ಶಿವಮೊಗ್ಗ ಗಲಭೆಯಲ್ಲಿ 6 ಪೊಲೀಸರಿಗೆ ಗಾಯ;ಮಾಹಿತಿ ಮುಚ್ಚಿಟ್ಟಿರುವ ಇಲಾಖೆ: ಈಶ್ವರಪ್ಪ ಆರೋಪ

ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಆರು ಜನ ಪೊಲೀಸರಿಗೆ ಗಾಯವಾಗಿದೆ ಎಂಬ ಮಾಹಿತಿ ಇದ್ದು, ಇದನ್ನು ಇಲಾಖೆ ಮಚ್ಚಿಟ್ಟಿದೆ. ಗುಪ್ತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಆರೋಪ ಮಾಡಿದರು.

6 policemen injured in Shimoga riots  Department of hiding information Eshwarappa accused rav

 

ಶಿವಮೊಗ್ಗ (ಅ.3): ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಆರು ಜನ ಪೊಲೀಸರಿಗೆ ಗಾಯವಾಗಿದೆ ಎಂಬ ಮಾಹಿತಿ ಇದ್ದು, ಇದನ್ನು ಇಲಾಖೆ ಮಚ್ಚಿಟ್ಟಿದೆ. ಗುಪ್ತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಆರೋಪ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಗಾಯಗೊಂಡ ಪೊಲೀಸರನ್ನು ಮುಚ್ಚಿಡುವ ಕೆಲಸ ಆಗಿದೆ. ಇವರ ಮನೆ ವಿಳಾಸ ಕೇಳಿದ್ದೇವೆ, ಎಸ್‌ಪಿಯವರು ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಇದೆ ಎಂದರು.

ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ: ಈಶ್ವರಪ್ಪ

ಕಾಂಗ್ರೆಸ್ ಸರ್ಕಾರ(Congress government) ಮುಸ್ಲಿಮರ ಗುಲಾಮರು ಎಂದು ಕಟು ಮಾತುಗಳಲ್ಲಿ ಟೀಕಿಸಿದ ಅವರು, ಹಿಂದೂ ಸಂಘಟನೆ ಮುಂಚೂಣಿಯಲ್ಲಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸರು ಇವರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಇರೋದು ಮುಸ್ಲಿಮರ ರಕ್ಷಣೆಗಾ? ಎಂದು ಪ್ರಶ್ನಿಸಿದರಲ್ಲದೆ, ನಾವು ನುಗ್ಗುತ್ತೇವೆ, ನಮ್ಮನ್ನು ಅರೆಸ್ಟ್ ಮಾಡಿ ಎಂದು ಎಚ್ಚರಿಸಿದರು. 

 

Siddaramaiah ಮೊದಲ ಅವಧಿಯಲ್ಲಿ ಟಿಪ್ಪು, ಇವಾಗ ಔರಂಗಜೇಬ್‌ನನ್ನು ಮರೆಸಲಾಗುತ್ತಿದೆ: ಪ್ರಲ್ಹಾದ್‌ ಜೋಶಿ

ಕಟೌಟ್ ಪ್ಲೆಕ್ಸ್‌ಗಳಲ್ಲಿ ಔರಂಗಜೇಬ್, ಟಿಪ್ಪು ಪೋಟೋ ಹಾಕಿದ್ದಾರೆ. ಇವರು ಯಾರಿಗೆ ಸ್ಫೂರ್ತಿ. ಕೋಲಾರದಲ್ಲಿ ಖಡ್ಗ ತೆಗೆದ ರೀತಿ ಇಲ್ಲಿಯೂ ತೆಗೆಯಬೇಕು. ತೆಗೆಯದಿದ್ದರೆ ಅದರ ಪರಿಣಾಮ ಈಗ ನಾನು ಹೇಳಲ್ಲ ಎಂದರು.

Latest Videos
Follow Us:
Download App:
  • android
  • ios