Asianet Suvarna News Asianet Suvarna News

Belagavi: ಅಪಘಾತ ಮರೆಮಾಚಲು ಮರಾಠಿಗರ ದಾಳಿ ಎಂದು ಸುಳ್ಳು ದೂರು!

ಸುವರ್ಣಸೌಧದ ಎದುರು ಮರಾಠಿ ಪುಂಡರು ಸರ್ಕಾರಿ ವಾಹನ ಮೇಲೆ ಕಲ್ಲು ತೂರಿ ವಾಹನದ ಗ್ಲಾಸ್‌ ಪುಡಿಪುಡಿ ಮಾಡಿ ಮಾಡಿದ್ದಾರೆ. ಅಲ್ಲದೆ, ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಾಹನ ಚಾಲಕ ನೀಡಿದ ದೂರು ಸುಳ್ಳು ಎಂಬುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. 

A false complaint that Marathas attacked to cover up the accident at belagavi gvd
Author
First Published Dec 16, 2022, 10:36 AM IST

ಬೆಳಗಾವಿ (ಡಿ.16): ಸುವರ್ಣಸೌಧದ ಎದುರು ಮರಾಠಿ ಪುಂಡರು ಸರ್ಕಾರಿ ವಾಹನ ಮೇಲೆ ಕಲ್ಲು ತೂರಿ ವಾಹನದ ಗ್ಲಾಸ್‌ ಪುಡಿಪುಡಿ ಮಾಡಿ ಮಾಡಿದ್ದಾರೆ. ಅಲ್ಲದೆ, ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಾಹನ ಚಾಲಕ ನೀಡಿದ ದೂರು ಸುಳ್ಳು ಎಂಬುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಮಾಧ್ಯಮ ಪತ್ರಿಕಾ ಪ್ರಕಟಣೆ ನೀಡಿರುವ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಆಗಮಿಸುತ್ತಿದ್ದ ಬೆಂಗಳೂರಿನ ಅಗ್ರಿಕಲ್ಚರ್‌ ರೂರಲ್‌ ಡೆವಲಮೆಂಟ್‌ ಬ್ಯಾಂಕ್‌ಗೆ ಸೇರಿದ ಬುಲೇರೋ ವಾಹನವನ್ನು ಚೇತನ್‌ ಎನ್‌.ವಿ.ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ.

ಈತ ಬುಧವಾರ ಶಿಗ್ಗಾಂವ ತಾಲೂಕಿನ ತಡಸ ಗ್ರಾಮದ ಬಳಿ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿದ್ದಾನೆ. ನಂತರ ಬರುವಾಗ ಧಾರವಾಡ-ಹಿರೇಬಾಗೇವಾಡಿ ಟೋಲ್‌ ನಾಕಾ ಮಧ್ಯೆ ವಾಹನ ಸ್ಟೀಲ್‌ ಬಾರ್‌ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಗಾಜು ಜಖಂಗೊಂಡಿದೆ. ತನ್ನ ತಪ್ಪು ಗೊತ್ತಾದರೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂಬ ಭಯದಿಂದ ವಾಹನ ಚಾಲಕ ಚೇತನ್‌ ಕತೆ ಕಟ್ಟಿ, ಸುಳ್ಳು ದೂರು ನೀಡಿದ್ದಾನೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಹಿರೇಬಾಗೇವಾಡಿ ಟೋಲ್‌ಗೇಟ್‌ ಬಳಿಯ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನ ಅಪಘಾತವಾಗಿರುವುದು ತಿಳಿದು ಬಂದಿದೆ. ಚಾಲಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಯಾರೂ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ನಗರ ಆಯುಕ್ತರು ಮನವಿ ಮಾಡಿದ್ದಾರೆ.

ಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್‌ ಪೊಲೀಸರ ವಶಕ್ಕೆ

ಅಧಿವೇಶನಕ್ಕಾಗಿ ಬಂದಿದ್ದ ಸರ್ಕಾರಿ ಜೀಪಿಗೆ ಕಲ್ಲೇಟು: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬೆನ್ನಹಿಂದೆಯೇ ಬುಧವಾರ ರಾತ್ರಿ ಸುವರ್ಣವಿಧಾನಸೌಧದ ಮುಂಭಾಗ ರಾಜ್ಯ ಸರ್ಕಾರಕ್ಕೆ ಸೇರಿದ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ನಿಗಮದ ಬೊಲೆರೋ ವಾಹನವನ್ನು ಅಡ್ಡಗಟ್ಟಿ, ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಅಲ್ಲದೆ, ವಾಹನದ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಕಲ್ಲು ತೂರಾಟದಿಂದಾಗಿ ವಾಹನದ ಮುಂಭಾಗದ ಗಾಜು ಪುಡಿ, ಪುಡಿಯಾಗಿದೆ. 

ಗಲಾಟೆ ಹೆಚ್ಚಾಗುತ್ತಿದ್ದಂತೆಯೇ ಚಾಲಕ, ವಾಹನವನ್ನು ಜೋರಾಗಿ ಚಲಾಯಿಸಿಕೊಂಡು, ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ. ದೆಹಲಿಯಲ್ಲಿ ಬುಧವಾರ ಸಂಜೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದ ಅಮಿತ್‌ ಶಾ, ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ, ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮೊದಲೇ ಕೆಲ ಕಿಡಿಗೇಡಿಗಳು ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. 

ನಕಲಿ ವೈದ್ಯನ ಇಂಜೆಕ್ಷನ್‌ನಿಂದ ಮಹಿಳೆ ದೇಹದಲ್ಲಿ ಕೊಳೆತ ಮಾಂಸ!

ಅಧಿವೇಶನಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ನಿಮಿತ್ತ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿಗೆ ಸೇರಿದ ವಾಹನವೊಂದು ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿತ್ತು. ಸುವರ್ಣಸೌಧದ ಮುಂಭಾಗ ಬರುತ್ತಿದ್ದಾಗ ಕರ್ನಾಟಕ ಸರ್ಕಾರ ಎಂದು ಬರೆದಿರುವ ಬೋರ್ಡ್‌ ನೋಡಿದ ಕಿಡಿಗೇಡಿಗಳು ವಾಹನವನ್ನು ಅಡ್ಡಗಟ್ಟಿ, ಕಲ್ಲು ತೂರಿದರು. ಬಳಿಕ, ವಾಹನ ಚಾಲಕ ಚೇತನ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಅವರಿಗೆ ಜೀವ ಬೆದರಿಕೆ ಹಾಕಿದರು.

Follow Us:
Download App:
  • android
  • ios