*  ರಾಜ್ಯದಲ್ಲಿ ಸದ್ಯ 6898 ಸಕ್ರಿಯ ಪ್ರಕರಣಗಳು*  ಈ ಪೈಕಿ 97 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ*  ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 831 ಪತ್ತೆ  

ಬೆಂಗಳೂರು(ಜು.11): ರಾಜ್ಯದಲ್ಲಿ ಭಾನುವಾರ 942 ಜನರಲ್ಲಿ ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 737 ಮಂದಿ ಗುಣಮುಖರಾಗಿದ್ದಾರೆ. ಯಾವುದೇ ಸೋಂಕಿತರ ಸಾವಾಗಿಲ್ಲ. ರಾಜ್ಯದಲ್ಲಿ ಸದ್ಯ 6898 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 97 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

22 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 4.2ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಐದು ಸಾವಿರ ಕಡಿಮೆ ನಡೆದಿವೆ. ಹೀಗಾಗಿ, ಹೊಸ ಪ್ರಕರಣಗಳು ಮಾತ್ರ 47 ಕಡಿಮೆಯಾಗಿವೆ. ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 831 ಪತ್ತೆಯಾಗಿವೆ. 

Covid Crisis: ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವಿಟಿ ದರ ಮತ್ತೆ ಶೇ.5ಕ್ಕೆ ಏರಿಕೆ

ಉಳಿದಂತೆ ಮೈಸೂರು 30, ದಕ್ಷಿಣ ಕನ್ನಡ 13, ಬೆಳಗಾವಿ ಹಾಗೂ ಕೋಲಾರ 11, ಉಡುಪಿ 10, ಬೀದರ್‌ 5, ಧಾರವಾಡ, ಬಳ್ಳಾರಿ, ಮಂಡ್ಯ, ತುಮಕೂರಿನಲ್ಲಿ ತಲಾ ನಾಲ್ಕು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ತಲಾ ಮೂರು, ಹಾಸನ ಮತ್ತು ಉತ್ತರ ಕನ್ನಡ ತಲಾ ಇಬ್ಬರು, ಕೊಪ್ಪಳ, ದಾವಣಗೆರೆ, ಬಾಗಲಕೋಟೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 12 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.