ಬೆಂಗಳೂರು(ಜ.08): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಮಾದರಿಯಲ್ಲಿ ನಾನ್‌ ಎಸಿ 90 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಟೆಂಡರನ್ನು ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ್‌ ನಿಗಮ ಲಿಮಿಟೆಡ್‌ ಪಡೆದುಕೊಂಡಿದ್ದು, ಈ ತಿಂಗಳೊಳಗೆ ಬಸ್‌ ಪೂರೈಸುವಂತೆ ಕಂಪನಿಗೆ ಕಾರ್ಯಾದೇಶ ನೀಡಲು ನಿಗಮ ಉದ್ದೇಶಿಸಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಲಭ್ಯವಾಗುವ .50 ಕೋಟಿ ಅನುದಾನ ಬಳಸಿಕೊಂಡು 90 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಮೂರು ಕಂಪನಿಗಳ ಪೈಕಿ ಪ್ರತಿ ಕಿ.ಮೀ.ಗೆ .44ಕ್ಕೆ ಬಿಡ್‌ ಸಲ್ಲಿಸಿದ್ದ ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ್‌ ನಿಗಮ ಲಿಮಿಟೆಡ್‌ ಟೆಂಡರ್‌ ಪಡೆಯುವಲ್ಲಿ ಸಫಲವಾಗಿದೆ.

ಸಂಕಷ್ಟದಲ್ಲಿ ಸ್ವೀಟಿ; ರಾಧಿಕಾ ಕುಮಾರಸ್ವಾಮಿ ಆಸ್ತಿ ಸೀಜ್ ಮಾಡುತ್ತಾ ಸಿಸಿಬಿ..?

ಒಂಬತ್ತು ಮೀಟರ್‌ ಉದ್ದದ 31 ಆಸನ ಸಾಮರ್ಥ್ಯದ 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಮಾದರಿಯಡಿ ಪಡೆಯಲಾಗುತ್ತಿದೆ. ಗುತ್ತಿಗೆ ಪಡೆದಿರುವ ಕಂಪನಿ ಮೊದಲ ಹಂತದಲ್ಲಿ 45 ಬಸ್‌ ಹಾಗೂ ಎರಡನೇ ಹಂತದಲ್ಲಿ 45 ಬಸ್‌ಗಳನ್ನು ಪೂರೈಸಲಿದೆ. ಆರು ತಿಂಗಳೊಳಗೆ ಈ 90 ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕಂಪನಿಗೆ ನಿರ್ವಹಣೆ ಹೊಣೆ:

ಒಪ್ಪಂದದ ಷರತ್ತಿನ ಅನ್ವಯ ಬಿಡ್‌ ಪಡೆದ ಕಂಪನಿಯೇ ಬಸ್‌ ಪೂರೈಸಿ, ಚಾಲಕರನ್ನು ಒದಗಿಸಲಿದೆ. ಈ ಬಸ್‌ಗಳ ಸಂಪೂರ್ಣ ನಿರ್ವಹಣೆ ಮಾಡಲಿದೆ. ಬಿಎಂಟಿಸಿ ಬಸ್‌ಗಳ ಬ್ಯಾಟರಿ ಚಾಜ್‌ರ್‍ ಮಾಡಲು ಆಯ್ದ ಡಿಪೋಗಳಲ್ಲಿ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ಸ್ಥಳ ನೀಡಲಿದೆ. ವಿದ್ಯುತ್‌ ದರವನ್ನು ನಿಗಮವೇ ಭರಿಸಲಿದೆ. ಈ ಎಲೆಕ್ಟ್ರಿಕ್‌ ಬಸ್‌ಗಳನ್ನು ಮೆಟ್ರೋ ಫೀಡರ್‌ ಸೇವೆಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ.