Asianet Suvarna News Asianet Suvarna News

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ಗೆ 6 ತಿಂಗಳು ಕಳೆದಿದೆ. ದೇಶದಲ್ಲಿ ಲಾಕ್‌ ಡೌನ್ ಬಳಿಕ ಹಾಗೂ ನಂತರದಲ್ಲಿ ಬರೋಬ್ಬರಿ ಪ್ರಕರಣಗಳಲ್ಲಿ ಏರಿಳಿತಗಳು ಕಂಡಿವೆ. ಇಲ್ಲಿದೆ ಅಂಕಿ ಅಂಶ

6 Month Completed to Corona lock down snr
Author
Bengaluru, First Published Sep 25, 2020, 7:31 AM IST

ಬೆಂಗಳೂರು (ಸೆ.25):  ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸೇರಿದಂತೆ ದೇಶಾದ್ಯಂತ ಲಾಕ್‌ಡೌನ್‌ ವಿಧಿಸಿ ಬರೋಬ್ಬರಿ ಆರು ತಿಂಗಳು ಕಳೆದಿದೆ. ಲಾಕ್ಡೌನ್‌ನ ಮೊದಲರ್ಧದ ಅವಧಿಯಲ್ಲಿ ಸೋಂಕು ನಿಯಂತ್ರಣದಲ್ಲಿ ದೇಶದಲ್ಲೇ ಮಾದರಿ ರಾಜ್ಯದಲ್ಲಿ ಒಂದಾಗಿದ್ದ ಕರ್ನಾಟಕವು ಪ್ರಸ್ತುತ ಅತಿ ಹೆಚ್ಚು ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

"

ಲಾಕ್ಡೌನ್‌ಗೆ ಮೊದಲು (ಮಾರ್ಚ್ 24ರಂದು) ರಾಜ್ಯದಲ್ಲಿ ಕೇವಲ 41 ಮಂದಿಗೆ ಸೋಂಕು ಉಂಟಾಗಿ ಒಬ್ಬರು ಮಾತ್ರ ಮೃತಪಟ್ಟಿದ್ದರು. ಅಲ್ಲದೆ, ಈ ಪೈಕಿ ಮೂರು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಅಲ್ಲದೆ, ಮೊದಲರ್ಧದಲ್ಲೂ ಸೋಂಕು ನಿಯಂತ್ರಣದಲ್ಲೇ ಸಾಗಿ ಜೂನ್‌ 25ಕ್ಕೆ ಸೋಂಕು ಆರಂಭವಾದ ಮೂರೂವರೆ ತಿಂಗಳ ಬಳಿಕವೂ ಕೇವಲ 2,182 ಮಂದಿಗೆ ಮಾತ್ರ ಸೋಂಕು ಉಂಟಾಗಿ 44 ಸಾವು ವರದಿಯಾಗಿತ್ತು.

PFIನಿಂದ 1269 ಕೋವಿಡ್‌ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ ...

ಆದರೆ, ಲಾಕ್‌ಡೌನ್‌ ಸಡಿಲಿಕೆ ಬಳಿಕ ಏಕಾಏಕಿ ಸೋಂಕು ವೇಗ ಪಡೆದಿದ್ದು ಲಾಕ್‌ಡೌನ್‌ನ ಆರು ತಿಂಗಳ ದ್ವಿತೀಯ ಅರ್ಧದಲ್ಲಿ (3 ತಿಂಗಳಲ್ಲಿ) ಬರೋಬ್ಬರಿ 5.46 ಲಕ್ಷ ಮಂದಿಗೆ ಸೋಂಕು ಹರಡಿದೆ. ಬರೋಬ್ಬರಿ 8,287 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರದ ವೇಳೆಗೆ ಒಟ್ಟು 5.48 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 8,331 ಮಂದಿ ಮಹಾಮಾರಿಯಿಂದ ಜೀವ ಕಳೆದುಕೊಂಡಿದ್ದಾರೆ.

ಸೋಂಕು ಹಾಗೂ ಸಾವಿನ ಅಬ್ಬರ ತಾರಕಕ್ಕೇರಿದ್ದರೂ ಸರ್ಕಾರ ಹಾಗೂ ಸಾರ್ವಜನಿಕರಿಬ್ಬರೂ ಮೊದಲಿನ ಭಯವಿಲ್ಲದೆ ಮೈಮರೆತಿದ್ದಾರೆ. ಹೀಗಾಗಿ ಸೋಂಕು ಇನ್ನೂ ಭೀಕರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ದೇಶದ ಮೊದಲ ಕೊರೋನಾ ಬಲಿ ರಾಜ್ಯದಲ್ಲಿ:

ರಾಜ್ಯದಲ್ಲಿ ಮಾ.9ರಂದು ಮೊದಲ ಸೋಂಕು ವರದಿಯಾಗಿತ್ತು. ಅಲ್ಲದೆ, ಮಾ.12ಕ್ಕೆ ಮೊದಲ ಕೊರೋನಾ ಸಾವು ದೃಢಪಡುವ ಮೂಲಕ ದೇಶದಲ್ಲೇ ಮೊದಲ ಕೊರೋನಾ ಸಾವು ದಾಖಲಾಗಿತ್ತು. ಬಳಿಕ ಮಾ.25ರಂದು ಲಾಕ್‌ಡೌನ್‌ ಜಾರಿಯಾಗಿ ನಿತ್ಯ ಬೆರಳೆಣಿಕೆ ಪ್ರಕರಣಗಳು ಮಾತ್ರವೇ ದಾಖಲಾಗುತ್ತಾ ಸೋಂಕು ನಿಯಂತ್ರಣದಲ್ಲೇ ಸಾಗಿತ್ತು. ಬಹುತೇಕ ಲಾಕ್ಡೌನ್‌ ಅಂತ್ಯದ ವೇಳೆಗೆ ಸೋಂಕು ಶೂನ್ಯಕ್ಕೆ ಬರಲಿದೆ ಎಂದೇ ಎಲ್ಲರೂ ನಂಬಿದ್ದರು.

ಆದರೆ, ಲಾಕ್‌ಡೌನ್‌ ಸಡಿಲಿಕೆ ಬಳಿಕ ಚಿತ್ರಣವೇ ಬದಲಾಗಿ ಕೊರೋನಾ ರಣಕೇಕೆ ಹಾಕಲು ಆರಂಭಿಸಿದೆ. ಮಾ.24ಕ್ಕೆ ಕೇವಲ 41 ಮಂದಿಗೆ ಉಂಟಾಗಿದ್ದ ಸೋಂಕು ಬಳಿಕ ನಂಜನಗೂಡಿನ ಔಷಧ ಕಾರ್ಖಾನೆ, ತಬ್ಲೀಘಿ ಜಮಾತ್‌ ಸದಸ್ಯರ ಕಾರಣದಿಂದ ಏರಿಕೆಯಾಯಿತು. ಬಳಿಕ ಅಂತರ್‌ರಾಜ್ಯಕ್ಕೆ ವಲಸೆ ಹೋಗಿದ್ದವರು ವಾಪಸು ಬರುತ್ತಿದ್ದಂತೆ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ದೃಢಪಡುತ್ತ ಸೋಂಕು ನಾಗಾಲೋಟಕ್ಕೆ ಹೋಗಿದೆ. ಜೂನ್‌ವರೆಗೆ ಸೋಂಕಿನಲ್ಲಿ 13 ನೇ ಹಾಗೂ ಸಾವಿನಲ್ಲಿ 10ನೇ ಸ್ಥಾನದಲ್ಲಿದ್ದ ರಾಜ್ಯವು ಈ ಮೂಲಕ ದೇಶದಲ್ಲೇ ನಾಲ್ಕನೇ ಸ್ಥಾನಕ್ಕೆ ಜಿಗಿದು ಆತಂಕ ಸೃಷ್ಟಿಸಿದೆ. ಅಲ್ಲದೆ ಸಕ್ರಿಯ ಪ್ರಕರಣಗಳಲ್ಲಿ ದೇಶಕ್ಕೇ ಎರಡನೇ ಸ್ಥಾನದಲ್ಲಿದೆ.

6 ತಿಂಗಳ ಹಿಂದಿನ ಸ್ಥಿತಿಗತಿ (ಲಾಕ್‌ಡೌನ್‌ನ ಹಿಂದಿನ ದಿನ ಮಾ.24ಕ್ಕೆ)

ಸೆ.24ರಂದು ವರದಿಯಾದ ಪ್ರಕರಣ : 8

ಒಟ್ಟು ಪ್ರಕರಣ: 41

ಸಕ್ರಿಯ ಪ್ರಕರಣ: 37

ಬಿಡುಗಡೆ- 3

ಸಾವು- 1

ಕ್ವಾರಂಟೈನ್‌ನಲ್ಲಿದ್ದವರು: 197

ಲಾಕ್‌ಡೌನ್‌ನ ಆರು ತಿಂಗಳ ಬಳಿಕ ಸೆ.24ಕ್ಕೆ

ಸೆ.24ರ ದಿನದ ಪ್ರಕರಣ: 7,710

ಒಟ್ಟು ಪ್ರಕರಣ : 5.48 ಲಕ್ಷ

ಒಟ್ಟು ಸಕ್ರಿಯ ಪ್ರಕರಣ: 95,549

ಒಟ್ಟು ಬಿಡುಗಡೆ: 4.44 ಲಕ್ಷ

ಒಟ್ಟು ಸಾವು: 8,331

ಕ್ವಾರಂಟೈನ್‌ನಲ್ಲಿರುವವರು: 4.83 ಲಕ್ಷ

Follow Us:
Download App:
  • android
  • ios