ಬೆಂಗಳೂರು(ಅ.03): ರಾಜ್ಯದಲ್ಲಿ ಕರೋನಾರ್ಭಟ ಮುಂದುವರೆದಿದ್ದು, ಶುಕ್ರವಾರ 8,793 ಮಂದಿಗೆ ಸೋಂಕು ಧೃಢಪಟ್ಟಿದೆ. 125 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ 7,094 ಮಂದಿ ಸೋಂಕು ಮುಕ್ತರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1,11,986 ತಲುಪಿದೆ. ಇವರಲ್ಲಿ 827 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ವರೆಗೆ ಒಟ್ಟು 6.20 ಲಕ್ಷ ಮಂದಿ ಕೊರೋನಾದಿಂದ ಬಾಧಿತರಾಗಿದ್ದಾರೆ. ಇದೇ ವೇಳೆ ಕೊರೋನಾದಿಂದ ಅಸು ನೀಗಿದವರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಈವರೆಗೆ 9,119 ಮಂದಿ ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್‌ 20ರಂದು ಸಾವಿನ ಸಂಖ್ಯೆ 8 ಸಾವಿ​ರದ ಗಡಿ ದಾಟಿತ್ತು. ಇದ​ರಿಂದ 12 ದಿನ​ದಲ್ಲಿ ಮತ್ತೆ 1000 ಜನ ಸಾವ​ನ್ನ​ಪ್ಪಿ​ದಂತಾ​ಗಿ​ದೆ. ಇನ್ನು, ಈವ​ರೆಗೆ 4,99,504 ಮಂದಿ ಕೊರೋನಾ ಜಯಿಸಿದ್ದಾರೆ. ಶನಿವಾರ ಈ ಸಂಖ್ಯೆ 5 ಲಕ್ಷ ದಾಟುವುದು ಖಚಿತ. ಶುಕ್ರ​ವಾರ 92,059 ಕೊರೋನಾ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿನ ಒಟ್ಟು ಕೊರೋನಾ ಪರೀಕ್ಷೆ 50 ಲಕ್ಷದ ಗಡಿ ದಾಟಿದೆ.

ಬೆಂಗ​ಳೂ​ರಲ್ಲೇ ಅಧಿ​ಕ: 

ಬೆಂಗಳೂರು ನಗರ ಜಿಲ್ಲೆಯಲ್ಲಿ 47 ಮಂದಿ ಪ್ರಾಣ ಕಳೆದುಕೊಂಡಿದ್ದು ಉಳಿದಂತೆ ಮೈಸೂರು 18 ಮಂದಿ ಸಾವ​ನ್ನ​ಪ್ಪಿ​ದ್ದಾರೆ. ಬೆಂಗಳೂರು ನಗರದಲ್ಲಿ 4,259 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಉಳಿದಂತೆ ತುಮಕೂರು 405, ದಕ್ಷಿಣ ಕನ್ನಡ 322, ಹಾಸನ 315, ಶಿವಮೊಗ್ಗದಲ್ಲಿ 307 ಪ್ರಕ​ರಣಗಳು ಪತ್ತೆಯಾಗಿವೆ.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಶುಕ್ರವಾರದ ಅಂಕಿ-ಸಂಖ್ಯೆ

ದಕ್ಷಿಣ ಕನ್ನಡ 12, ತುಮಕೂರು 8, ಬೆಳಗಾವಿ 7, ಧಾರವಾಡ, ಹಾಸನ ತಲಾ 6, ಶಿವಮೊಗ್ಗ, ಕೊಪ್ಪಳ ತಲಾ 3, ಬಾಗಲಕೋಟೆ, ಬಳ್ಳಾರಿ, ಬೀದರ್‌, ಹಾವೇರಿ, ಮಂಡ್ಯ ತಲಾ 2, ವಿಜಯಪುರ, ಉಡುಪಿ, ಕಲಬುರಗಿ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. 

ಬೆಂಗಳೂರು ಗ್ರಾಮಾಂತರ 298, ಬಳ್ಳಾರಿ 262, ಮಂಡ್ಯ 257, ದಾವಣಗೆರೆ 225, ಉಡುಪಿ 212, ರಾಯಚೂರು 193, ಚಿತ್ರದುರ್ಗ 169, ಮೈಸೂರು 158, ರಾಮನಗರ 150, ವಿಜಯಪುರ 146, ಯಾದಗಿರಿ 145, ಚಿಕ್ಕಮಗಳೂರು 123, ಧಾರವಾಡ ಮತ್ತು ಕಲಬುರಗಿ 98, ಚಿಕ್ಕಬಳ್ಳಾಪುರ 91, ಕೊಪ್ಪಳ 89, ಉತ್ತರ ಕನ್ನಡ ಮತ್ತು ಗದಗ 80, ಬಾಗಲಕೋಟೆ 68, ಹಾವೇರಿ 61, ಬೀದರ್‌ 43, ಬೆಳಗಾವಿ, ಚಾಮರಾಜನಗರ 40, ಕೊಡಗು 30, ಕೋಲಾರ ಜಿಲ್ಲೆಯಲ್ಲಿ 29 ಹೊಸ ಪ್ರಕರಣ ಪತ್ತೆಯಾಗಿದೆ.