎಲ್ಲಾ ಹುಳುಗಳನ್ನು ನಿಯಂತ್ರಿಸುತ್ತದೆ. ಅದು ಇಡುವ  ಮೊಟ್ಟೆಗಳನ್ನು ಇತರ ಹುಳುಗಳು ಕಾಪಾಡುತ್ತವೆ  ಎನ್ನುತ್ತಾರೆ  ಕೀಟ ತಜ್ಞರು.

Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಡಿಸೆಂಬರ್ ವರೆಗೂ ಕಣಜ ಕಾಟ:
ಗೂಡಿನಲ್ಲಿರುವ ಮೊಟ್ಟೆ (Egg) ಅಥವಾ ಹುಳುಗಳನ್ನು ಕಾಪಾಡುವ ದೃಷ್ಟಿಯಿಂದ ಗೂಡಿನ ಹತ್ತಿರ ಬರುವ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಎರಗಿ ಕಚ್ಚುತ್ತವೆ. ಆದರೆ, ನಿರಂತರವಾಗಿ ಕಾಡುವುದಿಲ್ಲ. ಡಿಸೆಂಬರ್ (December)ತಿಂಗಳು ಆರಂಭ ಆಗುತ್ತಿದ್ದಂತೆಯೇ ಶೇ.95ರಷ್ಟು ಕೀಟಗಳು ಸಾಯುತ್ತವೆ. ಅವು ಜಾಗೃತವಾಗಿರುವ 6 ತಿಂಗಳಲ್ಲಿ ಅಪಾಯ ಉಂಟುಮಾಡುತ್ತವೆ. ಮನುಷ್ಯರು ಇವುಗಳ ವಿಷದ ಪರಿಣಾಮದಿಂದ ಸಾವನ್ನಪ್ಪುತ್ತಾನೆ. ಹುಳುಗಳು - ಕಚ್ಚಿದಾಗ ಅವುಗಳಲ್ಲಿರುವ 'ಅಸೆಟೈಲ್‌ಕೋಲಿನ್' (Acetylcholine) ಎಂಬ ವಿಷಕಾರಿ (Poison) ಅಂಶವನ್ನು ಕಚ್ಚಿದವರ ದೇಹಕ್ಕೆ ಕಳಿಸುತ್ತವೆ. ಈ ವಿಷ ಶೀಘ್ರವಾಗಿ ವ್ಯಾಪಿಸಿ ಮನುಷ್ಯ ಸಾವಿಗೀಡಾಗುತ್ತಾನೆ. ಕೀಟಗಳು ಕಚ್ಚಿದ ಕೂಡಲೇ ಕಚ್ಚಿದ ಸ್ಥಳವನ್ನು ಹೈಡ್ರೋಜ‌ನ್ ಪೆರಾಕ್ಸೆಡ್ ದ್ರವದಿಂದ (Hydrogen peroxide liquid)ತೊಳೆದು, ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು' ಎನ್ನುತ್ತಾರೆ ಎಂದು ಸ್ಥಳೀಯ ವೈದ್ಯ ಡಾ.ಜಿ.ಎಂ. ಮಹೇಶ್‌ ಹೇಳುತ್ತಾರೆ.

ಕಣಜ - ಜೇನುಗಳ ಶತ್ರು:
ಈ ಕಣಜ ಹುಳುಗಳು ಜೇನು (Bee) ನೊಣಗಳ ಶತ್ರುಗಳಾಗಿದ್ದು, ಜೇನುಗೂಡಿನ ಬಳಿ ಹೋಗಿ ಶಬ್ದ ಮಾಡಿ ಅವು ಹೊರಗೆ ಬಂದ ಕೂಡಲೇ ಅವುಗಳನ್ನು ಕೊಲ್ಲುತ್ತವೆ. ಜಿಲ್ಲೆಯಲ್ಲಿ ಅಡಿಕೆ ಮತ್ತು ಇತರ ತೋಟದ ಬೆಳೆಗಳು ಹೆಚ್ಚಾಗಿರುವುದರಿಂದ ಅಲ್ಲಿನ ಬೆಳೆಗಳಲ್ಲಿರುವ ಮಕರಂದವನ್ನು (Nectar) ಹೀರಲು, ಈ ಕೀಟಗಳು ತೋಟಗಳ ಬಳಿ ಗೂಡು ಕಟ್ಟಿಕೊಂಟಿವೆ. ಅರಣ್ಯ ಇಲಾಖೆ ಇಂತಹ ಗೂಡುಗಳನ್ನು ಗುರುತಿಸಿ ನಾಶ ಮಾಡಿ ಜನರಿಗೆ ರಕ್ಷಣೆ ನೀಡಬೇಕು' ಎಂದು  ರೈತರು ಮನವಿ ಮಾಡಿದ್ದಾರೆ.

ಮುಂದಿನ ಒಂದೆರೆಡು ದಿನಗಳಲ್ಲಿ ರಾತ್ರಿ ವೇಳೆ ಬೆಂಕಿಯಿಂದ ಕಣಜ ಗೂಡುಗಳನ್ನು ನಾಶಪಡಿಸಲು ಯೋಜನೆ ರೂಪಿಸಿದ್ದು ಅಲ್ಲಿವರೆಗೂ ಗೂಡು ಇರುವ ಅಕ್ಕಪಕ್ಕದ ಜಮೀ‌ನುಗಳ ರೈತರು ಗುಡ್ಡಗಾಡುಗಳಿಗೆ ಹೋಗದಂತೆ ಎಚ್ಚರವಹಿಸಬೇಕು.
ಮಂಜುನಾಥ್, ದಾಗಿನಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷ

Follow Us:
Download App:
  • android
  • ios