ರಾಜ್ಯದಲ್ಲಿ ಕಾಳಸಂತೆಯಲ್ಲಿ ರೆಮ್‌ಡೆಸಿವಿರ್ ಮಾರಾಟ ಮಾಡುತ್ತಿರುವ ಜಾಲವನ್ನು ಪತ್ತೆ ಮಾಡುತ್ತಿದ್ದು ಈಗಾಗಲೇ ಈ ಸಂಬಂಧ 90 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು (ಮೇ.06) :  ಮಹಾಮಾರಿ ಕೊರೋನಾ ಸೋಂಕಿಗೆ ಜೀವರಕ್ಷಕ ಎನ್ನಲಾದ ರೆಮ್‌ಡೆಸಿವಿರ್‌ ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟವವರ ವಿರುದ್ಧ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ 90 ಮಂದಿಯನ್ನು ಬಂಧಿಸಿದ್ದಾರೆ.

 38 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಟ್ವಿಟರ್‌ನಲ್ಲಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ತಿಳಿಸಿದೆ.

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ ..

ಕಾಳಸಂತೆಯಲ್ಲಿ ರೆಮ್‌ಡೆಸಿವಿರ್‌ ಮಾರಾಟದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹ ಸೂಚಿಸಿದ್ದಾರೆ. ಈ ಸೂಚನೆ ಹಿನ್ನೆಲೆಯಲ್ಲಿ ರೆಮ್‌ಡೆಸಿವಿರ್‌ ದಂಧೆ ವಿರುದ್ಧ ಪೊಲೀಸರು ತನಿಖೆ ಮತ್ತಷ್ಟುಚುರುಕುಗೊಂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona