2022-23ನೇ ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯಡಿ ಜಾನುವಾರುಗಳ ವಿಮಾ ಸೌಲಭ್ಯಕ್ಕೆ 11.60 ಕೋಟಿ ರು., ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮಗಳಿಗಾಗಿ 13.04 ಕೋಟಿ ರು. ಹಾಗೂ ಪಶುಪಾಲಕರಿಗೆ ನೆರವು ನೀಡಲು 30 ಕೋಟಿ ರು. ಅನುದಾನ ನೀಡಿದೆ: ಸಚಿವ ಪ್ರಭು ಚವ್ಹಾಣ್‌ 

ಬೆಂಗಳೂರು(ಫೆ.03): ರಾಜ್ಯದ ಜಾನುವಾರುಗಳ ರಕ್ಷಣೆ, ಪೋಷಣೆ ಹಾಗೂ ಅಭಿವೃದ್ಧಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರ್ಕಾರ ವಿವಿಧ ಯೋಜನೆಯಡಿ ರಾಜ್ಯಕ್ಕೆ 60 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

2022-23ನೇ ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯಡಿ ಜಾನುವಾರುಗಳ ವಿಮಾ ಸೌಲಭ್ಯಕ್ಕೆ 11.60 ಕೋಟಿ ರು., ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮಗಳಿಗಾಗಿ 13.04 ಕೋಟಿ ರು. ಹಾಗೂ ಪಶುಪಾಲಕರಿಗೆ ನೆರವು ನೀಡಲು 30 ಕೋಟಿ ರು. ಅನುದಾನ ನೀಡಿದೆ. ಇಡಿಪಿ ಎಸ್‌ಎಲ್‌ಇಸಿ ಯೋಜನೆಯಡಿ 12 ಫಲಾನುಭವಿಗಳಿಗೆ 4.88 ಕೋಟಿ ರು. ಸಹಾಯಧನ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಸಂಕಲ್ಪದಂತೆ ಪ್ರಾಣಿಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್‌

ರಾಜ್ಯ ಪಶುಸಂಗೋಪನೆ ಇಲಾಖೆಯ ಜನಪರ ಯೋಜನೆಗಳಾದ ಸರ್ಕಾರಿ ಗೋಶಾಲೆಗಳ ಸಂಖ್ಯೆ ಹೆಚ್ಚಳ, ಖಾಸಗಿ ಗೋಶಾಲೆಗಳಿಗೆ ಸಹಾಯಧನ, ಗೋಮಾತಾ ಸಹಕಾರ ಸಂಘ, ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನ, ಪಶುಸಂಜೀವಿನಿ ಆ್ಯಂಬುಲೆನ್ಸ್‌, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪ್ರಾಣಿ ಸಹಾಯವಾಣಿ ಕೇಂದ್ರ, 100 ಪಶು ಚಿಕಿತ್ಸಾಲಯಗಳು, ಪುಣ್ಯಕೋಟಿ ದತ್ತು ಸೇರಿದಂತೆ ಹಲವು ಯೋಜನೆಗಳನ್ನು ಹೆಸರಿಸಿ ಪ್ರಶಂಸೆ ವ್ಯಕ್ತಪಡಿಸಿರುವ ಕೇಂದ್ರ ಪಶುಸಂಗೋಪನೆ ಸಚಿವ ಪರಷೋತ್ತಮ್‌ ರೂಪಾಲ್‌ ಅವರು ರಾಜ್ಯಕ್ಕೆ ಇನ್ನೂ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ್ದಾರೆ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.