ಕರ್ನಾಟಕದಲ್ಲಿ ನಿಲ್ಲದ ಕೊರೋನಾ: ಇಲ್ಲಿದೆ ಶುಕ್ರವಾರದ ಅಂಕಿ-ಸಂಖ್ಯೆ
ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಹಾಗಾದ್ರೆ ಶುಕ್ರವಾರ ಕರ್ನಾಟಕದಲ್ಲಿ ಪತ್ತೆಯಾದ ಕೊರೋನಾ ಕೇಸ್ ಎಷ್ಟು..? ಎಷ್ಟು ಸಾವು? ಎನ್ನುವ ಅಂಕಿ-ಸಂಖ್ಯೆ ಈ ಕೆಳಗಿನಂತಿದೆ.
ಬೆಂಗಳೂರು, (ಸೆ.25): ಕರ್ನಾಟಕದಲ್ಲಿ ಇಂದು (ಶುಕ್ರವಾರ) 8655 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 86 ಜನರು ಬಲಿಯಾಗಿದ್ದಾರೆ.
ಇನ್ನು 5644 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,57,212 ಆಗಿದ್ದರೆ, ಸಾವಿನ ಸಂಖ್ಯೆ 8417 ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಹಾಮಾರಿ ಕೊರೋನಾಗೆ ಬಿಪಿ, ಶುಗರ್ ರೋಗಿಗಳೇ ಅಧಿಕ ಬಲಿ!
ಇದುವರೆಗೆ 450302 ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸದ್ಯ 98474 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 4080 ಕೇಸ್ ಪತ್ತೆಯಾಗಿದ್ದು, 32 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2794ಕ್ಕೆ ಏರಿಕೆಯಾಗಿದ್ರೆ, ಸೋಂಕಿತರ ಸಂಖ್ಯೆ 212547.