Chitradurga: ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಕಲುಷಿತ‌ ನೀರು‌ ಸೇವನೆಯಿಂದಾಗಿ ದುರಂತದಲ್ಲಿ ಸರಣಿ ಸಾವುಗಳು ನಿಲ್ಲೋ ಲಕ್ಷಣ ಕಾಣ್ತಿಲ್ಲ. ಈವರೆಗೆ ಅಸ್ವಸ್ಥರಾಗಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೀಗಾಗಿ  ಪ್ರಕರಣದ ಎಫ್ ಎಸ್ ಎಲ್ ವರದಿಯನ್ನು ಮತ್ತೊಮ್ಮೆ ಮಾಡಿಸಬೇಕೆಂಬ ಆಗ್ರಹ ಕಾವಡಿಗರಹಟ್ಟಿಯಲ್ಲಿ ಕೇಳಿ ಬಂದಿದೆ. 

5th death in chitradurga due to consumption of contaminated water gvd

ಚಿತ್ರದುರ್ಗ (ಆ.04): ಕಲುಷಿತ‌ ನೀರು‌ ಸೇವನೆಯಿಂದಾಗಿ ದುರಂತದಲ್ಲಿ ಸರಣಿ ಸಾವುಗಳು ನಿಲ್ಲೋ ಲಕ್ಷಣ ಕಾಣ್ತಿಲ್ಲ. ಈವರೆಗೆ ಅಸ್ವಸ್ಥರಾಗಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೀಗಾಗಿ  ಪ್ರಕರಣದ ಎಫ್ ಎಸ್ ಎಲ್ ವರದಿಯನ್ನು ಮತ್ತೊಮ್ಮೆ ಮಾಡಿಸಬೇಕೆಂಬ ಆಗ್ರಹ ಕಾವಡಿಗರಹಟ್ಟಿಯಲ್ಲಿ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ‌‌‌‌‌‌‌‌‌. ನಿವಾಸಿಗಳಲ್ಲಿ ನಿಲ್ಲದ ಆತಂಕ. ಬಡಾವಣೆಯಲ್ಲಿ ನಿರ್ಮಾಣವಾದ ತಾತ್ಕಾಲಿಕ ಆರೋಗ್ಯ ಕೇಂದ್ರ. ನಿವಾಸಿಗಳ ಮನೆ ಬಾಗಿಲಿಗೆ ಬೀಗ. ಇವು ಚಿತ್ರದುರ್ಗದ ಕಾವಾಡಿಗಹಟ್ಟಿಯಲ್ಲಿ ಕಂಡು ಬಂದ ದೃಶ್ಯಗಳು. 

ಹೌದು ಕಳೆದ ನಾಲ್ಕು ದಿನಗಳ ಹಿಂದೆ ಚಿತ್ರದುರ್ಗದ ಕಾವಾಡಿಗರಹಟ್ಟಿಯಲ್ಲಿ ನಡೆದ ಕಲುಷಿತ ನೀರು ಸೇವನೆ ದುರಂತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿದೆ. 148ಕ್ಕು ಅಧಿಕ‌ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಹೀಗಾಗಿ  ಕಾವಡಿಗರಟ್ಟಿ ಜನರಲ್ಲಿ ಮತ್ತಷ್ಡು ಆತಂಕ ಹೆಚ್ಚಿಸಿದೆ. ಹೀಗಾಗಿ ನಿನ್ನೆ ಬಂದಿರುವ ಎಫ್ ಎಸ್ ಎಲ್ ವರದಿಯನ್ನ ಇಲ್ಲಿನ ನಿವಾಸಿಗಳು ನಂಬಲಾಗದ ಸ್ಥಿತಿಯಲ್ಲಿದ್ದೂ, ನಮ್ಮ ಕಾಲೋನಿಗೆ ಮಾತ್ರ ಕಾಲರ ಬರಲು ಹೇಗೆ ಸಾದ್ಯವೆಂದು ಆಕ್ರೋಶ ಹೊರ ಹಾಕಿದ್ದಾರೆ. ಇದು ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಬಾರಿ ತಲೆನೋವಾಗಿ ಪರಿಣಮಿಸಿದೆ.

