ಬೆಂಗಳೂರು, (ಸೆ.06):  ರಾಜ್ಯದಲ್ಲಿ ಇಂದು (ಭಾನುವಾರ) ಒಂದೇ ದಿನ 9319 ಕೇಸ್​​ ಪತ್ತೆಯಾಗಿದ್ದು, 95 ಮಂದಿ ಸಾವನ್ನಪ್ಪಿದ್ದಾರೆ. 

ಇದುವರೆಗೆ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 3,98,551ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ಬಲಿಯಾದವ ಸಂಖ್ಯೆ 6393. ಇನ್ನು ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ 9575 ಗುಣಮುಖರಾಗಿದ್ದು, ಇದುವರೆಗೆ 2,92,873 ಮಂದಿ ಗುಣಮುಖರಾದಂತಾಗಿದೆ.

ಮಾಜಿ ಶಾಸಕರ ಪುತ್ರ ಕೊರೋನಾ ಸೋಂಕಿಗೆ ಬಲಿ

ಈ ಮೂಲಕ ಸದ್ಯ  3,98,551 ಪೈಕಿ 99,266 ಸಕ್ರಿಯ ಕೊರೋನಾ ಪ್ರಕರಣಗಳಿದ್ದು,  775 ಮಂದಿ ಕೊರೋನಾ ಸೋಂಕಿತರು ಐಸಿಯುನಲ್ಲಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಬೆಂಗಳೂರು ನಗರದಲ್ಲಿ 2824 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 38 ಮಂದಿ ಬಲಿಯಾಗಿದ್ದಾರೆ .