Asianet Suvarna News Asianet Suvarna News

ರಾತ್ರಿ ಪಾಳಿ ಮುನ್ನ ಕೆಎಸ್‌ಆರ್‌ಟಿಸಿ ಚಾಲಕರಿಗಿನ್ನು 9 ಗಂಟೆ ವಿಶ್ರಾಂತಿ

ಚಾಲಕರನ್ನು ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ ನಿಗಮದ ಆಡಳಿತ ಮಂಡಳಿ. 

9 Hours Rest for KSRTC Drivers before Night Shift in Karnataka grg
Author
First Published Apr 4, 2024, 8:32 AM IST

ಬೆಂಗಳೂರು(ಏ.04):  ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೆ ಚಾಲಕರ ಮೇಲಿನ ಕಾರ್ಯದೊತ್ತಡವೂ ಕಾರಣ ಎಂದು ಮನಗಂಡಿರುವ ನಿಗಮದ ಆಡಳಿತ ಮಂಡಳಿ, ಅದಕ್ಕಾಗಿ ಚಾಲಕರನ್ನು ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದೆ. 

ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಉಂಟಾಗಿರುವ ಅಪಘಾತ ಪ್ರಕರಣ ವಿಶ್ಲೇಷಣಾ ಸಭೆಯಲ್ಲಿ ಚಾಲಕರ ಮೇಲಾಗುತ್ತಿರುವ ಕಾರ್ಯದೊತ್ತಡದ ಕುರಿತು ಚರ್ಚಿಸಲಾಗಿದೆ. 

ಕೆಎಸ್ಸಾರ್ಟಿಸಿಯ ಕುಡುಕ ಡ್ರೈವರ್‌ಗಳಿಗೆ ಕಾದಿದೆ ಆಪತ್ತು!

ಈ ವೇಳೆ ಚಾಲಕರಿಗೆ ವಿಶ್ರಾಂತಿ ಇಲ್ಲದೆ ಮೇಲಿಂದ ಮೇಲೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಚಾಲಕರಿಗೆ ಸುಸ್ತಾಗುತ್ತಿದ್ದು, ಅದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಲ್ಲಿ ಇರುವಂತೆ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

Follow Us:
Download App:
  • android
  • ios