Asianet Suvarna News Asianet Suvarna News

Namma Metro: ಸ್ವಂತ ವಾಹನ ಇರುವವರಲ್ಲಿ 95% ಜನರಿಗೆ ಮೆಟ್ರೋ ಪ್ರಯಾಣ ಇಷ್ಟ

ನಗರದ ಶೇಕಡ 95ರಷ್ಟುಜನತೆ ಸ್ವಂತ (ಖಾಸಗಿ) ವಾಹನದಲ್ಲಿ ಸಂಚರಿಸುವುದಕ್ಕಿಂತ ಹೆಚ್ಚಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಒಲವು ತೋರುತ್ತಿದ್ದಾರೆ ಎಂದು ಖಾಸಗಿ ಸಂಸ್ಥೆಗಳೆರಡು ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

95 percents of those who have their own vehicle prefer metro trave at bengaluru rav
Author
First Published Sep 5, 2023, 6:58 AM IST

ಬೆಂಗಳೂರು (ಸೆ.5) :  ನಗರದ ಶೇಕಡ 95ರಷ್ಟುಜನತೆ ಸ್ವಂತ (ಖಾಸಗಿ) ವಾಹನದಲ್ಲಿ ಸಂಚರಿಸುವುದಕ್ಕಿಂತ ಹೆಚ್ಚಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಒಲವು ತೋರುತ್ತಿದ್ದಾರೆ ಎಂದು ಖಾಸಗಿ ಸಂಸ್ಥೆಗಳೆರಡು ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಪ್ಯಾಕ್‌ ಸಿಇಒ ರೇವತಿ ಅಶೋಕ್‌, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್‌) ಹಾಗೂ ವಲ್ಡ್‌ರ್‍ ರಿಸೋರ್ಸ್‌ ಇನ್‌ಸ್ಟಿಟ್ಯೂಟ್‌ (ಡಬ್ಲೂಆರ್‌ಐ) ಇಂಡಿಯಾ ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ.

ನಗರದಾದ್ಯಂತ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ 3,855 ಜನರನ್ನು ಸಮೀಕ್ಷೆ ನಡೆಸಲಾಯಿತು. ಇದರಲ್ಲಿ 1172 ಪ್ರಯಾಣಿಕರು ಪ್ರತಿದಿನ ಕಾರು, 1046 ಜನ ದ್ವಿಚಕ್ರ ವಾಹನ ಬಳಸುತ್ತಾರೆ. ಶೇ.70ರಷ್ಟುಜನ ಮನೆಯಿಂದ ಕಚೇರಿಗೆ ಉತ್ತಮ ಸಾರ್ವಜನಿಕ ಸಾರಿಗೆ ಇದ್ದರೆ ಅದನ್ನು ಬಳಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಜೊತೆಗೆ ಖಾಸಗಿ ದ್ವಿಚಕ್ರ, ಕಾರಿನಲ್ಲಿ ತೆರಳಿದಲ್ಲಿ ಸುಮಾರು 45 ನಿಮಿಷದಿಂದ 1 ಗಂಟೆ ಒಂದು ದಿಕ್ಕಿನ ಪ್ರಯಾಣ ಕ್ರಮಿಸಬಹುದು. ಅದೇ ಮೆಟ್ರೋದಲ್ಲಿ ತೆರಳಿದರೆ 45 ನಿಮಿಷದ ಒಳಗೆ ಅಂತರ ಕ್ರಮಿಸಬಹುದು ಎಂಬುದು ತಿಳಿದುಬಂದಿದೆ ಎಂದರು.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್..!

ಡಬ್ಲ್ಯುಆರ್‌ಐ ಇಂಡಿಯಾ(WRI India)ದ ಶ್ರೀನಿವಾಸ್‌ ಅಲವಿಲ್ಲಿ ಮಾತನಾಡಿ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ. ವೈಟ್‌ಫೀಲ್ಡ್‌ ಅನ್ನು ನಗರದ ಇತರ ಭಾಗಗಳಿಗೆ ಮೆಟ್ರೋ ಸಂಪರ್ಕಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ನೇರಳೆ ಮಾರ್ಗದ ಮೆಟ್ರೋ ಹೊರವರ್ತುಲ ರಸ್ತೆಯಲ್ಲಿ ನೆಲೆಸಿರುವ ಟೆಕ್‌ ಪಾರ್ಕ್ಗಳಿಗೆ ಫೀಡರ್‌ ಬಸ್‌ಗಳ ಸಂಪರ್ಕವನ್ನು ಕಲ್ಪಿಸುವುದರಿಂದ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದರು.

ಮೊದಲ ಹಾಗೂ ಕೊನೆ ಮೈಲಿ ಸಂಪರ್ಕ ಸಮಸ್ಯೆ, ಒಂದೇ ಟಿಕೆಟ್‌ನಲ್ಲಿ ಬಿಎಂಟಿಸಿ ಸೇರಿ ವಿವಿಧ ಸಾರಿಗೆಯಲ್ಲಿ ಸಂಚರಿಸುವ ವ್ಯವಸ್ಥೆ, ಬರಬೇಕಿದೆ ಎಂದು ಜನತೆ ಸಮೀಕ್ಷೆಯಲ್ಲಿ ಹೇಳಿದ್ದಾಗಿ ಅವರು ತಿಳಿಸಿದರು.

ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ನಮ್ಮ ಮೆಟ್ರೋ; ನೇರಳೆ ಮಾರ್ಗದಲ್ಲಿ ವಾರದ 5 ದಿನವೂ ಹೆಚ್ಚುವರಿ ಸೇವೆ!

Follow Us:
Download App:
  • android
  • ios