ಬಿಬಿಎಂಪಿಯಲ್ಲಿ 8 ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಗೆ ತಾಲೂಕುವಾರು ಹಂಚಿಕೆ| ಒಟ್ಟು 677 ವಾಹನಗಳ ಪೈಕಿ ಗಂಭೀರ ಲಕ್ಷಣಗಳಿರುವ ಸೋಂಕಿತರ ಕರೆದೊಯ್ಯಲು 327 ಆ್ಯಂಬುಲೆನ್ಸ್‌ ನಿಯೋಜನೆ| ಸೋಂಕಿನ ಲಕ್ಷಣ ಇಲ್ಲದ ಮತ್ತು ಮಧ್ಯಮ ಸೋಂಕಿನ ಲಕ್ಷಣ ಇರುವವರನ್ನು ಕರೆದೊಯ್ಯಲು 350 ಟೆಂಪೋ ಟ್ರಾವೆಲರ್‌ ನಿಯೋಜನೆ|

ಬೆಂಗಳೂರು(ಜು.24): ನಗರದಲ್ಲಿ ಕೊರೋನಾ ಸೋಂಕಿತರನ್ನು ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಮೃತದೇಹಗಳನ್ನು ಸಾಗಿಸುವುದಕ್ಕಾಗಿ ವಿಧಾನಸಭಾ ಕ್ಷೇತ್ರ ಹಾಗೂ ವಲಯವಾರು ಒಟ್ಟು 677 ವಾಹನಗಳನ್ನು ಬಿಬಿಎಂಪಿ ನಿಯೋಜಿಸಿದೆ. 

ಬಿಬಿಎಂಪಿಯಲ್ಲಿ 8 ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಗೆ ತಾಲೂಕುವಾರು ಹಂಚಿಕೆ ಮಾಡಲಾಗಿದೆ. ಒಟ್ಟು 677 ವಾಹನಗಳ ಪೈಕಿ ಗಂಭೀರ ಲಕ್ಷಣಗಳಿರುವ ಸೋಂಕಿತರ ಕರೆದೊಯ್ಯಲು 327 ಆ್ಯಂಬುಲೆನ್ಸ್‌ ನಿಯೋಜನೆ ಮಾಡಲಾಗಿದೆ. ಸೋಂಕಿನ ಲಕ್ಷಣ ಇಲ್ಲದ ಮತ್ತು ಮಧ್ಯಮ ಸೋಂಕಿನ ಲಕ್ಷಣ ಇರುವವರನ್ನು ಕರೆದೊಯ್ಯಲು 350 ಟೆಂಪೋ ಟ್ರಾವೆಲರ್‌ ನಿಯೋಜನೆ ಮಾಡಲಾಗಿದೆ. 

ಕೊರೋನಾ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳ ಹಿಂದೇಟು..!

ಇನ್ನು ಸೋಂಕಿನಿಂದ ಮೃತಪಟ್ಟವರನ್ನು ಸಾಗಿಸುವುದಕ್ಕೆ 42 ಶ್ರದ್ಧಾಂಜಲಿ ವಾಹನಗಳನ್ನು ಬಿಬಿಎಂಪಿ ನಿಯೋಜಿಸಿದೆ. ಇದರಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ (ಕೋವಿಡ್‌ ಕೇರ್‌ ಸೆಂಟರ್‌ಗಾಗಿ)- 39 ಆ್ಯಂಬುಲೆನ್ಸ್‌ ಹಾಗೂ ಪೊಲೀಸರಿಗಾಗಿ 9 ಆ್ಯಂಬುಲೆನ್ಸ್‌ ಮೀಸಲಿಡಲಾಗಿದೆ.