ಬೆಂಗಳೂರು(ಜು.15): ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ನಿರತರಾಗಿದ್ದ ಸುಮಾರು 80 ಗುತ್ತಿಗೆ ಕಾರ್ಮಿಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ನಾಗವಾರ- ಗೊಟ್ಟಿಗೆರೆ ಲೇನ್‌ ಬಳಿಯ ಕ್ಯಾಂಪ್‌ನಲ್ಲಿ ಕೆಲವು ಗುತ್ತಿಗೆ ಕಾರ್ಮಿಕರು ತಂಗಿದ್ದರು. ಅವರಲ್ಲಿ ಓರ್ವ ಕಾರ್ಮಿಕನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಹೊಸದಾಗಿ ಮದುವೆಯಾದ ಯುವತಿಯ ಹತ್ಯೆ ಮಾಡಿ ತಾನು ಗುಂಡಿಕ್ಕಿಕೊಂಡ!

ಈಗಾಗಲೇ ಕೋವಿಡ್‌ ಪರೀಕ್ಷೆಯ ವರದಿ ಬಂದಿದ್ದು, 80 ಗುತ್ತಿಗೆ ಕಾರ್ಮಿಕರಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಹೀಗಾಗಿ ಕೋವಿಡ್‌ ಪಾಸಿಟಿವ್‌ ಬಂದಿರುವ ಎಲ್ಲ ಕಾರ್ಮಿಕರನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದ್ದಾರೆ.