Asianet Suvarna News Asianet Suvarna News

ಪುಗ್ಸಟ್ಟೆ ಎಣ್ಣೆ ಆಸೆಗೆ ಹೊಸ ಆಟೋ ಕಳ್ಕೊಂಡ ಚಾಲಕ; ಕಂಠಪೂರ್ತಿ ಕುಡಿಸಿ ಕದ್ದೊಯ್ದ ಅಪರಿಚಿತ!

ಚಾಲಕನೊಬ್ಬ ಮದ್ಯಕ್ಕೆ ಆಸೆ ಬಿದ್ದು ತನ್ನ ಹೊಸ ಆಟೋವನ್ನು ಕಳೆದುಕೊಂಡ ಘಟನೆ ದಾಸರಹಳ್ಳಿಯ 8ನೇ ಮೈಲಿ ಅಟೋ ಸ್ಟ್ಯಾಂಡ್‌ನಲ್ಲಿ ನಡೆದಿದೆ. ವಿಜಯ… ಕುಮಾರ್‌ ಆಟೋ ಕಳೆದುಕೊಂಡ ಚಾಲಕ. ಆ.17ರ ಮಧ್ಯಾಹ್ನ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ ವಿಜಯ್‌ ಕುಮಾರ್‌ ಅವರ ಆಟೋ ಕದ್ದು ಪರಾರಿ ಆಗಿದ್ದಾನೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A stranger stole a new auto  after drinking alcohol from the auto owner at bengaluru rav
Author
First Published Aug 19, 2023, 10:42 AM IST

ಪೀಣ್ಯ ದಾಸರಹಳ್ಳಿ (ಆ.19) :  ಚಾಲಕನೊಬ್ಬ ಮದ್ಯಕ್ಕೆ ಆಸೆ ಬಿದ್ದು ತನ್ನ ಹೊಸ ಆಟೋವನ್ನು ಕಳೆದುಕೊಂಡ ಘಟನೆ ದಾಸರಹಳ್ಳಿಯ 8ನೇ ಮೈಲಿ ಅಟೋ ಸ್ಟ್ಯಾಂಡ್‌ನಲ್ಲಿ ನಡೆದಿದೆ.

ವಿಜಯ… ಕುಮಾರ್‌ ಆಟೋ ಕಳೆದುಕೊಂಡ ಚಾಲಕ. ಆ.17ರ ಮಧ್ಯಾಹ್ನ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ ವಿಜಯ್‌ ಕುಮಾರ್‌ ಅವರ ಆಟೋ ಕದ್ದು ಪರಾರಿ ಆಗಿದ್ದಾನೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ: ಮೊಬೈಲ್‌ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ

ಅಪರಿಚಿತ ಚಾಲಕ ವಿಜಯ್‌ ಅವರನ್ನು ಪರಿಚಯ ಮಾಡಿಕೊಂಡು ಆತ್ಮೀಯವಾಗಿ ಮಾತನಾಡಿದ್ದಾನೆ. ಬಳಿಕ ‘ಬಾ ಗುರು ಎಣ್ಣೆ ಹೊಡೆಯೋಣ’ ಎಂದು ಆಟೋ ಸ್ಟ್ಯಾಂಡ್‌ ಪಕ್ಕದಲ್ಲೇ ಇದ್ದ ಬಾರ್‌ಗೆ ವಿಜಯ್‌ ಅವರನ್ನು ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ದುಡ್ಡಲ್ಲೇ ಮದ್ಯ ಕುಡಿಸಿದ್ದಾನೆ. ಎಣ್ಣೆ ಕುಡಿದು ಹೊಸ ಅಟೋದಲ್ಲಿ ಮಲಗಬಾರದೆಂದು ವಿಜಯ… ಕುಮಾರ್‌ ಅವರು ಅರೋಪಿ ತಂದಿದ್ದ ಹಳೆಯ ಅಟೋದಲ್ಲಿ ಮಲಗಿದ್ದಾರೆ. ಮಲಗಿ ಎದ್ದೇಳುವಷ್ಟರಲ್ಲಿ ಆತನ ಹಳೆಯ ಅಟೋ ಬಿಟ್ಟು ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ.

Bengaluru ಪೊಲೀಸರೇ ನನ್ನ ಹೆಲ್ಮೆಟ್‌ ಕಳೆದೋಗಿದೆ: ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು

ಇನ್ನು ಅಟೋದಲ್ಲಿದ್ದ .25 ಸಾವಿರ ಬೆಲೆಬಾಳುವ ಮೊಬೈಲ್‌ ಜೊತೆ ಆಟೋವನ್ನು ಎತ್ತಿಕೊಂಡು ಅಪರಿಚಿತ ಪರಾರಿಯಾಗಿದ್ದಾನೆ. ಇತ್ತ ಹಳೆಯ ಅಟೋ ಕೂಡ ಸುದ್ದಗುಂಟೆಪಾಳ್ಯದಲ್ಲಿ ಕದ್ದಿರುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Follow Us:
Download App:
  • android
  • ios