ಬೆಂಗಳೂರು, (ಆ.16): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 7,040 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,26,966ಕ್ಕೆ ಏರಿಕೆಯಾಗಿದೆ. 

ಇನ್ನು 124 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3,945ಕ್ಕೇರಿದೆ. ಇದರಿಂದ  ಒಟ್ಟಾರೆ ಮರಣ ಪ್ರಮಾಣ ಶೇ.1,74 ಆದಂತಾಗಿದೆ. 

ಕೊರೋನಾ ಅಟ್ಟಹಾಸದ ಮಧ್ಯೆ ಸಮಾಧಾನಕರ ಸುದ್ದಿ: ಸಾವಿನ ಪ್ರಮಾಣದಲ್ಲಿ ಇಳಿಕೆ..!

ಚೇತರಿಕೆ ಪ್ರಮಾಣದಲ್ಲೂ ಶೇ. 62.34ಕ್ಕೆ ಏರಿದ್ದು, ಭಾನುವಾರ ಕೊರೋನಾ ಸೋಂಕಿನಿಂದ 6,683 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸದ್ಯ 83,191 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ವರದಿ
ಬೆಂಗಳೂರಿನಲ್ಲಿ ಇಂದು (ಭಾನುವಾರ) 2231 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2359 ಜನ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 49 ಮಂದಿ ಸಾವನ್ನಪ್ಪಿದ್ದಾರೆ. 34,583 ಸಕ್ರಿಯ ಪ್ರಕರಣಗಳಿವೆ.