Asianet Suvarna News Asianet Suvarna News

ಮಾನಸಿಕ ಖಿನ್ನತೆಯಿಂದ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ; ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತ!

ಮಾನಸಿಕ ಖಿನ್ನತೆಯಿಂದ ವ್ಯಕ್ತಿಯೋರ್ವ ಮೆಟ್ರೋ ಹಳಿಯ ಮೇಲೆ ಬಿದ್ದು ಆತ್ಮಹತ್ಯೆ ಯತ್ನಿಸಿ ತೀವ್ರ ಗಾಯಗೊಂಡ ಘಟನೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ನಡೆದಿದೆ.

A person tried to commit suicide by jumping on Namma metro in hosalli metro station bengaluru rav
Author
First Published Jun 10, 2024, 11:52 PM IST | Last Updated Jun 11, 2024, 12:14 AM IST

ಬೆಂಗಳೂರು (ಜೂ.11): ಮಾನಸಿಕ ಖಿನ್ನತೆಯಿಂದ ವ್ಯಕ್ತಿಯೋರ್ವ ಮೆಟ್ರೋ ಹಳಿಯ ಮೇಲೆ ಬಿದ್ದು ಆತ್ಮಹತ್ಯೆ ಯತ್ನಿಸಿ ತೀವ್ರ ಗಾಯಗೊಂಡ ಘಟನೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ನಡೆದಿದೆ.

ಎಂ ಸಾಗರ್ (34) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಆಸ್ಪತ್ರೆಗೆ ದೌಡಾಯಿಸಿದ ಗೋವಿಂದರಾಜನಗರ ಪೊಲೀಸರು. ಗಾಯಾಳು ಬಗ್ಗೆ ಕುಟುಂಬಸ್ಥರು, ಮೆಟ್ರೋ ಸಿಬ್ಬಂದಿಯಿಂದ ಮಾಹಿತಿ ಪಡೆದ ಪೊಲೀಸರು. ಘಟನೆಯಿಂದ ಕೆಲಕಾಲ ಮೆಟ್ರೋ ಸ್ಥಗಿತವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಅಧಿಕಾರಿಗಳು ಸ್ಥಳ ಪರಿಶೀಲನೆ ಬಳಿಕ ಸಂಚಾರ ಮುಂದುವರಿಸಿದ ಮೆಟ್ರೋ.

ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ!

ಬೆಂಗಳೂರಿನ ಬಸವೇಶ್ವರನಗರ ನಿವಾಸಿಯಾಗಿರು ಎಂ ಸಾಗರ್ ಇಂಜಿನೀಯರಿಂಗ್ ಪದವಿ ಅರ್ಧಕ್ಕೆ ನಿಲ್ಲಿಸಿದ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನೆಂದು ತಿಳಿದು ಬಂದಿದೆ. ಇಂದು ಆತ್ಮಹತ್ಯೆಗೆ ಮಾಡಿಕೊಳ್ಳಲೆಂದ ಮನೆಯಿಂದ ನೇರವಾಗಿ ಮೆಟ್ರೋಲ್ ನಿಲ್ದಾಣಕ್ಕೆ ಬಂದಿದ್ದ. ಮೆಟ್ರೋ ನಿಲ್ದಾಣಕ್ಕೆ ಬರುವ ಮೊದಲು ಯಾರಿಗೂ ಗುರುತು ಸಿಗದಿರಲೆಂದು ಮೊಬೈಲ್ ಮನೆಯಲ್ಲೇ ಬಿಟ್ಟುಬಂದಿದ್ದ ಆಸಾಮಿ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ.

Latest Videos
Follow Us:
Download App:
  • android
  • ios