ಕೋವಿಡ್ ನಿಂದ ಮೃತಪಟ್ಟಆರು ಜನ ಪತ್ರಕರ್ತರ ಕುಟುಂಬಕ್ಕೆ ತಲಾ ಐದು ಲಕ್ಷ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿದ್ದಾರೆ.
ಬೆಂಗಳೂರು (ಆ.22) : ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಆರು ಜನ ಪತ್ರಕರ್ತರ ಕುಟುಂಬಕ್ಕೆ ತಲಾ ಐದು ಲಕ್ಷ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗದ ಮನವಿಗೆ ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ ಪರಿಹಾರ ಮಂಜೂರು ಮಾಡಿದ್ದಾರೆ.
ಬೆಂಗಳೂರು: ಲಕ್ಷದ ಅಂಚಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ.
ಪತ್ರಕರ್ತರಾದ ಸೋಮಶೇಖರ್ ಯಡವಟ್ಟಿ, ವಿ.ಸಿ.ಹಿರೇಮಠ, ಕೆ.ಎಂ.ಹಾಲಪ್ಪ, ಪರ್ವತಯ್ಯಸ್ವಾಮಿ, ಎಸ್.ಎಚ್.ಜಯಣ್ಣ, ಬಿ.ಎಂ.ತ್ರಿಮೂರ್ತಿ ಅವರ ಕುಟುಂಬಕ್ಕೆ ಈ ಸೌಲಭ್ಯ ಲಭ್ಯವಾಗಲಿದೆ.
