Udupi: ಪುತ್ತಿಗೆ ಶ್ರೀ ಕೈಯಲ್ಲಿದ್ದ ಮೈಕ್‌ ಹಿಡಿದ ಕೋತಿ: ವಿಡಿಯೋ ವೈರಲ್‌

ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೇಶಸಂಚಾರ ಕೈಗೊಂಡಿದ್ದು, ಭಾನುವಾರ ಭುವನೇಶ್ವರದ ಪ್ರಸಿದ್ಧ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದರು. 

A monkey holding the mic in Puthige Sri hand at Udupi Video goes viral gvd

ಉಡುಪಿ (ಜು.03): ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೇಶಸಂಚಾರ ಕೈಗೊಂಡಿದ್ದು, ಭಾನುವಾರ ಭುವನೇಶ್ವರದ ಪ್ರಸಿದ್ಧ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೋತಿಯೊಂದು ಹಠಾತ್ತನೆ ವೇದಿಕೆಗೆ ಬಂದು ಪುತ್ತಿಗೆ ಶ್ರೀಗಳ ಕೈಯಲ್ಲಿದ್ದ ಮೈಕ್‌ ಹಿಡಿದುಕೊಂಡ ಘಟನೆ ನಡೆದಿದೆ. ಈ ಘಟನೆಯನ್ನು ಶ್ರೀಗಳು ತಮಗೆ ಸಾಕ್ಷಾತ್‌ ಹನುಮಾನ್‌ ಜೀ ಆಶೀರ್ವಾದ ಮಾಡಲು ಬಂದಂತಾಯಿತು ಎಂದು ಉದ್ಘರಿಸಿದ್ದಾರೆ.

ಶ್ರೀಗಳು ದೀಕ್ಷೆ ನೀಡುತ್ತಿದ್ದ ವೇಳೆ ಕೋತಿ ಬಂದಾಗ ನಮಗೆ ಶ್ರೀಕೃಷ್ಣನ ಆಶೀರ್ವಾದದ ಜೊತೆಗೆ ಹನುಮಂತನ ಆಶೀರ್ವಾದವೂ ದೊರೆಯುತ್ತಿದೆ ಎಂದು ಹೇಳಿ ಕೋತಿಗೆ ಬಾಳೆಹಣ್ಣು ನೀಡಿದರು. ಆದರೆ, ಬಾಳೆಹಣ್ಣನ್ನು ಮುಟ್ಟದ ಕೋತಿ, ಶ್ರೀಗಳು ಕುಳಿತಿದ್ದ ಪೀಠವನ್ನು ಹತ್ತಿ ಅವರ ಕೈಯಲ್ಲಿದ್ದ ಮೈಕನ್ನು ಕೆಲಕಾಲ ಹಿಡಿದುಕೊಂಡು ನಂತರ ಹೊರಗೆ ಹಾರಿತು.

ಪುತ್ತಿಗೆ ಶ್ರೀಗಳು ತಮ್ಮ ಪಟ್ಟಶಿಷ್ಯ ಸುಶೀಂದ್ರ ತೀರ್ಥ ಸ್ವಾಮೀಜಿ ಅವರೊಂದಿಗೆ ಇಸ್ಕಾನ್‌ ದೇವಾಲಯದಲ್ಲಿ ತಾವು ಸಂಕಲ್ಪಿಸಿರುವ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ನೀಡುತ್ತಿದ್ದರು. ಆಗ ಎಲ್ಲಿಂದಲೋ ಹನುಮಾನ್‌ ಲಂಗೂರ್‌ ಪ್ರಭೇದದ ಈ ಕೋತಿ ದೇವಾಲಯದೊಳಗೆ ಬಂದು ನೇರವಾಗಿ ವೇದಿಕೆಯಲ್ಲಿ ಶ್ರೀಗಳ ಮುಂದಿದ್ದ ಮೇಜನ್ನು ಹತ್ತಿ ಶ್ರೀಗಳನ್ನು ನೋಡತೊಡಗಿತು.

ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ಆಗ ಶ್ರೀಗಳು, ನಮಗೆ ಶ್ರೀಕೃಷ್ಣನ ಆಶೀರ್ವಾದದ ಜೊತೆಗೆ ಹನುಮಂತನ ಆಶೀರ್ವಾದವೂ ದೊರೆಯುತ್ತಿದೆ ಎಂದು ಸಂತಸದಿಂದ ಹೇಳಿದರು. ನಂತರ, ಉಭಯ ಶ್ರೀಗಳು ಕೋತಿಗೆ ಬಾಳೆಹಣ್ಣು ನೀಡಿದರು. ಆದರೆ, ಬಾಳೆಹಣ್ಣನ್ನು ಮುಟ್ಟದ ಕೋತಿ, ಶ್ರೀಗಳು ಕುಳಿತಿದ್ದ ಪೀಠವನ್ನು ಹತ್ತಿ ಅವರ ಕೈಯಲ್ಲಿದ್ದ ಮೈಕನ್ನು ಹಿಡಿದುಕೊಂಡಿತು. ನಂತರ ಒಂದೆರಡು ನಿಮಿಷ ಅಲ್ಲಿದ್ದ ಕೋತಿ ಹೊರಗೆ ಹಾರಿತು. ಈ ವಿಡಿಯೋ ವೈರಲ್‌ ಆಗುತ್ತಿದ್ದು, ಸ್ವತಃ ಹನುಮಂತ ದೇವರೇ ಸ್ವಾಮೀಜಿ ಅವರಿಗೆ ದರ್ಶನ ನೀಡಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ.

Latest Videos
Follow Us:
Download App:
  • android
  • ios