* ಕರ್ನಾಟಕದಲ್ಲಿ  ಇಳಿಕೆ ಕಂಡ ಕೊರೋನಾ ವೈರಸ್* ಇಲ್ಲಿದೆ ಸೆಪ್ಟೆಂಬರ್19ರ ಅಂಕಿ-ಸಂಖ್ಯೆ* 15,383 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.60 ರಷ್ಟು ಇದೆ

ಬೆಂಗಳೂರು, (ಸೆ.19): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದ್ದು ಇಂದು (ಸೆ.19) 783 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

16 ಮಂದಿ ಸಾವನ್ನಪ್ಪಿದ್ದು, 1,139 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 29,67,866ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ 29,14,852 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,603 ಜನ ಸಾವನ್ನಪ್ಪಿದ್ದಾರೆ. 

'ಈವರೆಗೆ ರಾಜ್ಯದ 73% ಜನಕ್ಕೆ ಕೋವಿಡ್‌ ಲಸಿಕೆ'

ಇನ್ನು ರಾಜ್ಯದಲ್ಲಿ 15,383 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.60 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 267 ಜನರಿಗೆ ಸೋಂಕು ತಗುಲಿದ್ದು, 7 ಮಂದಿ ಮೃತಪಟ್ಟಿದ್ದಾರೆ. 277 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7474 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಬಾಗಲಕೋಟೆ 0, ಬಳ್ಳಾರಿ 3, ಬೀದರ್ 1, ಚಾಮರಾಜನಗರ 4, ಚಿಕ್ಕಬಳ್ಳಾಪುರ 1, ಧಾರವಾಡ 2, ಗದಗ 3, ಹಾವೇರಿ 1, ಕಲಬುರ್ಗಿ 3, ಕೋಲಾರ 2, ಕೊಪ್ಪಳ 0, ರಾಯಚೂರು 0, ರಾಮನಗರ 0, ವಿಜಯಪುರ 1, ಯಾದಗಿರಿ 0, ಬೆಂಗಳೂರು ನಗರ 267, ದಕ್ಷಿಣಕನ್ನಡ 97, ಕೊಡಗು 41, ಮೈಸೂರು 69, ಉಡುಪಿ 82 ಹೊಸ ಪ್ರಕರಣ ವರದಿಯಾಗಿವೆ.