ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಸೋಮವಾರ ಮೂರಂಕಿಗೆ ಇಳಿದ ಸೋಂಕಿನ ಪ್ರಮಾಣ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಮಾಣ ಕಡಿಮೆ ಆಗುತ್ತಿದೆ. ಹಲವು ತಿಂಗಳ ನಂತರ ಹೊಸ ಕೊರೋನಾ ಪ್ರಕರಣ ಮೂರಂಕಿಗೆ ಇಳಿದಿದೆ.

830 New Coronavirus Cases and Deaths 10 In Karnataka On Dec 14th rbj

ಬೆಂಗಳೂರು, (ಡಿ.14): ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 830 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 9,02,240ಕ್ಕೇರಿದೆ.

ರಾಜ್ಯದಲ್ಲಿ ಇಂದು (ಸೋಮವಾರ) ಕೊರೊನಾ ಸೋಂಕಿನಿಂದ 10 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 11,954 ಜನರ ಸಾವನಪ್ಪಿದ್ದಾರೆ. 

ಸೋಂಕಿತರ ಪೈಕಿ 8,72,038 ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 16,065 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 254 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!

ಬೆಂಗಳೂರಿನಲ್ಲಿಂದು 369 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. 10 ಜನರ ಪೈಕಿ ಐವರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಮಿತಿಮೀರಿದ್ದ ಕೊರೊನಾ ಹಾವಳಿ ಕಡಿಮೆ ಆಗಿದೆ. ಹಲವು ತಿಂಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹೊಸ ಕೊರೋನಾ ಪ್ರಕರಣ ಮೂರಂಕಿಗೆ ಇಳಿದಿದೆ.

ಇನ್ನು ಈಗಾಗಲೇ ತುರ್ತು ಬಳಕೆಗೆ ಕೊರೋನಾ ಔಷಧ ನೀಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಕೂಡ ಹೊರಡಿಸಿದೆ. 

Latest Videos
Follow Us:
Download App:
  • android
  • ios