ಬೆಂಗಳೂರು, (ಆ.22): ರಾಜ್ಯದಲ್ಲಿ ಇಂದು (ಶನಿವಾರ) 7330 ಜನರಿಗೆ ಕೊರೋನಾ ಪಾಸಿಟಿವ್  ದೃಢಪಟ್ಟಿದೆ. ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,71,876 ಕ್ಕೆ ಏರಿಕೆಯಾಗಿದೆ.

ಇನ್ನು ಸಂತಸ ಸಂಗತಿ ಅಂದ್ರೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 7626 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಶನಿವಾರ ಕೊರೋನಾ ಸೋಂಕಿತರ ಕೇಸ್‌ಗಿಂತ ಗುಣಮುಖರಾದವರೇ ಹೆಚ್ಚಾಗಿದ್ದಾರೆ. ಇದು ಹೊಸ ಆಶಾಭಾವನೆ ಮೂಡಿಸಿದೆ.  

ಚೀನಿಯರ ಮೇಲೆ ಕಠಿಣ ವೀಸಾ ನೀತಿ, ವೇದಾಂತ ಕಡೆ ತಿರುಗಿದ ನಟಿ: ಆ.22ರ ಟಾಪ್ 10 ಸುದ್ದಿ!

ಇಲ್ಲಿಯವರೆಗೆ ಒಟ್ಟು 1,84,568 ಸೊಂಕಿತರು ಚೇತರಿಸಿಕೊಂಡಿದ್ದು, ಪ್ರಸ್ತುತ ಒಟ್ಟು 82,677 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿದ್ರೆ, 727 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಗಳಲ್ಲಿ 93 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದರೊಂದಿಗೆ ಮೃತಪಟ್ಟವರ ಸಂಖ್ಯೆ 4615 ಆಗಿದೆ. ಬೆಂಗಳೂರಿನಲ್ಲಿ 2979 ಹೊಸ ಪ್ರಕರಣ ದಾಖಲಾಗಿದ್ದು 28 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 1663 ಜನ ಮೃತಪಟ್ಟಿದ್ದಾರೆ.