ಉತ್ತರ ಕನ್ನಡ: ಜಿಲ್ಲಾ ಸರ್ಜನ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ಮಂಕಾಳು ವೈದ್ಯ

ಹೀಗಾಗಿ ಕಂದಾಯ ಇಲಾಖೆ, ಸಮಾಜಕಲ್ಯಾಣ,ನಗರಸಭೆ ಹಾಗು ಆರೋಗ್ಯ ಇಲಾಖೆ ಅಧಿಕಾರಿಗಳು  ಸ್ಥಳದಲ್ಲೇ‌ ಬೀಡು ಬಿಟ್ಟಿದ್ದು, ಬಡಾವಣೆಯಲ್ಲಿ ಸ್ವಚ್ಛತೆ, ಚಿಕಿತ್ಸೆ ಹಾಗೂ ಆಹಾರ ಸೌಲಭ್ಯ‌ ಕಲ್ಪಿಸಿದ್ದಾರೆ. ಇನ್ನು ಈ ದುರಂತ ನಡೆದು ನಾಲ್ಕು ದಿನ ಕಳೆದರೂ, ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರ್ತಿರುವವರ ಸಂಖ್ಯೆ ಕಡಿಮೆಯಾಗ್ತಿಲ್ಲ. ಅಲ್ಲದೇ ಮತ್ತಿಬ್ಬರು ಸಹ ತೀವ್ರ ಗಂಬೀರವಾಗಿ ಅಸ್ವಸ್ಥರಾಗಿದ್ದು, ಸಾವುಬದುಕಿನ ಮದ್ಯೆ ಹೋರಾಡ್ತಿದ್ದಾರೆ.ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ  ಹೆಚ್.ಆಂಜನೇಯ ಹಾಗು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದೂ, ಈ ಘಟನೆಯ  ಪರಿಸ್ಥಿತಿಯನ್ನು ವಿಶ್ಲೇಷಿಸೋದು ಕಷ್ಟಸಾದ್ಯ ಎನಿಸಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

ಹೀಗಾಗಿ ಈ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ‌ ಸಿದ್ದರಾಮಯ್ಯ ಹಾಗು ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದೇವೆ.ಆದರೆ ಪ್ರಕರಣ‌ ತೀವ್ರ ಗಂಭೀರ‌ಸ್ವರೂಪ‌ ಪಡೆದಿರುವ ಹಿನ್ನಲೆಯಲ್ಲಿ ಈ ಪ್ರಕರಣದ  ಎಫ್ ಎಸ್ ಎಲ್ ಟೆಸ್ಟನ್ನು ಮತ್ತೊಮ್ಮೆ ಮಾಡಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಕಾವಾಡಿಗರಹಟ್ಟಿಯಲ್ಲಿ  ಅಸ್ವಸ್ಥರಾಗಿ ಆಸ್ಪತ್ರೆ ಸೇರ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮತ್ತಿಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಪ್ರತಿಯೊಂದು ಮನೆಯ ಸದಸ್ಯರು ಆಸ್ಪತ್ರೆಯಲ್ಲಿದ್ದು, ಬಹುತೇಕ ಮನೆಗಳಿಗೆ ಬೀಗ ಹಾಕಿದ್ದಾರೆ. ಹಾಗೆಯೇ ವರದಿ ಬಳಿಕವೂ ಸರಣಿ ಸಾವು  ಮುಂದುವರೆದ ಪರಿಣಾಮ ಕಾವಾಡಿಗರಟ್ಟಿಯಲ್ಲಿ ಬಾರಿ ಆತಂಕ ಮನೆ ಮಾಡಿದೆ‌. ಈ ಬಗ್ಗೆ ಸರ್ಕಾರ ಯಾವ ನಡೆ ಅನುಸರಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios