ಬೆಂಗಳೂರು, (ಜುಲೈ.21):  ರಾಜ್ಯದಲ್ಲಿ ಇಂದು (ಮಂಗಳವಾರ) 3,649 ಜನರಿಗೆ ಹೊಸದಾಗಿ ಮತ್ತೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮಂಗಳವಾರ ರಾಜ್ಯದಲ್ಲಿ ಒಟ್ಟು 1664  ಸೋಂಕಿತರು ಚೇತರಿಸಿಕೊಂಡಿದ್ದಾರೆ. 

ಕ್ರೂರಿ ಕೊರೋನಾ ಕುರಿತು ಭವಿಷ್ಯ ನುಡಿದ ಕೋಡಿ ಶ್ರೀ: ಹಳ್ಳಿಗಳಿಗೆ ಕಂಟಕ

ಇನ್ನು 61 ಸಾವು ಸಂಭವಿಸಿದ್ದು, ಬಲಿಯಾದವರ ಒಟ್ಟು ಸಂಖ್ಯೆ 1464ಕ್ಕೆ ಏರಿಕೆ ಆಗಿದೆ. ಇಂದಿನವರೆಗೆ ಒಟ್ಟು 71069 ಕೊರೋನಾ ಸೋಂಕು ಪ್ರಕರಣಗಳಲ್ಲಿ 25459 ಸೋಂಕಿತರು ಗುಣಮುಖರಾಗಿದ್ದು,  44110 ಸಕ್ರಿಯ ಕೇಸ್ ಇವೆ.

ಮಂಗಳವಾರ ಯಾವು ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ - 1714, ಬಳ್ಳಾರಿ -193, ದಕ್ಷಿಣ ಕನ್ನಡ - 149, ಮೈಸೂರು - 135, ಯಾದಗಿರಿ - 117, ಉತ್ತರ ಕನ್ನಡ - 109, ಹಾಸನ - 107, ಕೋಲಾರ - 103, ಕಲಬುರ್ಗಿ - 99, ದಾವಣಗೆರೆ - 95, ಬೆಂಗಳೂರು ನಗರ - 95, ಉಡುಪಿ ಮತ್ತು ಧಾರವಾಡ - 84, ಚಿಕ್ಕಬಳ್ಳಾಪುರ - 68, ಬೀದರ್ - 66, ಬಾಗಲಕೋಟಿ - 65, ತುಮಕೂರು - 47, ಕೊಪ್ಪಳ - 45, ಹಾವೇರಿ - 39, ಚಾಮರಾಜನಗರ - 34, ಬೆಳಗಾವಿ ಮತ್ತು ಚಿತ್ರದುರ್ಗ - 23, ಶಿವಮೊಗ್ಗ - 20, ಗದಗ - 15, ವಿಜಯಪುರ ಮತ್ತು ಮಂಡ್ಯ - 13, ರಾಮನಗರ - 08, ರಾಯಚೂರು - 04 ಮತ್ತು ಕೊಡಗು - 01