Asianet Suvarna News Asianet Suvarna News

ಒಂದೇ ದಿನ 8 ಸಾವಿರ ದಾಟಿದ ಪಾಸಿಟಿವ್ ಕೇಸ್ : ಸಾವಲ್ಲೂ ದಾಖಲೆ

ಹಬ್ಬದ ಸಂದರ್ಭದಲ್ಲಿ ಕೊಂಚ ಕಡಿಮೆಯಾಗಿದ್ದ ಕೊರೋನಾ ಪಾಸಿಟಿವ್ ಕೇಸುಗಳು ಮತ್ತೆ ಹೆಚ್ಚಾಗಿವೆ. ಒಮದೇ ದಿನ 8 ಸಾವಿರಕ್ಕೂ ಅಧಿಕ ಪಾಸಿಟಿವ್ ಕೇಸ್ ಪತ್ತೆಯಾಗಿವೆ.

8 thousand COVID 19 positive cases reports in one day At Karnataka
Author
Bengaluru, First Published Aug 26, 2020, 8:13 AM IST

ಬೆಂಗಳೂರು (ಆ.26):  ರಾಜ್ಯದಲ್ಲಿ ಮೂರನೇ ಬಾರಿಗೆ ಒಂದೇ ದಿನ ಎಂಟು ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ಹರಡಿದೆ. ಮಂಗಳವಾರ ಒಂದೇ ದಿನ 8,161 ಮಂದಿಗೆ ಸೋಂಕು ದೃಢಪಟ್ಟಿರುವುದಲ್ಲದೆ, ದಾಖಲೆಯ 148 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಏಕದಿನದ ಸಾವಿನ ಸಂಖ್ಯೆಯಲ್ಲಿ ಇದು ಈವರೆಗಿನ ಗರಿಷ್ಠವಾಗಿದೆ. ಈ ಹಿಂದೆ ಆ.18ರಂದು 139 ಜನರು ಮೃತಪಟ್ಟಿರುವುದೇ ದಾಖಲೆಯಾಗಿತ್ತು.

ಇದರ ನಡುವೆ ಮಂಗಳವಾರ 6,814 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಈವರೆಗಿನ ಒಟ್ಟು ಗುಣಮುಖರ ಸಂಖ್ಯೆ ಎರಡು ಲಕ್ಷ ದಾಟಿದೆ. ಮಂಗಳವಾರ 59,787 ಕೋವಿಡ್‌ ಪರೀಕ್ಷೆ ನಡೆಸಿದ್ದು, ಇದುವರೆಗಿನ ಒಟ್ಟು ಪರೀಕ್ಷಾ ಸಂಖ್ಯೆ 25 ಲಕ್ಷ ದಾಟಿದೆ.

ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!..

ಕಳೆದ ಆಗಸ್ಟ್‌ 15ರಂದು 8,818 ಮಂದಿಗೆ ಸೋಂಕು ದೃಢಪಟ್ಟಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆ.19ರಂದು ಎರಡನೇ ಬಾರಿಗೆ 8,642 ಮಂದಿಗೆ ಸೋಂಕು ಹರಡಿತ್ತು. ಮಂಗಳವಾರ 8,161 ಮಂದಿಗೆ ಸೋಂಕು ಹರಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಮೂರು ಲಕ್ಷದತ್ತ (2,91,826) ಸಾಗಿದೆ. ಈ ಪೈಕಿ ಒಟ್ಟು 2,04,439 ಮಂದಿ ಗುಣಮುಖರಾಗಿದ್ದಾರೆ.

ಮಂಗಳವಾರ 148 ಜನರು ಮೃತಪಡುವುದರೊಂದಿಗೆ ಇದುವರೆಗೆ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 4,954 ತಲುಪಿದೆ (19 ಅನ್ಯ ಕಾರಣದ ಸಾವು ಹೊರತುಪಡಿಸಿ). ಉಳಿದ 82,410 ಮಂದಿ ಸಕ್ರಿಯ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 751 ಮಂದಿ ಸೋಂಕಿತರ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಲ್ಲಿ 2,294 ಪ್ರಕರಣ: ಬೆಂಗಳೂರಿನಲ್ಲಿ ಮಂಗಳವಾರ ಅತಿ ಹೆಚ್ಚು 2,294 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು 1,331, ಬಳ್ಳಾರಿ 551, ದಾವಣಗೆರೆ 318, ಬೆಳಗಾವಿ 298, ಶಿವಮೊಗ್ಗ 276, ದಕ್ಷಿಣ ಕನ್ನಡ 247, ಕೊಪ್ಪಳ 238, ಕಲಬುರಗಿ 227, ತುಮಕೂರು 223, ಉಡುಪಿ 217, ಹಾಸನ 205, ಧಾರವಾಡ 204, ಗದಗ 175, ಮಂಡ್ಯ 153, ಉತ್ತರ ಕನ್ನಡ 141, ವಿಜಯಪುರ 135, ಯಾದಗಿರಿ 132, ಚಿತ್ರದುರ್ಗ 114, ಚಿಕ್ಕಬಳ್ಳಾಪುರ 93, ರಾಯಚೂರು ಮತ್ತು ಚಿಕ್ಕಮಗಳೂರು 88, ಬಾಗಲಕೋಟೆ 83, ಹಾವೇರಿ 78, ಬೆಂಗಳೂರು ಗ್ರಾಮಾಂತರ 63, ಬೀದರ್‌ 61, ರಾಮನಗರ 56, ಕೋಲಾರ 47, ಚಾಮರಾಜನಗರ 17 ಮತ್ತು ಕೊಡಗು ಜಿಲ್ಲೆಯಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ.

ರಾಜ್ಯ​ದಲ್ಲಿ ದಿನಕ್ಕೆ 1 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಲು ಶಿಫಾರಸು...

ಬೆಂಗಳೂರಲ್ಲೂ ಸಾವಿನ ದಾಖಲೆ: ಮಂಗಳವಾರ ಒಂದೇ ದಿನ ಬೆಂಗಳೂರಿನಲ್ಲಿ ದಾಖಲೆಯ 61 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದಂತೆ ಮೈಸೂರಲ್ಲಿ 16, ಧಾರವಾಡ 8, ಕೊಪ್ಪಳ, ಬಳ್ಳಾರಿ ತಲಾ 6, ದಾವಣಗೆರೆ, ಶಿವಮೊಗ್ಗ, ಹಾವೇರಿ ತಲಾ 5, ತುಮಕೂರು ಮತ್ತು ವಿಜಯಪುರ ತಲಾ 4, ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ತಲಾ 3, ಚಾಮರಾಜನಗರ, ಹಾಸನ, ಕೋಲಾರ, ಮಂಡ್ಯ, ಉಡುಪಿ, ಬೆಳಗಾವಿ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಗದಗ ಮತ್ತು ರಾಮನಗರದಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios