ಬೆಂಗಳೂರು, (ಆ.12): ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕು ಪ್ರಕರಣಗಳು ಸ್ಫೋಟಗೊಂಡಿದ್ದು ಕಳೆದ 24 ಗಂಟೆಯಲ್ಲಿ 7883 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಇದುವರೆಗಿನ ದಾಖಲಾಗಿದೆ. 

ರಾಜ್ಯ ಆರೋಗ್ಯ ಇಲಾಖೆ ಮಾಧ್ಯಮಗಳಿಗೆ ಬುಧವಾರ ಈ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,96,494 ಕ್ಕೆ ಏರಿಕೆಯಾಗಿದ್ದು, 113 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ  3510 ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!

ಇನ್ನು ಡಿಸ್ಜಾರ್ಜ್ ಸಂಖ್ಯೆಯಲ್ಲೂ ಏರಿಕೆಯಾಗಿದ್ದು ಬುಧವಾರ  7034 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಈವರೆಗೂ ಒಟ್ಟು 1,12,633 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಕೇಸ್
ಬೆಂಗಳೂರು ನಗರ - 2802, ಬಳ್ಳಾರಿ -635, ಮೈಸೂರು 544,  ಬೆಳಗಾವಿ 314,ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆ 239, ಕೊಪ್ಪಳ 202, ರಾಯಚೂರು 191, ಬೆಂಗಳೂರು ಗ್ರಾಮಾಂತರ 182, ಬಾಗಲಕೋಟಿ 170, ಗದಗ 148, ಕಲಬುರಗಿ 144, ಹಾವೇರಿ 132, ವಿಜಯಪುರ 212, ಮಂಡ್ಯ 212, ತುಮಕೂರು  121, ಚಿಕ್ಕಬಳ್ಳಾಪುರ 112, ಯಾದಗಿರಿ 107, ಬೀದರ್  91, ಉತ್ತರ ಕನ್ನಡ 84, ಚಿಕ್ಕಬಳ್ಳಾಪುರ 81, ಶಿವಮೊಗ್ಗ 69, ಚಾಮರಾಜನಗರ 68, ರಾಮನಗರ 63, ಚಿತ್ರದುರ್ಗ 61, ಕೋಲಾರ 33, ಕೊಡಗು 29