ಅಬು ಹನೀಫಾ ಮಸೀದಿಯಲ್ಲಿ ನಡೆಯಿತು ಪವಾಡ! ಗ್ಯಾಸ್ ಸಂಪರ್ಕವಿಲ್ಲದೆ 6 ನಿಮಿಷ ಕಾಲ ಉರಿದ ಸ್ಟವ್! ವಿಡಿಯೋ ವೈರಲ್ !
ಗ್ಯಾಸ್ ಸಿಲಿಂಡರ್ ಸಂಪರ್ಕವಿಲ್ಲದೇ 6 ನಿಮಿಷಗಳ ಕಾಲ ಸ್ಟೌವ್ ಉರಿದ ವಿಚಿತ್ರ ಘಟನೆ ಜಮಖಂಡಿಯ ಅಲ್ಗೂರು ಬಸ್ತಿಯ ಅಬು ಹನೀಫಾ ಮಸೀದಿಯಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಜ.27) ಗ್ಯಾಸ್ ಸಿಲಿಂಡರ್ ಸಂಪರ್ಕವಿಲ್ಲದೇ 6 ನಿಮಿಷಗಳ ಕಾಲ ಸ್ಟೌವ್ ಉರಿದ ವಿಚಿತ್ರ ಘಟನೆ ಜಮಖಂಡಿಯ ಅಲ್ಗೂರು ಬಸ್ತಿಯ ಅಬು ಹನೀಫಾ ಮಸೀದಿಯಲ್ಲಿ ನಡೆದಿದೆ.
ಬೆಂಕಿ ಉರಿಯಲು ಗ್ಯಾಸ್ ಸಂಪರ್ಕ ಬೇಕೇಬೇಕು. ಗ್ಯಾಸ್ ಸಂಪರ್ಕವಿಲ್ಲದೆ ಬೆಂಕಿ ಉರಿಯಲು ಸಾಧ್ಯವೇ ಇಲ್ಲ ಅಂತಾದ್ರಲ್ಲಿ ಮಸೀದಿಯಲ್ಲಿ ಹೀಗೆ ಗ್ಯಾಸ್ ಸಂಪರ್ಕವಿಲ್ಲದೆ ಆರು ನಿಮಿಷಗಳ ಕಾಲ ಬೆಂಕಿ ಉರಿದಿರುವುದು ಅಚ್ಚರಿಗೆ ಕಾರಣವಾಗಿದೆ. ಉರಿಯುತ್ತಿರುವ ದೃಶ್ಯವನ್ನು ದಾಂಡೇಲಿಯ ರಿಯಾಝ್ ಎಂಬವವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಗ್ಯಾಸ್‌ನಿಂದ ಪೈಪ್ ಕಿತ್ತುಹಾಕಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಶ್ರೀರಾಮನ ಪೋಟೊ ಪೂಜೆ ಮಾಡಿದ್ದಕ್ಕೆ ಮುಸ್ಲಿಂ ಕೈದಿಗಳಿಂದ ಹಲ್ಲೆ! ದರ್ಗಾ ಜೈಲಲ್ಲಿ ನಡೆದ ಘಟನೆಯ ಅಸಲಿಯತ್ತೇನು?
ದಾಂಡೇಲಿಯ ಜಮಾಅತ್‌ನಿಂದ ರಿಯಾಜ್, ಮೊಹಮ್ಮದ್ ಗೌಸ್ ಸೇರಿದಂತೆ ಹಲವರು ಧರ್ಮ ಪ್ರಚಾರದ ಹಿನ್ನೆಲೆ ಜಮಖಂಡಿಗೆ ತೆರಳಿದ್ದರು. ಈ
ದಾಂಡೇಲಿಯ ಜಮಾಅತ್‌ನಿಂದ ರಿಯಾಝ್, ಮಹಮ್ಮದ್ ಗೌಸ್ ಮುಂತಾದವರು ಧರ್ಮ ಪ್ರಚಾರದ ಹಿನ್ನೆಲೆ ಜಮಖಂಡಿಗೆ ತೆರಳಿದ್ದರು. ಕಳೆದ ಬುಧವಾರ ಮಸೀದಿಯಲ್ಲಿ ನಮಾಜ್ ಮಾಡುವ ಮುಂಚೆ ಮುಂಜಾನೆ ಚಹಾ ತಯಾರಿಸಲು ಗ್ಯಾಸ್ ಹಚ್ಚಿದ್ದರು. ಈ ವೇಳೆ ಸಿಲಿಂಡರ್‌ನಲ್ಲಿ ಗ್ಯಾಸ್ ಖಾಲಿ ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಗ್ಯಾಸ್ ಸಿಲಿಂಡರ್ ಬದಲಾಯಿಸಲು ರೆಗ್ಯುಲೇಟರ್ ಕೂಡ ರಿಮೂವ್ ಮಾಡಿದ್ದರು. ಆದರೆ ಸಿಲಿಂಡರ್ ಸಂಪರ್ಕ ಮಾಡದಿದ್ರೂ ಬೆಂಕಿ ಉರಿಯುವುದು ಮುಂದುವರಿಸಿದೆ. ಗ್ಯಾಸ್ ಸಂಪರ್ಕವಿಲ್ಲದೆ ಬೆಂಕಿ ಉರಿಯುತ್ತಿರುವುದು ಕಂಡು ಅಚ್ಚರಿಗೊಳಗಾದ ರಿಯಾಜ್. ತಕ್ಷಣವೇ ಮೊಬೈಲ್ ತೆಗೆದು ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಚಹಾ ತಯಾರಿಸಿದ ಬಳಿಕ ಸ್ಟವ್ ಬಟ್ ಬಂದ್ ಮಾಡಿದ್ರೂ ಬೆಂಕಿ ಆರದೆ ಹಾಗೆ ಉರಿದಿದೆ. ಕೊನೆಗೆ ಬಾಯಿಂದ ಊದಿ ಬೆಂಕಿ ಆರಿಸಿದ್ದಾರೆ. ಸದ್ಯ ಈ ಘಟನೆ ದೃಶ್ಯ ಮೊಬೈಲ್ ಸೆರೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೆಲವರು ಅಲ್ಲಾನ ಪವಾಡ ಎಂದಿದ್ದಾರೆ. ಇನ್ನು ಕೆಲವರು ಸ್ಟೌನಲ್ಲಿ ಗ್ಯಾಸ್ ಉಳಿದಿದೆ ಹೀಗಾಗಿ ಗ್ಯಾಸ್ ಸಂಪರ್ಕ ತೆಗೆದರೂ ಉರಿದಿದೆ ಎಂದಿದ್ದಾರೆ.