ನವದೆಹಲಿ(ಜು. 14)  ಇದೊಂದು ವಿಚಿತ್ರ ಪ್ರಕರಣ, ಹೊಸದಾಗಿ ಮದುವೆಯಾದ ಯುವತಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ ವ್ಯಕ್ತಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಬ್ಬರ ನಡುವೆ ಸಂಬಂಧ ಇತ್ತು ಎಂಬುದು ಪೊಲೀಸರ ಆರಂಭಿಕ ತನಿಖೆಯ ಮಾಹಿತಿ.  ಮಹಿಳೆ ಜೂನ್  29 ರಂದು ಮದುವೆಯಾಗಿ  ನಸಾನಿ ಹಳ್ಳಿಗೆ ಹೋಗಿದ್ದರು. ತಮ್ಮ ಪೋಷಕರನ್ನು ನೋಡಲು ನಾನು ಕಲಾನ್ ಹಳ್ಳಿಗೆ ಬಂದಿದ್ದರು. 

ಈ ವೇಳೆ ಯುವತಿಯನ್ನು ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋದ ಆರೋಪಿ ಹತ್ಯೆ ಮಾಡಿದ್ದಾನೆ.  ನಂತರ ತನೆಗೆ ತಾನೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

ಮತ್ತೊಬ್ಬನೊಂದಿಗೆ ಸಲುಗೆ ಸಹಿಸದ ಪಾಗಲ್ ಪ್ರೇಮಿ ಪ್ರೇಯಸಿಯ ಚುಚ್ಚಿ ಕೊಂದ

ಮರುದಿನ ಬೆಳಗ್ಗೆ ಕೊಲೆಯಾದ ಹೆಂಗಸಿನ ಚಿಕ್ಕಪ್ಪ ಶವಗಳನ್ನು ಕಂಡಿದ್ದಾರೆ. ಮಧ್ಯರಾತ್ರಿ ಗುಂಡಿನ ಶಬ್ದ ಕೇಳಿದ್ದರ ಬಗ್ಗೆ ನಂತರ ಹಳ್ಳಿಯವರು ತಿಳಿಸಿದ್ದಾರೆ. ಹಳ್ಳಿಯವರು ಹೇಳುವಂತೆ ಕೊಲೆಯಾದ ಮಹಿಳೆ ಮತ್ತು ಸಾವನ್ನಪ್ಪಿದ ಯುವಕ ಒಬ್ಬೊಬ್ಬರಿಗೆ ಪರಿಚಯವೇ ಇರಲಿಲ್ಲ.  ಹಾಗಾಗಿ ಕೊಲೆಗೆ ಕಾರನ ಏನು ಎಂಬುದು ಇನ್ನು ನಿಗೂಢ.

ದೇಶಿಯ ಪಿಸ್ತೂಲ್ ಒಂದು ಶವಗಳ ಸಮೀಪ ಸಿಕ್ಕಿದ್ದು ಕೊಲೆಯಾದ ಯುವತಿಯ ಚಿಕ್ಕಪ್ಪ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ.  ಇದಾದ ಮೇಲೆ ಪೊಲೀಸರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.