‘ನನ್ನ ಚಪ್ಪಲಿಗಳು ಕಳ್ಳತನವಾಗಿದ್ದು, ಹುಡುಕಿ ಕೊಡಿ’ ಎಂದು ಯುವಕನೊಬ್ಬ ಪೊಲೀಸ್‌ ನಿಯಂತ್ರಣ ಕೊಠಡಿಗೆ (112) ಕರೆ ಮಾಡಿದ್ದ ಪ್ರಸಂಗವೊಂದು ನಡೆದಿದೆ.

ಬೆಂಗಳೂರು (ಜು.18) ‘ನನ್ನ ಚಪ್ಪಲಿಗಳು ಕಳ್ಳತನವಾಗಿದ್ದು, ಹುಡುಕಿ ಕೊಡಿ’ ಎಂದು ಯುವಕನೊಬ್ಬ ಪೊಲೀಸ್‌ ನಿಯಂತ್ರಣ ಕೊಠಡಿಗೆ (112) ಕರೆ ಮಾಡಿದ್ದ ಪ್ರಸಂಗವೊಂದು ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ರಾತ್ರಿ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆ(Highground police station) ವ್ಯಾಪ್ತಿಯ ಕಾರ್‌ ಸ್ಟ್ರೀಟ್‌ನಲ್ಲಿರುವ ಸಭಾ ಭವನವೊಂದಕ್ಕೆ ಯುವಕ ಬಂದಿದ್ದಾನೆ. ಈ ವೇಳೆ ಹೊರಗೆ ಚಪ್ಪಲಿ ಬಿಟ್ಟು ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಇದಾದ ಕೆಲ ನಿಮಿಷಗಳ ಬಳಿಕ ಸಭಾ ಭವನದಿಂದ ಹೊರಗೆ ಬಂದು ನೋಡಿದಾಗ ಚಪ್ಪಲಿಗಳಿರಲಿಲ್ಲ. ಸುತ್ತಮುತ್ತ ಹುಡುಕಾಡಿದ್ದು, ಎಲ್ಲಿಯೂ ಚಪ್ಪಲಿಗಳು ಕಾಣಿಸಿಲ್ಲ. ಇದರಿಂದ ಬೇಸರಗೊಂಡ ಯುವಕ, ಪೊಲೀಸ್‌ ಸಹಾಯವಾಣಿ 112ಕ್ಕೆ ಕರೆ ಮಾಡಿ, ಸಭಾಭವನದಲ್ಲಿ ಚಪ್ಪಲಿಗಳು ಕಳ್ಳತನವಾಗುತ್ತಿವೆ. ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ ಚಪ್ಪಲಿ ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದ.

Bengaluru crime: ಕೋಳಿ ಅಂಗಡಿಗೆ ವಿರೋಧಿಸಿದ್ದಕ್ಕೆ ಚಾಕು ಇರಿದು ವೃದ್ಧನ ಹತ್ಯೆ!

ಇದರ ಬೆನ್ನಲ್ಲೇ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಯುವಕನಿಂದ ಮಾಹಿತಿ ಪಡೆದು ಸಭಾಭವನದ ಸುತ್ತಮುತ್ತ ಚಪ್ಪಲಿ ಹುಡುಕಾಡಿದ್ದಾರೆ. ಆದರೆ, ಚಪ್ಪಲಿ ಸಿಕ್ಕಿಲ್ಲ. ಬಳಿಕ ಪೊಲೀಸರು, ಚಪ್ಪಲಿ ಕಳುವಾಗಿದ್ದರೆ, ಪೊಲೀಸ್‌ ಠಾಣೆಗೆ ಬಂದು ದೂರು ಕೊಡಬೇಕು ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಬ್ಯಾಗಿನಲ್ಲಿದ್ದ ಚಿನ್ನಾಭರಣ ದೋಚಿದ ಕಳ್ಳರು

ಹುಬ್ಬಳ್ಳಿ: ಬೆಂಗಳೂರು- ಹುಬ್ಬಳ್ಳಿ ಎಕ್ಸಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸ್ಥಳೀಯ ಕೇಶ್ವಾಪುರದ ಮಹಿಳಾ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗಿನಲ್ಲಿದ್ದ .3.06 ಲಕ್ಷ ಮೌಲ್ಯದ ಚಿನ್ನಾಭರಣ, 2 ಮೊಬೈಲ್‌, .50 ಸಾವಿರ ನಗದು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ವ್ಯಾನಿಟಿ ಬ್ಯಾಗಿನಲ್ಲಿದ್ದ 36 ಗ್ರಾಂ ತೂಕದ ಚಿನ್ನಾಭರಣ, .50 ಸಾವಿರ ನಗದು ಹಾಗೂ .30 ಸಾವಿರ ಮೌಲ್ಯದ 2 ಮೊಬೈಲ್‌ ಕಳ್ಳತನವಾಗಿದೆ. ದಾವಣಗೆರೆ ರೈಲ್ವೆ ನಿಲ್ದಾಣದ ಹತ್ತಿರ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಳೆಬೆಳಗುಂದಿ ಭದ್ರಕಾಳೇಶ್ವರಿ ದೇಗುಲದಲ್ಲಿ ಕಳ್ಳತನ